ಬೆಂಗಳೂರು: ಕೊರೋನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದವರ ಬಂಧನ

ಸ್ವಾಬ್ ಪಡೆಯದೆ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ವಾಬ್ ಪಡೆಯದೆ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಖೇಶ್ ಸಿಂಗ್ (25) ಹಾಗೂ ನಾಗರಾಜು (39) ಬಂಧಿತ ಆರೋಪಿಗಳು.

ಬಂಧಿತರಿಂದ ಐದು ನೆಗೆಟಿವ್ ರಿಪೋರ್ಟ್ ಇರುವ ಆರ್ ಟಿ ಪಿಸಿಆರ್ ವರದಿಗಳು ಮತ್ತು ಎರಡು ಮೊಬೈಲ್​ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಗರದ ಸರ್ಜಾಪುರ ಮುಖ್ಯ ರಸ್ತೆ ಬಳಿ ಇಬ್ಬರೂ ವ್ಯಕ್ತಿಗಳು ಆರ್ ಟಿ ಪಿಸಿ ಆರ್ ಪರೀಕ್ಷಾ ವರದಿ ಬೇಕಾದವರಿಗೆ ಯಾವುದೇ ಸ್ವಾಬ್ ಪಡೆಯದೇ ಆಧಾರ್ ಕಾರ್ಡ್, ಹಣ ಪಡೆದುಕೊಂಡು ನೆಗೆಟೀವ್ ರಿಪೋರ್ಟ್ ನೀಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ನೆಗೆಟಿವ್ ವರದಿ ಬೇಕಾದವರಿಂದ 700 ರೂ. ಹಣ ಪಡೆಯುತ್ತಿದ್ದರು. ಹಣ ಪಡೆದವರಿಂದ ಯಾವುದೇ ರೀತಿ ಸ್ವ್ಯಾಬ್​ ಸಂಗ್ರಹಿಸದೇ, ಆರ್​ಟಿಪಿಸಿಆರ್ ನೆಗೆಟಿವ್ ಎಂದು ವರದಿ ನೀಡುತ್ತಿದ್ದರು.

ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಕೆಪಿ ರವಿಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com