ರಾಜ್ಯದಲ್ಲಿ ಕೊರೋನಾ ಏರಿಕೆ: ದಕ್ಷಿಣ ಕನ್ನಡದಲ್ಲಿ ನಿನ್ನೆ ಬೆಂಗಳೂರಿಗಿಂತ ಹೆಚ್ಚು ಕೇಸ್ ಪತ್ತೆ

3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರೆದಿದೆ. ರಾಜ್ಯದಲ್ಲಿ ನಿನ್ನೆ 1875 ಹೊಸ ಕೇಸ್'ಗಳು ಪತ್ತೆಯಾಗಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಈ ವರೆಗೆ ಕೋವಿಡ್ ನಲ್ಲಿ ನಂ,1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡ ಜಿಲ್ಲೆಯು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ.
ಲಸಿಕೆ ಪಡೆದುಕೊಳ್ಳುತ್ತಿರುವ ಮಹಿಳೆ
ಲಸಿಕೆ ಪಡೆದುಕೊಳ್ಳುತ್ತಿರುವ ಮಹಿಳೆ

ಬೆಂಗಳೂರು; 3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರೆದಿದೆ. ರಾಜ್ಯದಲ್ಲಿ ನಿನ್ನೆ 1875 ಹೊಸ ಕೇಸ್'ಗಳು ಪತ್ತೆಯಾಗಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಈ ವರೆಗೆ ಕೋವಿಡ್ ನಲ್ಲಿ ನಂ,1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡ ಜಿಲ್ಲೆಯು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ. 

ಹೊಸ ಸೋಂಕಿನ ಹೆಚ್ಚಳದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 24,144ಕ್ಕೆ ಏರಿಕೆಯಾಗಿದೆ. ಇದುವರೆಗೂ 29,06,999 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಅವರಲ್ಲಿ 28,46,244 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 36587ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಶೇ 1.20ರಷ್ಟು ಹೊಸ ಪ್ರಕರಣಗಳು ಖಚಿತವಾಗಿವೆ. ಮರಣ ಪ್ರಮಾಣ ಶೇ 1.33 ದಾಖಲಾಗಿದೆ.

ಬೆಂಗಳೂರು ನಗರದಲ್ಲಿ 409 ಮಂದಿಗೆ ಸೋಂಕು ತಗುಲಿದೆ. 377 ಜನರು ಆಸ್ಪತ್ರೆಯಿಂದ ನಗರದಲ್ಲಿ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,553 ಇದೆ. ಎಂಟು ಮಂದಿ ಮೃತಪಟ್ಟಿದ್ದಾರೆ.

ನಗರದಲ್ಲಿ ನಿನ್ನೆ 409 ಹೊಸ ಕೇಸ್ ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 410 ಕೋವಿಡ್ ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ, ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಪಟ್ಟಿಯಲ್ಲಿ ಬೆಂಗಳೂರು ಬಳಿಕದ ಸ್ಥಾನವನ್ನು ದಕ್ಷಿಣ ಕನ್ನಡ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ 8,553 ಸಕ್ರಿಯ ಪ್ರಕರಣಗಳಿದ್ದರೆ, ಕರಾವಳಿ ಜಿಲ್ಲೆಯಲ್ಲಿ 2,943 ಸಕ್ರಿಯ ಪ್ರಕರಣಗಳಿವೆ. 

ಜುಲೈ.27ರವರೆಗೂ ಇಳಿಮುಖವಾಗಿ 8,047ಕ್ಕೆ ತಲುಪಿದ್ದ ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾನುವಾರ 8,553ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com