ಬಾಗಲಕೋಟೆ: ರಸ್ತೆ ಸಂಪರ್ಕವಿಲ್ಲ, ಪ್ರವಾಹ ಪೀಡಿತ ಗ್ರಾಮಗಳ ಜನರು ನಿರಾಶ್ರಿತ ಕೇಂದ್ರದಲ್ಲೇ ಉಳಿಯಬೇಕಾದ ಪರಿಸ್ಥಿತಿ!
ಕೃಷ್ಣ ನದಿ ತೀರದಲ್ಲಿ ನೀರಿನ ಮಟ್ಟ ತಗ್ಗಿದರೂ ಕೂಡ ಸುತ್ತಮುತ್ತಲ ನಿವಾಸಿಗಳಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಜಮಖಂಡಿಯಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿರುವುದರಿಂದ ಜನರು ನಿರಾಶ್ರಿತ ತಾಣದಲ್ಲಿ ವಾಸ ಮುಂದುವರಿಸಿದ್ದಾರೆ.
Published: 04th August 2021 01:34 PM | Last Updated: 04th August 2021 06:06 PM | A+A A-

ಯಡವಾಡ-ಮುಧೋಳ ರಸ್ತೆ ಪ್ರವಾಹದಿಂದಾಗಿ ಸಂಪೂರ್ಣ ಹಾಳಾಗಿವುದು
ಬಾಗಲಕೋಟೆ: ಕೃಷ್ಣ ನದಿ ತೀರದಲ್ಲಿ ನೀರಿನ ಮಟ್ಟ ತಗ್ಗಿದರೂ ಕೂಡ ಸುತ್ತಮುತ್ತಲ ನಿವಾಸಿಗಳಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಜಮಖಂಡಿಯಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿರುವುದರಿಂದ ಜನರು ನಿರಾಶ್ರಿತ ತಾಣದಲ್ಲಿ ವಾಸ ಮುಂದುವರಿಸಿದ್ದಾರೆ.
ಜಮಖಂಡಿ ತಾಲ್ಲೂಕಿನಲ್ಲಿ ಸುಮಾರು 28 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಇಂದಿನವರೆಗೆ ಎಲ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 22 ಗ್ರಾಮಗಳಿಗೆ ಪ್ರವಾಹದಿಂದ ತೊಂದರೆಯಾಗಿದೆ. ಕಳೆದ 10 ದಿನಗಳಿಂದ ಈ ಕೇಂದ್ರಗಳಲ್ಲಿ 9,500ಕ್ಕೂ ಹೆಚ್ಚು ಮಂದಿಗೆ ಆಶ್ರಯ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿರುವ ನಿರಾಶ್ರಿತ ಕೇಂದ್ರಗಳು ರಸ್ತೆಗಳು ದುರಸ್ತಿಗೊಳ್ಳುವವರೆಗೆ ತೆರೆದಿರುತ್ತವೆ ಎಂದು ಜಿಲ್ಲಾಡಳಿತ ಹೇಳಿದೆ.
ಚಿಕ್ಕಪಡಸಲಗಿ ಅಣೆಕಟ್ಟಿನಲ್ಲಿ ಭಾರೀ ವಾಹನಗಳ ಓಡಾಟವನ್ನು ಪ್ರವಾಹಕ್ಕೆ ಇಲ್ಲಿ ಭಾಗಶಃ ಹಾನಿಯಾಗಿರುವುದರಿಂದ ನಿರ್ಬಂಧಿಸಲಾಗಿದೆ. ಯಡ್ವಾಡ್-ಮುಧೋಳ್ ಸೇರಿದಂತೆ ಕೆಲವು ಸೇತುವೆಗಳಿಗೆ ಹಾನಿಯಾಗಿವೆ. ಪಾದಚಾರಿಗಳು ಮತ್ತು ಹಗುರ ದ್ವಿಚಕ್ರ ವಾಹನಗಳ ಓಡಾಟಕ್ಕೆ ಮಾತ್ರ ಇಲ್ಲಿ ಅವಕಾಶವಿದೆ.
ಜಮಖಂಡಿ ತಹಶಿಲ್ದಾರ್ ಪ್ರಶಾಂತ್ ಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಕೃಷ್ಣ ನದಿ ತೀರದಲ್ಲಿರುವ ಕೆಲವು ಗ್ರಾಮಗಳಲ್ಲಿ ಇನ್ನೂ ನೀರಿನಿಂದ ತುಂಬಿವೆ. ಇಲ್ಲಿನ ಗ್ರಾಮಸ್ಥರನ್ನು ನಿರಾಶ್ರಿತ ಕೇಂದ್ರಗಳಲ್ಲಿ ಇರಿಸಲಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿವೆ. ಈ ಕೇಂದ್ರಗಳಲ್ಲಿರುವ ಸುಮಾರು ಶೇಕಡಾ 50ರಷ್ಟು ಮಂದಿಯನ್ನು ಇಂದು ಸ್ಥಳಾಂತರಗೊಳಿಸಲಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.
ಹಿಪ್ಪರಗಿ ಅಣೆಕಟ್ಟಿನ ಒಳ ಹರಿವು 2.3 ಲಕ್ಷ ಕ್ಯೂಸೆಕ್ಸ್ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಘಟಪ್ರಭಾ ನದಿಯಲ್ಲಿ ಒಳಹರಿವು 21 ಸಾವಿರದ 743 ಕ್ಯೂಸೆಕ್ಸ್ ಗೆ ಇಳಿಕೆಯಾಗಿದೆ. ವಾರದ ಹಿಂದೆ ಇದು ಸುಮಾರು 1 ಲಕ್ಷ ಕ್ಯೂಸೆಕ್ಸ್ ಇದ್ದವು. ಮಲಪ್ರಭಾ ನದಿಯಲ್ಲಿ ಒಳಹರಿವು 1 ಸಾವಿರದ 694 ಕ್ಯೂಸೆಕ್ಸ್ ಇದೆ ಎಂದು ಜಿಲ್ಲಾಡಳಿತದ ಅಂಕಿಅಂಶ ಹೇಳುತ್ತದೆ ಎಂದರು.