75ನೇ ಸ್ವಾತಂತ್ರ್ಯೋತ್ಸವ ಆಚರಿಸಲು ಸಜ್ಜಾಗಿದೆ ಬ್ರಿಟಿಷರ ಬಾವುಟ ಕೆಳಗಿಳಿಸಿ, ತ್ರಿವರ್ಣ ದ್ವಜ ಹಾರಿಸಿದ ಮೊಟ್ಟ ಮೊದಲ ಗ್ರಾಮ!

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿದೆ. ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಏರಿಸಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ.
ಬ್ರಿಟಿಷ್ ಖಜಾನೆಯಿದ್ದ ಸ್ಥಳ
ಬ್ರಿಟಿಷ್ ಖಜಾನೆಯಿದ್ದ ಸ್ಥಳ

ಮಂಗಳೂರು: ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿದೆ. ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಏರಿಸಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ.

ಮಾರ್ಚ್ 30 1837 ರಲ್ಲಿ ಕೃಷಿ ಉತ್ಪನ್ನಗಳ ಮೇಲೆ ಬ್ರಿಟಿಷರು ಅಧಿಕ ಸುಂಕ ವಿಧಿಸಿದ್ದನ್ನು ವಿರೋಧಿಸಿ ದಂಗೆ ಎದ್ದರು. ಬ್ರಿಟಿಷರ ಖಜಾನೆಯನ್ನು ಸೀಜ್ ಮಾಡಿ, ಆ ಸ್ಥಳದಲ್ಲಿದ್ದ ಬ್ರಿಟಿಷರ ಭಾವುಟವನ್ನು ಕೆಳಗಳಿಸಿದರು.

ದೀರ್ಘಕಾಲದವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಐತಿಹಾಸಿಕ ಸ್ಥಳವು ಆಗಸ್ಟ್ 15 ಧ್ವಜಾರೋಹಣಕ್ಕೆ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆ ನಡೆಸಲು ಸಜ್ಜಾಗುತ್ತಿದೆ.  1804 ರಲ್ಲಿ  ಸಣ್ಣ ಹೆಂಚಿನ ಮೇಲ್ಛಾವಣಿ ನಿರ್ಮಿಸಲಾಗಿತ್ತು, ಇದರಲ್ಲಿ ಬ್ರಿಟಿಷ್ ಖಜಾನೆಯನ್ನು ಹೊಂದಿತ್ತು, ಈಗಲೂ ಹಳ್ಳಿಯ ಶಾಲೆಯ ಕಡೆಗಿರುವ ಸುಮಾರು ಒಂದು ಎಕರೆ ಭೂಮಿಯಲ್ಲಿದೆ.

ಐತಿಹಾಸಿಕ ಸ್ಥಳವನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ಧಪಡಿಸುವ ಕೆಲಸವನ್ನು ಖಾಸಗಿ ಸಲಹೆಗಾರರಿಗೆ ವಹಿಸಲಾಗಿದೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ತಿಳಿಸಿದ್ದಾರೆ.

ಮೊಟ್ಟ ಮೊದಲು ದಕ್ಷಿಣ ಕೆನರಾ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹೊತ್ತಿಸಿತು. ಕೊಡಗಿನ ಅರಸನ ಆಳ್ವಿಕೆಯಲ್ಲಿದ್ದ ಸುಳ್ಯ ಮತ್ತು ಪುತ್ತೂರನ್ನು ಕೊಡಗಿನಿಂದ ಬೇರ್ಪಡಿಸಿ ಬ್ರಿಟಿಷರು ದಕ್ಷಿಣ ಕೆನರಾದ ಅಡಿಯಲ್ಲಿ ತಂದರು. ಬ್ರಿಟಿಷ್ ಆಳ್ವಿಕೆಯಲ್ಲಿ, ರೈತರು ತಮ್ಮ ಕೃಷಿ ಉತ್ಪನ್ನಗಳ ಆರನೆಯ ಒಂದು ಭಾಗವನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು ಆದರೆ ಅದು ರಾಜನ ಅಡಿಯಲ್ಲಿ ಕೇವಲ ಹತ್ತನೇ ಒಂದು ಭಾಗವಾಗಿತ್ತು. ಇದು ಅವರನ್ನು ದಂಗೆಗೆ ಕಾರಣವಾಗಿತ್ತು ನಿವೃತ್ತ ಅರ್ಥಶಾಸ್ತ್ರರ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲಾ ತಮ್ಮ ಕಾದಂಬರಿಯಲ್ಲಿ ಬರೆದಿದ್ದಾರೆ.

ಕೆದಂಬಳ್ಳಿ ರಾಮಗೌಡರ ನೇತೃತ್ವದಲ್ಲಿ ಸುಳ್ಯದ ಸುಮಾರು 1,200 ರೈತರು ಬೆಳ್ಳಾರೆಯಲ್ಲಿ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು ಮತ್ತು ಬ್ರಿಟಿಷ್ ಧ್ವಜವನ್ನು ಇಳಿಸಿದ ನಂತರ ಕೊಡಗು ರಾಜವಂಶದ ವಿಜಯ ಧ್ವಜವನ್ನು ಹಾರಿಸಿದರು. 

ನಂತರ ಮಂಗಳೂರಿಗೆ ತೆರಳಿದ ರೈತರು ಮತ್ತು ಬಾವುಟಗುಡ್ಡೆಯಲ್ಲಿ ಅದೇ ಕಾರ್ಯವನ್ನು ಪುನರಾವರ್ತಿಸಿದರು. ಅವರು ಮಂಗಳೂರಿಗೆ ತಲುಪುವ ಹೊತ್ತಿಗೆ 5,000 ಜನ ಸೇರಿದ್ದರು, ಇದರಿಂದಾಗಿ ಬ್ರಿಟಿಷರು ಜೀವ ಭಯದಿಂದ ತಪ್ಪಿಸಿಕೊಳ್ಳುವಂತೆ ಮಾಡಿದರು. ಆದಾಗ್ಯೂ, 13 ದಿನಗಳಲ್ಲಿ, ಬ್ರಿಟಿಷರು ತಲಚೇರಿ ಮತ್ತು ಮುಂಬೈನ ಸೈನ್ಯದೊಂದಿಗೆ  
ಮರಳಿ ಬಂದು ದಂಗೆಯನ್ನು ಹತ್ತಿಕ್ಕಿ, ನಂತರ ರೈತ ನಾಯಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು ಎಂದು ಶಿಶಿಲಾ ಬರೆದಿದ್ದಾರೆ.

1998 ರಲ್ಲಿ ಅಂದರೆ ಭಾರತದ 50 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಹಲವಾರು ಸಂಘಟನೆಗಳು ಸುಳ್ಯದಿಂದ ಮಂಗಳೂರಿಗೆ ಪಾದಯಾತ್ರೆ ನಡೆಸಿ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಗಮನವನ್ನು ಸೆಳೆದರೂ ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com