ಹಿರಿಯ ಇಸ್ರೋ ವಿಜ್ಞಾನಿ ಅರವಮುದನ್ ನಿಧನ

ಹಿರಿಯ ಬಾಹ್ಯಾಕಾಶ ವಿಜ್ಞಾನಿ ರಾಮಭದ್ರನ್ ಅರವಮುದನ್ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ನಿಧನರಾದರು.  1962 ರಲ್ಲಿ  ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ ಎಂದು ಕರೆಯಲ್ಪಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಸೇರ್ಪಡೆಯಾದ ಮೊದಲಿಗರಾಗಿದ್ದಾರೆ.
ಹಿರಿಯ ವಿಜ್ಞಾನಿ ಅರವಮುದನ್
ಹಿರಿಯ ವಿಜ್ಞಾನಿ ಅರವಮುದನ್

ಬೆಂಗಳೂರು: ಹಿರಿಯ ಬಾಹ್ಯಾಕಾಶ ವಿಜ್ಞಾನಿ ರಾಮಭದ್ರನ್ ಅರವಮುದನ್ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ನಿಧನರಾದರು.  1962 ರಲ್ಲಿ  ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ ಎಂದು ಕರೆಯಲ್ಪಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಸೇರ್ಪಡೆಯಾದ ಮೊದಲಿಗರಾಗಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. 

84 ವರ್ಷದ ಅರವಮುದನ್ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಮತ್ತು ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ನಂತರ 1997ರಲ್ಲಿ ಇಸ್ರೋದಿಂದ ನಿವೃತ್ತರಾಗಿದ್ದರು. ಅವರು ಕ್ಷಿಪಣಿ ಮನುಷ್ಯ ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಉಪಗ್ರಹ ಟ್ರ್ಯಾಕಿಂಗ್ ಮತ್ತು ಟೆಲಿಮೆಟ್ರಿಯಲ್ಲಿ ಪರಿಣತಿಗೆ ಅವರು ಹೆಸರುವಾಸಿಯಾಗಿದ್ದರು.

ಅರವಮುದನ್ ಆರಂಭಿಕವಾಗಿ ಪರಮಾಣು ಇಂಧನ ಇಲಾಖೆಯಿಂದ ವೃತ್ತಿಯನ್ನು ಆರಂಭಿಸಿದ್ದರು. ಆದರೆ, ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಹೆಸರಾಗಿದ್ದ ಡಾ. ವಿಕ್ರಮ್ ಸಾರಾಬಾಯಿ ಅವರ ಅಡಿಯಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದರು. ಉನ್ನತ ವಾತಾವರಣದ ಸಂಶೋಧನೆಗಾಗಿ ತಿರುವನಂತಪುರಂನಲ್ಲಿ ತುಂಬಾ ಈಕ್ವಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್ (TERLS) ಸ್ಥಾಪಿಸಲು ಯೋಜನೆಗಳನ್ನು ರೂಪಿಸುತ್ತಿದ್ದ ಸಮಯದಲ್ಲಿ INCOSPAR ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com