ಬೆಂಗಳೂರು: ಆಸ್ಪತ್ರೆ ಕಟ್ಟಡದಿಂದ ಜಿಗಿದು ಡಾಕ್ಟರ್ ಆತ್ಮಹತ್ಯೆ: ಕೆಲಸದ ಒತ್ತಡ ಕಾರಣವಿರಬಹುದು - ಪೊಲೀಸರ ಶಂಕೆ

ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 45 ವರ್ಷದ ಸಹ ಪ್ರಾಧ್ಯಾಪಕರೊಬ್ಬರು ಕಟ್ಟಡದ 8ನೇ ಅಂತಸ್ತಿನಿಂದ ಜಿಗಿದು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಕೆಲಸದ ಒತ್ತಡವೇ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 45 ವರ್ಷದ ಸಹ ಪ್ರಾಧ್ಯಾಪಕರೊಬ್ಬರು ಕಟ್ಟಡದ 8ನೇ ಅಂತಸ್ತಿನಿಂದ ಜಿಗಿದು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಕೆಲಸದ ಒತ್ತಡವೇ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಶರೀರಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಬನಶಂಕರಿಯ ನಿವಾಸಿ ಡಾ.ಅಂಬರೀಶ್ ವಿಜಯ್ ರಾಘವ್ ಮೃತಪಟ್ಟ ವೈದ್ಯರಾಗಿದ್ದಾರೆ. ಅವರು ಬುಧವಾರ ಬೆಳಗ್ಗೆ ಎಂದಿನಂತೆ 9-30ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು,  ಸಹೋದೋಗ್ಯಿಗಳ ಜೊತೆಗೆ ಮಾತನಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬೆಳಗ್ಗೆ 11-45ರ ಸುಮಾರಿನಲ್ಲಿ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಕಟ್ಟಡದ ಟೆರೆಸ್ ಮೇಲಿಂದ ಜಿಗಿದಿದ್ದಾರೆ, ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ರಕ್ಷಿಸಲು ಬಂದಿದ್ದಾರೆ. ಆದರೆ, ಅಷ್ಟರಾಗಲೇ ಅವರು ಮೃತಪಟ್ಟಿದ್ದರು. ಕೊನೆಯ ಬಾರಿ ಅವರು ಬೆಳಗ್ಗೆ 10-30ರ ಸುಮಾರಿನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದದ್ದು ಕಂಡುಬಂದಿದೆ. ಇತರ ಕಡೆಗಳಲ್ಲಿ ಸುರಕ್ಷತೆಗಾಗಿ ಕಬ್ಬಿಣದ ಗ್ರೀಲ್ ಗಳಿಂದ ಕವರ್ ಮಾಡಿರುವುದರಿಂದ ಟೆರೇಸ್ ಮೇಲಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಟೆರೆಸ್ ಮೇಲೆ ಹೋಗುವುದನ್ನು ಯಾರು ಕೂಡಾ ನೋಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.ಯಾವುದೇ ತೊಂದರೆಯನ್ನು ನನ್ನೊಂದಿಗೆ ಹಂಚಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ಕೆಲಸದ ಒತ್ತಡ ಹೆಚ್ಚಾಗಿತ್ತು ಎಂದು ಅವರ ಪತ್ನಿ ಹೇಳಿದ್ದಾರೆ.

ಆದಾಗ್ಯೂ, ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ, ಕೆಲಸದ ಒತ್ತಡ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com