'ಇಂದಿರಾ ಕ್ಯಾಂಟೀನ್' ಹೆಸರು 'ಅನ್ನಪೂರ್ಣೇಶ್ವರಿ ಕ್ಯಾಂಟೀನ್'ಎಂದು ಬದಲಾಯಿಸಿ: ಮುಖ್ಯಮಂತ್ರಿಗೆ ಸಿ ಟಿ ರವಿ ಒತ್ತಾಯ 

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಘೋಷಣೆ ಬಗ್ಗೆ ಬಿಜೆಪಿ ಅನುಯಾಯಿಗಳು ಸಂಭ್ರಮಪಟ್ಟರೆ ಕಾಂಗ್ರೆಸ್ ಅನುಯಾಯಿಗಳು ಇದು ರಾಜಕೀಯ ನಡೆ ಎನ್ನುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್

ಬೆಂಗಳೂರು: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಘೋಷಣೆ ಬಗ್ಗೆ ಬಿಜೆಪಿ ಅನುಯಾಯಿಗಳು ಸಂಭ್ರಮಪಟ್ಟರೆ ಕಾಂಗ್ರೆಸ್ ಅನುಯಾಯಿಗಳು ಇದು ರಾಜಕೀಯ ನಡೆ ಎನ್ನುತ್ತಿದ್ದಾರೆ.

ದೇಶದ ಕ್ರೀಡಾಂಗಣಗಳಿಗೆ ಕೂಡ ಕ್ರೀಡಾ ದಿಗ್ಗಜರ ಹೆಸರುಗಳನ್ನಿಡಿ ಎಂದು ಆಗ್ರಹಿಸುತ್ತಿದ್ದಾರೆ.ಈ ಮಧ್ಯೆ ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕದಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.

ಕನ್ನಡಿಗರು ಆಹಾರ ಸೇವಿಸುವಾಗ ಇಂದಿರಾ ಗಾಂದಿಯವರ ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪು ಮಾಡಿಕೊಳ್ಳಬೇಕೆ ಎಂದು ಸಿ ಟಿ ರವಿ ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com