ವೀಕೆಂಡ್ ಕರ್ಫ್ಯೂ: ಗುಲ್ಬರ್ಗ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ 

ಕೋವಿಡ್ 3ನೇ ಅಲೆಯನ್ನು ತಡೆಯಲು ವಾರಾಂತ್ಯ ಕರ್ಫ್ಯೂವನ್ನು ತಂದಿರುವುದರಿಂದ ಶನಿವಾರ ಸೇರಿದಂತೆ ಮೂರು ದಿನಗಳ ಕಾಲ ನಡೆಯಬೇಕಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಮೊದಲ, ಮೂರನೇ ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.
ಗುಲ್ಬರ್ಗ ವಿಶ್ವವಿದ್ಯಾಲಯ
ಗುಲ್ಬರ್ಗ ವಿಶ್ವವಿದ್ಯಾಲಯ

ಗುಲ್ಬರ್ಗ:ಕೋವಿಡ್ 3ನೇ ಅಲೆಯನ್ನು ತಡೆಯಲು ವಾರಾಂತ್ಯ ಕರ್ಫ್ಯೂವನ್ನು ತಂದಿರುವುದರಿಂದ ಶನಿವಾರ ಸೇರಿದಂತೆ ಮೂರು ದಿನಗಳ ಕಾಲ ನಡೆಯಬೇಕಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಮೊದಲ, ಮೂರನೇ ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ಪೂರ್ವ ನಿಗದಿಯಂತೆ ಪರೀಕ್ಷೆ ಇಂದು,8ರಂದು ಮತ್ತು 14ರಂದು ನಡೆಯಬೇಕಿತ್ತು. ಆದರೆ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಿ ಪರೀಕ್ಷೆ ವೇಳಾಪಟ್ಟಿಯ ಕೊನೆ ಪರೀಕ್ಷೆಯ ದಿನಾಂಕ ಅಂದರೆ ಆಗಸ್ಟ್ 27ರ ನಂತರ ನಡೆಸಲಾಗುವುದು.

ಮುಂದೂಡಿದ ಪರೀಕ್ಷೆಗಳ ನಿರ್ದಿಷ್ಟ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು, ಉಳಿದ ಎಲ್ಲಾ ಪರೀಕ್ಷೆಗಳು ಮುಂಚೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಯಾವುದೇ ಬದಲಾವಣೆ ಇಲ್ಲದೆ ನಡೆಯಲಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com