ಗಣಿತ-ವಿಜ್ಞಾನ ಮಾಸ ಪತ್ರಿಕೆ "ಸೂತ್ರ" ಬಿಡುಗಡೆ

ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧ ಕನ್ನಡದ 'ಸೂತ್ರ' ಮಾಸಪತ್ರಿಕೆಯನ್ನು ಆ.07 ರಂದು ನಗರದ ಖಾಸಗಿ ಹೊಟೇಲ್ ನಲ್ಲಿ ಬಿಡುಗಡೆ ಮಾಡಲಾಯಿತು.
ಸೂತ್ರ ಬಿಡುಗಡೆ ಕಾರ್ಯಕ್ರಮ
ಸೂತ್ರ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು: ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧ ಕನ್ನಡದ 'ಸೂತ್ರ' ಮಾಸಪತ್ರಿಕೆಯನ್ನು ಆ.07 ರಂದು ನಗರದ ಖಾಸಗಿ ಹೊಟೇಲ್ ನಲ್ಲಿ ಬಿಡುಗಡೆ ಮಾಡಲಾಯಿತು.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಚ್ಎಸ್ ನಾಗರಾಜ, ಭೂವಿಜ್ಞಾನಿ ಡಾ.ಟಿ.ಆರ್ ಅನಂತರಾಮು, ಕನ್ನಡಪ್ರಭ.ಕಾಂನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ, ಪತ್ರಿಕೆಯ ಸಂಪಾದಕ, ರೋಹಿತ್ ಚಕ್ರತೀರ್ಥ, ಕಿರುತೆರೆ ನಿರ್ದೇಶಕರಾದ ಎನ್.ಎಸ್ ಸೇತುರಾಮ್ ಅವರು ಸೂತ್ರ ಮಾಸ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. 

ಕನ್ನಡದಲ್ಲಿ ಸರಳ ಶೈಲಿಯಲ್ಲಿ ವಿಜ್ಞಾನ-ಗಣಿತ ವಿಷಯಗಳನ್ನು ಜನತೆಗೆ ತಲುಪಿಸುವುದು ಈ ಪತ್ರಿಕೆಯ ಉದ್ದೇಶವಾಗಿದೆ. ಡಾ. ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನ ಈ ಮಾಸಪತ್ರಿಕೆಯನ್ನು ಹೊರತಂದಿದ್ದು,  ಭೂವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕರೂ ಆಗಿರುವ ಡಾ. ಟಿ.ಆರ್. ಅನಂತರಾಮು ಅವರ ಮಾರ್ಗದರ್ಶನ ಈ ಮಾಸಪತ್ರಿಕೆಗೆ ಇದೆ.

ವಿಜ್ಞಾನ-ಗಣಿತ ಕ್ಷೇತ್ರದ ಖ್ಯಾತ ಲೇಖಕ, ಅಂಕಣಕಾರ ರೋಹಿತ್ ಚಕ್ರತೀರ್ಥ ಸೂತ್ರ ಪತ್ರಿಕೆಯ ಸಂಪಾದಕ. ವಿದ್ಯಾರ್ಥಿಗಳಲ್ಲಿ, ವಿಜ್ಞಾನ ಮತ್ತು ಗಣಿತದ ಬಗ್ಗೆ ಆಸಕ್ತಿ ಮೂಡಿಸುವುದು ಪತ್ರಿಕೆಯ ಮುಖ್ಯ ಉದ್ದೇಶವಾಗಿದೆ. 
   
ಕನ್ನಡದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರ ಹೆಸರಿನಲ್ಲಿ, ‘ಡಾ. ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com