ಶೌಚಾಲಯ ಸೌಲಭ್ಯ ದೊರೆಯದೇ, ಶಿವಮೊಗ್ಗದ ಯುವತಿಗೆ ಒತ್ತಡ, ಅಪೌಷ್ಟಿಕತೆ

ಕೋವಿಡ್-19 ಸೃಷ್ಟಿಸಿದ ಲಾಕ್ ಡೌನ್ ಪರಿಣಾಮವಾಗಿ ಹಲವು ಮಂದಿ ಹಲವು ವಿಧದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿವಮೊಗ್ಗದ 7 ನೇ ತರಗತಿ ವಿದ್ಯಾರ್ಥಿನಿಗೆ ಲಾಕ್ ಡೌನ್ ಪರಿಣಾಮದಿಂದ ಒತ್ತಡ, ಅಪೌಷ್ಟಿಕತೆ ಉಂಟಾಗಿದೆ.    
ಶೌಚಾಲಯ (ಸಂಗ್ರಹ ಚಿತ್ರ)
ಶೌಚಾಲಯ (ಸಂಗ್ರಹ ಚಿತ್ರ)

ಶಿವಮೊಗ್ಗ: ಕೋವಿಡ್-19 ಸೃಷ್ಟಿಸಿದ ಲಾಕ್ ಡೌನ್ ಪರಿಣಾಮವಾಗಿ ಹಲವು ಮಂದಿ ಹಲವು ವಿಧದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿವಮೊಗ್ಗದ 7 ನೇ ತರಗತಿ ವಿದ್ಯಾರ್ಥಿನಿಗೆ ಲಾಕ್ ಡೌನ್ ಪರಿಣಾಮದಿಂದ ಒತ್ತಡ, ಅಪೌಷ್ಟಿಕತೆ ಉಂಟಾಗಿದೆ.    

ಒಂದು ವರ್ಷದಿಂದ ಶಾಲೆಗಳು ಲಾಕ್ ಡೌನ್ ನ ಪರಿಣಾಮವಾಗಿ ಮುಚ್ಚಲ್ಪಟ್ಟಿದ್ದು, ಆಗಿನಿಂದ ಈ ವಿದ್ಯಾರ್ಥಿಗೆ ಒತ್ತಡ ಹಾಗೂ ತೀವ್ರವಾದ ಅಪೌಷ್ಟಿಕತೆ ಉಂಟಾಗಿದೆ. 

ಇದಕ್ಕೆ ಕಾರಣ ಶೌಚಾಲಯ!! 

ಹೌದು ಈ ವಿದ್ಯಾರ್ಥಿನಿಯ ಕುಟುಂಬ ಸದಸ್ಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಬಯಲು ಶೌಚಕ್ಕೆ ಭಯಪಟ್ಟು ಈ ವಿದ್ಯಾರ್ಥಿನಿ ಸರಿಯಾಗಿ ಆಹಾರ ಸ್ವೀಕರಿಸುವುದಕ್ಕೂ ಹಿಂದೇಟು ಹಾಕುತ್ತಿದ್ದು, ತತ್ಪರಿಣಾಮವಾಗಿ ಅಪೌಷ್ಟಿಕತೆ ಕಾಡಲು ಪ್ರಾರಂಭಿಸಿದ್ದು ಜೊತೆ ಜೊತೆಗೇ ಒತ್ತಡವೂ ಎದುರಾಗಿದೆ. 

ವಿದ್ಯಾರ್ಥಿನಿಯ ತಾಯಿ ಪವಿತ್ರ (ಹೆಸರು ಬದಲಾವಣೆ ಮಾಡಲಾಗಿದೆ) ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನಗರಸಭೆಗೆ ಮನವಿ ಮಾಡಲಾಗಿದೆ ಆದರೆ ಪ್ರತಿಕ್ರಿಯೆ ದೊರೆತಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ವಿಚಾರಿಸಿದಾಗ ಆ ರೀತಿಯ ಯಾವುದೇ ಯೋಜನೆಯೂ ಇಲ್ಲ ಎಂಬ ಉತ್ತರ ಬಂದಿತ್ತು" ಎಂದು ಹೇಳಿದ್ದಾರೆ.

ಪವಿತ್ರ ಹಾಗೂ ಆಕೆಯ ಪತಿ ಕೃಷಿ ಕಾರ್ಮಿಕರಾಗಿದ್ದು, ಓರ್ವ ಪುತ್ರ, ಪುತ್ರಿ ಇದ್ದಾರೆ. ಪುತ್ರ ವಿಶೇಷಚೇತನ. ಕೃಷಿ ಚಟುವಟಿಕೆಗಳಿಗೆ ತೆರಳುವ ಮುನ್ನ ಬಯಲು ಶೌಚಕ್ಕೆ ತೆರಳುತ್ತಾರೆ. ವಿದ್ಯಾರ್ಥಿನಿ ಶಾಲೆಯ ಶೌಚಾಲಯ ಬಳಕೆ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಬಳಿಕ ವಿದ್ಯಾರ್ಥಿನಿಗೆ ಶಾಲೆಯ ಶೌಚಾಲಯ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. 

ನಾನೂ ನನ್ನ ಮಗಳು ರಾತ್ರಿ ಅವೇಳೆಯವರೆಗೂ ಕಾಯಬೇಕು. ದೂರದ ಪ್ರದೇಶಕ್ಕೆ ತೆರಳಿ ಶೌಚಕ್ಕೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಬೆಳಗಿನ ವೇಳೆ ವಿದ್ಯಾರ್ಥಿನಿ ಶೌಚಕ್ಕೆ ತೆರಳುವುದಕ್ಕೆ ಹಿಂಜರಿಯುತ್ತಾರೆ. ಈ ಕಾರಣದಿಂದಾಗಿ ತಿನ್ನುವುದಕ್ಕೂ ಆಕೆ ಹಿಂಜರಿಯುತ್ತಾಳೆ ಎಂದು ಪೋಷಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com