ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ 3ನೇ ಅಲೆ ಆತಂಕ ಶುರು: ನಗರದಲ್ಲಿ 11 ದಿನಗಳಲ್ಲಿ 543 ಮಕ್ಕಳಲ್ಲಿ ಸೋಂಕು ಪತ್ತೆ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ 3ನೇ ಅಲೆ ಆತಂಕ ಹೆಚ್ಚಾಗಿದ್ದು, ಇದರ ನಡುವೆ ಕೇವಲ 11 ದಿನಗಳಲ್ಲಿ 543 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವುದು ಮತ್ತಷ್ಟು ಭೀತಿ ಹುಟ್ಟುಹಾಕಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ 3ನೇ ಅಲೆ ಆತಂಕ ಹೆಚ್ಚಾಗಿದ್ದು, ಇದರ ನಡುವೆ ಕೇವಲ 11 ದಿನಗಳಲ್ಲಿ 543 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವುದು ಮತ್ತಷ್ಟು ಭೀತಿ ಹುಟ್ಟುಹಾಕಿದೆ.

ಅನ್‌ಲಾಕ್ ಆದ ಬಳಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ತಲುಪಿದೆ.ಆದರೆ, ಮಕ್ಕಳಲ್ಲಿ ಕೋವಿಡ್ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರವೇ ಕಳೆದ 11 ದಿನಗಳಲ್ಲಿ 543 ಮಕ್ಕಳು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ.

ನಗರದಲ್ಲಿ 0-18 ವಯಸ್ಸಿನ 543 ಮಕ್ಕಳಲ್ಲಿ ಆಗಸ್ಟ್ 1 ರಿಂದ 11 ರ ನಡುವೆ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಜುಲೈ ತಿಂಗಳಿನಲ್ಲಿ 510 ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ ಎಂಬ ಸೂಚನೆಯನ್ನು ಇದು ನೀಡುತ್ತಿದೆ. 

ಬಿಬಿಎಂಪಿ ಮಾಹಿತಿ ನೀಡಿರುವ ಪ್ರಕಾರ ಆಗಸ್ಟ್ 1 ಮತ್ತು 11 ರ ನಡುವೆ, 0-9 ವರ್ಷ ವಯಸ್ಸಿನ 210 ಮಕ್ಕಳು ಮತ್ತು 10-18 ವರ್ಷ ವಯಸ್ಸಿನ 333 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು, 270 ಬಾಲಕಿಯರು ಮತ್ತು 273 ಬಾಲಕರು ಸೇರಿ ಒಟ್ಟು 543 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ. 

ಈ ನಡುವೆ ಆಗಸ್ಟ್ 23 ರಿಂದ ಭೌತಿಕ ತರಗತಿಗಳ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಮಕ್ಕಳಿಗೆ ಇನ್ನೂ ಲಸಿಕೆ ನೀಡದ ಕಾರಣ ಪೋಷಕರು ಆತಂಕಕ್ಕೊಳಗಾಗಿದ್ದಾರೆ. 

ನಗರದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಆದರೆ, ಪಾಟಿಸಿಟಿವಿಟಿ ದರ ಏರಿಕೆಯಾಗುತ್ತಿಲ್ಲ. ಒಂದು ಮಗುವಿಗೆ ಸೋಂಕು ದೃಢಪಟ್ಟಿದೆ ಎಂದರೆ, ಇಡೀ ಕುಟುಂಬಕ್ಕೂ ಸೋಂಕು ತಗಲುವ ಸಾಧ್ಯತೆಗಳಿವೆ ಎಂದು ಬಿಬಿಎಪಿ ವಿಶೇಷ ಆಯುಕ್ತ ರಂದೀಪ್ ಅವರು ಹೇಳಿದ್ದಾರೆ. 

ಪಾಸಿಟಿವಿಟಿ ಪ್ರಕರಣಗಳು ಶೇ.15 ದಾಟದೆ ಶೇ.12-14 ದೊಳಗೇ ಇದೆ. ಮಕ್ಕಳ ಕೋವಿಡ್ -19 ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಕಳೆದ ಜುಲೈ ತಿಂಗಳಿನಿಂದಲೂ ಪಾಟಿವಿಟಿ ದರದಲ್ಲಿ ಯಾವುದೇ ರೀತಿಯ ಬದಲಾವಣೆಗಳೂ ಕಂಡು ಬಂದಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com