ಕಾನೂನಿನಲ್ಲಿ ರಾಜ್ಯಕ್ಕಿರುವ ಹಕ್ಕುಗಳನ್ನಷ್ಟೇ ನಾವು ಕೇಳುತ್ತಿರುವುದು: ಸಿ.ಟಿ ರವಿ ಹೇಳಿಕೆಗೆ ಅಶ್ವತ್ಥ್‌ ನಾರಾಯಣ್ ತಿರುಗೇಟು

ದೇಶದ ಕಾನೂನಿನಲ್ಲಿ ರಾಜ್ಯಕ್ಕಿರುವ ಹಕ್ಕುಗಳನ್ನಷ್ಟೇ ನಾವು ಕೇಳುತ್ತಿದ್ದೆವೆ. ಮೇಕೆದಾಟು ವಿಚಾರದಲ್ಲಿ ನಮಗೆ ಯಾವುದೇ ಆತಂಕ ಇಲ್ಲ ಎಂದು ಸಚಿವ ಡಾ.ಸಿಎನ್‌ ಅಶ್ವತ್ಥ್ ನಾರಾಯಣ್  ಹೇಳಿದ್ದಾರೆ.
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ರಾಮನಗರ: ದೇಶದ ಕಾನೂನಿನಲ್ಲಿ ರಾಜ್ಯಕ್ಕಿರುವ ಹಕ್ಕುಗಳನ್ನಷ್ಟೇ ನಾವು ಕೇಳುತ್ತಿದ್ದೆವೆ. ಮೇಕೆದಾಟು ವಿಚಾರದಲ್ಲಿ ನಮಗೆ ಯಾವುದೇ ಆತಂಕ ಇಲ್ಲ ಎಂದು ಸಚಿವ ಡಾ.ಸಿಎನ್‌ ಅಶ್ವತ್ಥ್ ನಾರಾಯಣ್  ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ನಮಗೆ ಸ್ಪಷ್ಟವಾದ ನಿಲುವಿದೆ. ಯಾರೊಬ್ಬರೂ ಈ ಯೋಜನೆಯನ್ನು ಕಡೆಗಣಿಸುವ ಪ್ರಮೇಯವೇ ಇಲ್ಲ. ರಾಜ್ಯ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. 

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡಿನ ಅಭಿಪ್ರಾಯ ಕೇಳಬೇಕು ಎಂಬ ಕೇಂದ್ರದ ನಿಲುವನ್ನು ತಮಿಳುನಾಡು ಸರ್ಕಾರ ಅನುಕೂಲ‌ ಪಡೆಯುತ್ತಿದೆ. ಟ್ರಿಬ್ಯೂನಲ್‌ನಲ್ಲಿ ಹೇಳಿರುವುದನ್ನಷ್ಟೆ ನಾವು ಕೇಳುತ್ತಿದ್ದೆವೆ. ನಮಗೆ ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು. ಮೇಕೆದಾಟು ಯೋಜನೆ ಬಗ್ಗೆ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com