ಪ್ಯಾರಿಸ್ ಒಲಂಪಿಕ್ಸ್​'ಗೆ ರಾಜ್ಯದ ಕ್ರೀಡಾಪಟುಗಳ ಕಳುಹಿಸಲು ರಾಜ್ಯ ಸರ್ಕಾರ ಚಿಂತನೆ

ಪ್ಯಾರಿಸ್ ನಲ್ಲಿ 2024ಕ್ಕೆ ನಡೆಯುವ ಒಲಂಪಿಕ್ಸ್​ಗೆ ಕರ್ನಾಟಕದಿಂದ ಕನಿಷ್ಠ 100 ಮಂದಿ ಜನ ಕ್ರೀಡಾಪಟುಗಳನ್ನು ಕಳುಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 
ಕ್ರೀಡಾ ಸಚಿವ ನಾರಾಯಣ್ ಗೌಡ
ಕ್ರೀಡಾ ಸಚಿವ ನಾರಾಯಣ್ ಗೌಡ

ಬೆಂಗಳೂರು: ಪ್ಯಾರಿಸ್ ನಲ್ಲಿ 2024ಕ್ಕೆ ನಡೆಯುವ ಒಲಂಪಿಕ್ಸ್​ಗೆ ಕರ್ನಾಟಕದಿಂದ ಕನಿಷ್ಠ 100 ಮಂದಿ ಜನ ಕ್ರೀಡಾಪಟುಗಳನ್ನು ಕಳುಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಮಾಹಿತಿ ನೀಡಿರುವ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಅವರು,  ಗಾಗಲೇ ರಾಜ್ಯದ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಅವರಿಗೆ ತಲಾ 5 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು  ಹೇಳಿದ್ದಾರೆ. 

ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ದೇಶದ ಎಲ್ಲೆಡೆಯಿಂದ 7,000 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಮಂದಿನ ಮಾರ್ಚ್ 5 ರಿಂದ 12 ದಿಂದ ಖೇಲೋ ಇಂಡಿಯಾ ಗೇಮ್ಸ್ ನಡೆಯಲಿದೆ. ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ಸ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸೆಪ್ಟೆಂಬರ್​ನಿಂದ ಆರಂಭವಾಗಲಿದೆ. ಅಲ್ಲಿ ವಾರ್ಷಿಕ 100 ಪೈಲಟ್​ಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ತರಬೇತಿ ಶಾಲೆ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com