75ನೇ ಸ್ವಾತಂತ್ರ್ಯ ದಿನದಂದು ಕರ್ನಾಟಕದ ಇ-ಭವಿಷ್ಯದತ್ತ ಒಂದು ನೋಟ

75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ತಂತ್ರಜ್ಞಾನ ಕಾಶಿ ಎಂದೇ ಹೆಸರಾಗಿರುವ ರಾಜ್ಯವು ತನ್ನ ಭವಿಷ್ಯಕ್ಕಾಗಿ ಅದೇ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಸನ್ನದ್ಧವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ತಂತ್ರಜ್ಞಾನ ಕಾಶಿ ಎಂದೇ ಹೆಸರಾಗಿರುವ ರಾಜ್ಯವು ತನ್ನ ಭವಿಷ್ಯಕ್ಕಾಗಿ ಅದೇ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಸನ್ನದ್ಧವಾಗಿದೆ. ಆರೋಗ್ಯ ಕ್ಷೇತ್ರದಿಂದ ಮೊದಲಾಗಿ ಶಿಕ್ಷಣ ಕ್ಷೇತ್ರದ ತನಕದ ಎಲ್ಲಾ ಕ್ಷೇತ್ರಗಳನ್ನು ಉನ್ನತ ದರ್ಜೆಗೇರಿಸಿ ಜಿಎಸ್ ಡಿಪಿ(ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್) ಅನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ. 

ನಾವು ಈಗಾಗಲೇ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದ್ದೇವೆ ಎನ್ನುವುದು ನಿಜ. ಮಕ್ಕಳ ಶಾಲಾ ಶಿಕ್ಷಣ, ಬಿಲ್ ಗಳ ಪಾವತಿ, ಟಿಕೆಟ್ ಬುಕಿಂಗ್ ಸೇರಿದಂತೆ ಹತ್ತು ಹಲವು ದೈನಂದಿನ ಕೆಲಸಗಳನ್ನು ನಾವು ಡಿಜಿಟಲ್ ತಂತ್ರಜ್ಞಾನ ಬಳಸಿಯೇ ಪೂರೈಸಿಕೊಳ್ಳುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸುಧಾರಣೆ ಆಗುವುದರಿಂದ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಪಡೆದುಕೊಂಡು ಮೌಲ್ಯಯುತ ಜೀವನ ನಡೆಸುವುದು ಸಾಧ್ಯವಾಗಲಿದೆ. 

ಭವಿಷ್ಯದ ತಂತ್ರಜ್ಞಾನ ಉಜ್ವಲವಾಗಿದೆ. ಮೊಬೈಲ್ ಆಪ್, ಸೆನ್ಸಾರ್, ರೊಬೊಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ನೂತನ ತಂತ್ರಜ್ಞಾನಗಳು ನಮ್ಮ ಜೀವನವನ್ನು ಸುಗಮಗೊಳಿಸಲಿದೆ. ವೈರ್ ಲೆಸ್ ಮಾನವ ಸಮಾಜ ಸೃಷ್ಟಿಯಾಗಲಿದೆ. 

1947ರಲ್ಲಿ ರಾಜ್ಯದ ಸಾಕ್ಷರತಾ ಪ್ರಮಾಣ ಶೇ.12 ಇತ್ತು. 2011ರ ಗಣತಿಯ ಆಧಾರಲದಲ್ಲಿ ರಾಜ್ಯದ ಸಾಕ್ಷರತೆ ಶೇ.75.36 ಕ್ಕೆ ಬಂದು ತಲುಪಿದೆ. ಅಲ್ಲದೆ 1947ರಲ್ಲಿ ರಾಜ್ಯದ ವ್ಯಕ್ತಿಯೊಬ್ಬನ ಸರಾಸರಿ ಜೀವಿತಾವಧಿ 37 ವರ್ಷವಾಗಿತ್ತು. ಅದೀಗ 70 ವರ್ಷಕ್ಕೇರಿದೆ. ಇದು ರಾಜ್ಯದ ಆರೋಗ್ಯ ಕ್ಷೇತ್ರದಲ್ಲುಟಾಗಿರುವ ಸುಧಾರಣೆಯ ಪ್ರತೀಕ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com