ಸುರಕ್ಷತಾ ಆಯುಕ್ತರಿಂದ ಕೆಂಗೇರಿ ಮೆಟ್ರೋ ಲೈನ್ ಗೆ ಗ್ರೀನ್ ಸಿಗ್ನಲ್: ಸೆಪ್ಟೆಂಬರ್ ನಲ್ಲಿ ಸೇವೆ ಆರಂಭ ಸಾಧ್ಯತೆ

ಬೆಂಗಳೂರು ಮೇಟ್ರೋ ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 
ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ
ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ

ಬೆಂಗಳೂರು: ಬೆಂಗಳೂರು ಮೇಟ್ರೋ ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ದಕ್ಷಿಣ ವೃತ್ತದ ಮೆಟ್ರೋ ರೈಲು ಸುರಕ್ಷತೆ ಆಯುಕ್ತರು (CMRS) ಅಭಯ್ ಕುಮಾರ್ ರೈ ಸೋಮವಾರ ಸಂಜೆ 7.53 ಕಿಮೀ ಮೈಸೂರು ರಸ್ತೆ-ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲು ಹಸಿರು ನಿಶಾನೆ ತೋರಿದ್ದು, ಸ್ಟೇಜ್- II ಮಾರ್ಗದ ಕಾರ್ಯಾಚರಣೆಗಳನ್ನು ಶೀಘ್ರವೇ  ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿರ್ದೇಶಕಿ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಯಲಚೇನಹಳ್ಳಿ ಮತ್ತು ಸಿಲ್ಕ್ ಬೋರ್ಡ್ ನಡುವಿನ ಮಾರ್ಗವು ಈ ವರ್ಷ ಜನವರಿ 15 ರಂದು ಕಾರ್ಯಾಚರಣೆ ಆರಂಭಿಸಿದ ನಂತರ ಈ ರೀಚ್ -2 ಎ ಲೈನ್ ಮೆಟ್ರೋ ಹಂತ -2 ರ ಎರಡನೇ ಮಾರ್ಗವನ್ನು ಆರಂಭಿಸಲಿದೆ. ಈ ಮಾರ್ಗದಲ್ಲಿ CMRS ಆಗಸ್ಟ್ 11 ಮತ್ತು 12 ರಂದು ತಪಾಸಣೆ ನಡೆಸಿತ್ತು ಎಂದು 
ಪರ್ವೇಜ್ ಹೇಳಿದರು.

"ನಾವು ಸೋಮವಾರ ಸಂಜೆ CMRS ನಿಂದ ಅನುಮೋದನೆ ಸ್ವೀಕರಿಸಿದ್ದೇವೆ. ನಮಗೆ ನೀಡಿದ ಕ್ಲಿಯರೆನ್ಸ್‌ನಲ್ಲಿ ಯಾವುದೇ ಪ್ರಮುಖ ಸಲಹೆಗಳನ್ನು ನೀಡಲಾಗಿಲ್ಲ. ಆದ್ದರಿಂದ, ನಾವು ಬಯಸಿದಾಗ ಸೇವೆ ಆರಂಭದ ಕುರಿತು ಮುಂದುವರಿಯಬಹುದು. ಮೆಟ್ರೋ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು.  ಅದಕ್ಕೆ ಮಾರ್ಗ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು. 

ಇದೇ ವೇಳೆ ಸೇವೆ ಆರಂಭ ದಿನಾಂಕದ ಬಗ್ಗೆ ಕೇಳಿದಾಗ, ಮಾತನಾಡಿದ ಎಂಡಿ ಪರ್ವೇಜ್, ನಾವು ಕಾರ್ಯಾಚರಣೆಗಳನ್ನು ಆರಂಭಿಸಬಹುದಾದ ಸಂಭವನೀಯ ದಿನಾಂಕಗಳ ಕುರಿತು ಕೇಂದ್ರ ಮತ್ತು ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕು. ನಾಳೆ (ಮಂಗಳವಾರ) ಈ ಸಂಬಂಧ ನಾನು ರಾಜ್ಯ  ಪ್ರತಿನಿಧಿಗಳನ್ನು ಭೇಟಿ ಮಾಡುತ್ತೇನೆ. ಆದರೆ ನಾವು ಅದನ್ನು ಶೀಘ್ರದಲ್ಲೇ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಈ ಮಾರ್ಗವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಮೈಸೂರಿಗೆ ಹೋಗುವ ಅನೇಕರು ಕೆಂಗೇರಿಯಲ್ಲಿ ಇಳಿದು ಇತರೆ ಸಾರಿಗೆ ವ್ಯವಸ್ಥೆಗಳನ್ನು ಬಳಕೆ  ಮಾಡುತ್ತಿದ್ದರು. ಆದರೆ ಇದೀಗ ಮೆಟ್ರೋ ಮಾರ್ಗ ಸಿದ್ಧವಾಗಿದ್ದು, ಇದು ಪ್ರಯಾಣಿಕರಿಗೆ ನೆರವಾಗಲಿದೆ. 

"ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕೂಡ ಇಲ್ಲಿದೆ, ಮೆಟ್ರೋ ಸಹ ಕಾರ್ಯಾರಂಭ ಮಾಡಿದಾಗ ಇದು ಪ್ರಮುಖ ಸಾರಿಗೆ ಕೇಂದ್ರವಾಗಲಿದೆ. ನಾವು ಪ್ರತಿನಿತ್ಯ ಸರಾಸರಿ 70,000 ಪ್ರಯಾಣಿಕರು ಈ ಸೇವೆ ಬಳಸುವ ಕುರಿತು ಎದುರು ನೋಡುತ್ತಿದ್ದೇವೆ ಎಂದು ಪರ್ವೇಜ್ ಹೇಳಿದರು.

ಇದು ನೇರಳೆಸ ಮಾರ್ಗದ ಮೊದಲ ಹಂತದ ವಿಸ್ತರಣೆಯಾಗಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣದ ಆರು ಎತ್ತರದ ನಿಲ್ದಾಣಗಳನ್ನು ಇದು ಒಳಗೊಂಡಿದೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ 7.53 ಕೀ.ಮೀ ಉದ್ದವಿದ್ದು  ನಿತ್ಯ 75 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com