ಮೇಟ್ರೋ ಕಾಮಗಾರಿಗಾಗಿ ಡ್ರಿಲ್ಲಿಂಗ್ ಪರಿಣಾಮ ಉಪಾಹಾರ ಗೃಹಕ್ಕೆ ನುಗ್ಗಿದ ನೀರು, ಜಲಾವೃತ
ಕಾಮಗಾರಿಗಾಗಿ ಡ್ರಿಲ್ಲಿಂಗ್ ಮಾಡುತ್ತಿದ್ದ ವೇಳೆ ಹತ್ತಿರವೇ ಇದ್ದ ಉಪಹಾರ ಗೃಹಕ್ಕೆ ನೀರು ನುಗ್ಗಿ ಆ ಪ್ರದೇಶ ಜಲಾವೃತಗೊಂಡ ಘಟನೆ ಶಿವಾಜಿನಗರದಲ್ಲಿ ವರದಿಯಾಗಿದೆ.
Published: 17th August 2021 07:35 PM | Last Updated: 17th August 2021 07:57 PM | A+A A-

ಮೇಟ್ರೋ ಕಾಮಗಾರಿಗಾಗಿ ಡ್ರಿಲ್ಲಿಂಗ್ ಪರಿಣಾಮ ಉಪಾಹಾರ ಗೃಹಕ್ಕೆ ನುಗ್ಗಿದ ನೀರು
ಬೆಂಗಳೂರು: ಕಾಮಗಾರಿಗಾಗಿ ಡ್ರಿಲ್ಲಿಂಗ್ ಮಾಡುತ್ತಿದ್ದ ವೇಳೆ ಹತ್ತಿರವೇ ಇದ್ದ ಉಪಹಾರ ಗೃಹಕ್ಕೆ ನೀರು ನುಗ್ಗಿ ಆ ಪ್ರದೇಶ ಜಲಾವೃತಗೊಂಡ ಘಟನೆ ಶಿವಾಜಿನಗರದಲ್ಲಿ ವರದಿಯಾಗಿದೆ.
ಎರಡು ಕಟ್ಟಡಗಳಿಗೆ ನೀರು ನುಗ್ಗಿದ್ದು ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನೆರವು ನೀಡಿದ್ದಾರೆ.
ಅಂಡರ್ ಗ್ರೌಂಡ್ ಟನಲ್ ಗಾಗಿ ಕಳೆದ ವಾರ ಡ್ರಿಲ್ಲಿಂಗ್ ಮಾಡಲಾಗಿತ್ತು. ಸೋಮವಾರದಂದು ಈ ಪ್ರದೇಶದಲ್ಲಿ ತೀವ್ರವಾಗಿ ನೀರು ನುಗ್ಗಿದ್ದು ಜಲಾವೃತಗೊಂಡ ಪರಿಣಾಮ ಸ್ಥಳೀಯರು ಹಾಗೂ ಉಪಹಾರ ಗೃಹದಲ್ಲಿದ್ದ ಉದ್ಯೋಗಿಗಳು ಹತ್ತಿರದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.
ನಾಗಾವಾರ-ಕಾಳೇನ ಅಗ್ರಹಾರ ಮಾರ್ಗದ 2 ನೇ ಹಂತದ ಮೆಟ್ರೋ ಲೈನ್ ಮಾರ್ಗದಲ್ಲಿ ಟನಲ್ ಬೋರಿಂಗ್ ಯಂತ್ರ ಉರ್ಜಾ ಕಂಟೋನ್ಮೆಂಟ್ ನಿಂದ ಶಿವಾಜಿನಗರದ ವರೆಗೆ ಟನಲ್ ಕೊರೆಯಲಾಗುತ್ತಿದೆ. ಬಿಎಂಆರ್ ಸಿಎಲ್ ಈ ಕಾಮಗಾರಿಯ ಗುತ್ತಿಗೆಯನ್ನು ಎಲ್&ಟಿಗೆ ನೀಡಿದೆ.
ಶಿವಾಜಿ ರಸ್ತೆಯಲ್ಲಿರುವ 25 ವರ್ಷಗಳ ಹಳೆಯ ನಾನ್ ವೆಜ್ ಹೋಟೆಲ್ ಆಗಿರುವ ಹೊಟೆಲ್ ಮಲ್ಲೀಕ್ ನ ಮೂವರು ಉದ್ಯೋಗಿಗಳು ಮಲಗಿದ್ದಾಗ ಮಧ್ಯರಾತ್ರಿ ನೀರು ನುಗ್ಗಿದೆ. ಮೊಹಮ್ಮದ್ ಇರ್ಶಾದ್ ಹಾಗೂ ಆತನ ಹಿರಿಯ ಸಹೋದರ ಮೊಹಮ್ಮದ್ ಅರ್ಶದ್ ಈ ಉದ್ಯಮವನ್ನು ನಡೆಸುತ್ತಿದ್ದು, " ನೀರು ನುಗ್ಗಿದ್ದು ತಿಳಿಯುತ್ತಿದ್ದಂತೆಯೇ ನನ್ನ ನೌಕರರು ಎಚ್ಚೆತ್ತು ಮಾಹಿತಿ ನೀಡಿದರು.
ಮೆಟ್ರೋ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ಮಾಹಿತಿ ನೀಡಿದೆವು, ತಕ್ಷಣವೇ ಅವರು ಸ್ಪಂದಿಸಿದರು. ಟಿಬಿಎಂ ನ್ನು ನಿಲ್ಲಿಸಿ ಸತತ ನಾಲ್ಕು ಗಂಟೆಗಳ ಕಾಲ ನಮ್ಮ ವ್ಯವಸ್ಥೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆವು, ನಂತರ ನೀರನ್ನು ಹೊರಹಾಕಲಾಯಿತು ಎಂದು ಮೊಹಮ್ಮದ್ ಇರ್ಶಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಈ ಹೊಟೆಲ್ ಪಕ್ಕದಲ್ಲೇ ಇದ್ದ ಮತ್ತೊಂದು ಕಟ್ಟಡದ ಒಳಗೂ ನೀರು ನುಗ್ಗಿದೆ. ಆದರೆ ಆ ಮನೆಯಲ್ಲಿದ್ದ ಕುಟಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ಪ್ರತಿಕ್ರಿಯೆ ನೀಡಿದ್ದು, "ಈ ಪ್ರದೇಶದಲ್ಲಿ ಕಲ್ಮಶವಿಲ್ಲದ ಮರಳು ಮಣ್ಣಿನ ಪದರದಿಂದಾಗಿ ಮೇಲ್ಮೈಗೆ ಕೊಳೆ ಸೋರಿಕೆಯಾಗಿದೆ. ಇದು ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಶಿವಾಜಿ ನಗರದ ಮನೆಯೊಂದರಲ್ಲಿ ಸಂಭವಿಸಿದೆ. ಸ್ಲರಿಯನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಅಗತ್ಯ ಗ್ರೌಟಿಂಗ್ ಮಾಡಲಾಗಿದೆ. ಮಾಡಲಾಗಿದೆ. ನಿವಾಸಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ಸ್ಥಳಾಂತರಿಸಲಾಗಿದೆ." ಎಂದು ಹೇಳಿದರು.