ಅಫ್ಘಾನಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿರುವ ಕರ್ನಾಟಕ ಮೂಲದ ಇಬ್ಬರು ಪಾದ್ರಿಗಳು: ನೆರವಿಗೆ ಕುಟುಂಬಸ್ಥರ ಮೊರೆ  

ನಗರದ ಬಳಿಯ ಸಿದ್ದಕಟ್ಟೆಯ ಫಾದರ್ ಜೆರೊಮೆ ಸಿಕ್ವೆರಾ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಫಾದರ್ ಪಿ ರಾಬರ್ಟ್ ರೋಡ್ರಿಗಸ್ ಎಂಬ ಇಬ್ಬರು ಜೆಸ್ಯೂಟ್ ಪಾದ್ರಿಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ನಿನ್ನೆ ಅಫ್ಘಾನಿಸ್ತಾನದಿಂದ ಬಂದಿಳಿದ ಭಾರತೀಯರನ್ನು ಗುಜರಾತ್ ನ ಜಮ್ನಗರದಲ್ಲಿ ಸ್ವಾಗತಿಸಿದ ಅಧಿಕಾರಿಗಳು
ನಿನ್ನೆ ಅಫ್ಘಾನಿಸ್ತಾನದಿಂದ ಬಂದಿಳಿದ ಭಾರತೀಯರನ್ನು ಗುಜರಾತ್ ನ ಜಮ್ನಗರದಲ್ಲಿ ಸ್ವಾಗತಿಸಿದ ಅಧಿಕಾರಿಗಳು

ಮಂಗಳೂರು: ನಗರದ ಬಳಿಯ ಸಿದ್ದಕಟ್ಟೆಯ ಫಾದರ್ ಜೆರೊಮೆ ಸಿಕ್ವೆರಾ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಫಾದರ್ ಪಿ ರಾಬರ್ಟ್ ರೋಡ್ರಿಗಸ್ ಎಂಬ ಇಬ್ಬರು ಜೆಸ್ಯೂಟ್ ಪಾದ್ರಿಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ಫಾದರ್ ಜೆರೊಮೆಯವರು ನಿನ್ನೆ ಸಂದೇಶ ಮೂಲಕ ಸಂಪರ್ಕಕ್ಕೆ ಸಿಕ್ಕಿ ತಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರ ಕುಟುಂಬಸ್ಥರು ಅಲ್ಲಿನ ಪರಿಸ್ಥಿತಿ ಕಂಡು ಗಾಬರಿಯಾಗಿದ್ದಾರೆ. 

ಫಾ. ಜೆರೋಮ್ ಸಿಕ್ವೇರಾ ಅವರು ಕಳೆದ ಜನವರಿಯಿಂದ ಕಾಬೂಲ್‌ನಲ್ಲಿರುವ ಅಂತಾರಾಷ್ಟ್ರೀಯ ಎನ್ಜಿಒ ಜೆಸ್ಯೂಟ್ ರೆಫ್ಯೂಜಿ ಸರ್ವಿಸಸ್ (ಜೆಆರ್‌ಎಸ್) ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಮೊನ್ನೆ ಮಂಗಳವಾರ ಬೆಳಿಗ್ಗೆ ತಮ್ಮ ಸಹೋದರ ವಿನ್ಸೆಂಟ್ ಸಿಕ್ವೇರಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಕಾಬೂಲ್ ಬಳಿಯ ಸ್ಥಳದಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವಿನ್ಸೆಂಟ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ತಾವು ವಿದೇಶಾಂಗ ಇಲಾಖೆ ಅಧಿಕಾರಿಗಳು ಮತ್ತು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವ ಕುಲಶೇಖರ್ ಮೂಲದ ಜೆಸ್ಯೂಟ್ಸ್ ಪ್ರಾಂತೀಯ ಫ್ರಾ. ಜೆರೋಮ್ ಕುಟಿನ್ಹಾ ಅವರನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. ನನ್ನ ಜೊತೆ ಕೇವಲ ಒಂದು ನಿಮಿಷ ಮಾತ್ರ ಮಾತನಾಡಿದ್ದಾರೆ, ಸದ್ಯ ಅಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗಿರುವುದರಿಂದ ಕರೆ ಸಂಪರ್ಕ ಕಡಿತಗೊಳಿಸಿದರು ಎಂದು ತಿಳಿಸಿದ್ದಾರೆ.

ತೀರ್ಥಹಳ್ಳಿಯವರಾದ ಫಾ.ರಾಬರ್ಟ್ ಮಧ್ಯ ಅಫ್ಘಾನಿಸ್ತಾನದ ಬಾಮಿಯಾನ್ ಪ್ರಾಂತ್ಯದ ರಾಜಧಾನಿಯಾದ ಬಾಮಿಯಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮೊದಲು, ಕಾಬೂಲ್ ಮತ್ತು ಅಫ್ಘಾನಿಸ್ತಾನದ ಇತರ ಭಾಗಗಳಿಂದ ಹೊರಹೊಮ್ಮುವ ಭಯಾನಕ ದೃಶ್ಯಗಳನ್ನು ಮತ್ತು ದೇಶದ ಪರಿಸ್ಥಿತಿ ಹೇಗೆ ವೇಗವಾಗಿ ಬದಲಾಗುತ್ತಿದೆ ಎಂಬುದನ್ನು ಫ್ರಾನ್ ಜೆರೋಮ್ ವಿವರಿಸಿದ್ದಾರೆ. "ನಾವು ಮತ್ತು ನಮ್ಮ ಸಿಬ್ಬಂದಿ ಸುರಕ್ಷಿತವಾಗಿದ್ದೇವೆ. ಇಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ವಿವರಿಸಿದ್ದಾರೆ ಎಂದರು.

ಕಳೆದ ಭಾನುವಾರ ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಲು ಅವರಿಗೆ ಸಾಧ್ಯವಾಯಿತಾದರೂ ಆ ಹೊತ್ತಿಗೆ ತಾಲಿಬಾನಿಯರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡರು. "ನಾನು ನನ್ನ ಸಾಮಾನುಗಳನ್ನು ದೊಡ್ಡ ಜನಸಂದಣಿ ಮತ್ತು ರಸ್ತೆಯ ವಾಹನಗಳ ಮೂಲಕ ಎಳೆಯಬೇಕಾಯಿತು. ಸಾವಿರಾರು ಜನರು ಪಲಾಯನ ಮಾಡಲು ಪ್ರಯತ್ನಿಸಿದರು. ತಾಲಿಬಾನಿಯರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಯಾವುದೇ ಭದ್ರತಾ ತಪಾಸಣೆ ಅಥವಾ ಬೋರ್ಡಿಂಗ್ ಪಾಸ್ ಇಲ್ಲದೆ ಜನರು ವಿಮಾನಗಳನ್ನು ಹತ್ತುತ್ತಿದ್ದರು. ಇದು ಭಯಾನಕ ಅನುಭವವಾಗಿತ್ತು ಎಂದು ಅವರು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com