ರಾಜ್ಯದಲ್ಲಿ ಕಳೆದ ತಿಂಗಳು ಪ್ರತಿದಿನ ಸರಾಸರಿ ಎಂಟು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ರಾಜ್ಯದಲ್ಲಿ ಕಳೆದ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳುವರದಿಯಾಗಿದ್ದು, ಆಗಸ್ಟ್ 18 ರ ವರೆದೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,836 ಕ್ಕೆ ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿದ್ದು, ಆಗಸ್ಟ್ 18 ರ ವರೆದೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,836 ಕ್ಕೆ ತಲುಪಿದೆ.

ಕೋವಿಡ್ -19 ಸಂಬಂಧಿತ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಬೆಂಗಳೂರು ನಗರದಲ್ಲಿ 1,207, ಧಾರವಾಡದಲ್ಲಿ 342, ವಿಜಯಪುರ 228, ಕಲಬುರಗಿ 213 ಮತ್ತು ಬಳ್ಳಾರಿ 169 ಪ್ರಕರಣಗಳು ಪತ್ತೆಯಾಗಿವೆ.

ಈ ರೋಗದಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ 441, ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 149 ಮಂದಿ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ನಂತರ ಧಾರವಾಡದಲ್ಲಿ 40, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25 ಮತ್ತು ಕಲಬುರಗಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ.

"ಎರಡನೇ ಅಲೆ ಹೆಚ್ಚಾದಾಗ ನಾವು ನೋಡಿದ ಸಂಖ್ಯೆಗೆ ಹೋಲಿಸಿದರೆ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ದೈನಂದಿನ ಸಂಖ್ಯೆ ಕಡಿಮೆಯಾಗಿದೆ. ಈ ಕುಸಿತವು ಕೋವಿಡ್ ಪ್ರಕರಣಗಳ ಇಳಿಕೆಗೆ ಅನುಗುಣವಾಗಿರಬಹುದು ಎಂದು ಮ್ಯೂಕೋರ್ಮೈಕೋಸಿಸ್ ಕುರಿತು ರಾಜ್ಯದ ತಜ್ಞರ ಸಮಿತಿ ಸದಸ್ಯ, ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಭುಜಂಗ್ ಶೆಟ್ಟಿ ಅವರು ಹೇಳಿದ್ದಾರೆ.

ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಕೋವಿಡ್ ರೋಗಿಗಳ ಸ್ಥಿತಿ ಗಂಭೀರವಾಗುತ್ತಿದೆ. ವೆಂಟಿಲೇಟರ್ ಮತ್ತು ಸ್ಟೀರಾಯ್ಡ್‌ಗಳನ್ನು ಹೆಚ್ಚಾಗಿ ಬಳಸುವುದು ಬ್ಲ್ಯಾಕ್ ಫಂಗಸ್ ಗೆ ಕಾರಣವಾಗುತ್ತಿದೆ. ಹೆಚ್ಚಿನ ರೋಗಿಗಳಿಗೆ ಡಿಸ್ಚಾರ್ಜ್ ಆದ ನಂತರ ಇಮ್ಯುನೊಕೊಂಪ್ರೊಮೈಸ್ಡ್ ಮತ್ತು ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com