ಯಶವಂತಪುರದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಇನ್ನೂ ಪಾಲಿಕೆ ಅನುಮತಿ ಸಿಕ್ಕಿಲ್ಲ!

ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್ ನ್ನು ತೆಗೆದುಹಾಕುವ ಮೂಲಕ ಮಲ್ಲೇಶ್ವರಂ ಮತ್ತು ಯಶವಂತಪುರದ ನಿವಾಸಿಗಳ ರಕ್ಷಣೆಗೆ ಬರುವ ಮೂಲಸೌಕರ್ಯ ಯೋಜನೆಯು ಆರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ.
ಯಶವಂತಪುರ ರೈಲು ನಿಲ್ದಾಣ
ಯಶವಂತಪುರ ರೈಲು ನಿಲ್ದಾಣ

ಬೆಂಗಳೂರು: ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್ ನ್ನು ತೆಗೆದುಹಾಕುವ ಮೂಲಕ ಮಲ್ಲೇಶ್ವರಂ ಮತ್ತು ಯಶವಂತಪುರದ ನಿವಾಸಿಗಳ ರಕ್ಷಣೆಗೆ ಬರುವ ಮೂಲಸೌಕರ್ಯ ಯೋಜನೆಯು ಆರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ. ರೈಲ್ವೆ ಮಂಡಳಿಯಿಂದ 2014-2015ರ ಆರ್ಥಿಕ ವರ್ಷದಲ್ಲಿ ಮಂಜೂರಾದ ಈ ಯೋಜನೆಯು ಟೇಕಾಫ್ ಆಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. 

ಯಶವಂತಪುರ ಮತ್ತು ಮಲ್ಲೇಶ್ವರಂ ರೈಲ್ವೇ ನಿಲ್ದಾಣಗಳ ನಡುವಿನ ಬ್ರಿಗೇಡ್ ಗೇಟ್ ವೇ (ಮೈಸೂರು ಲ್ಯಾಂಪ್ಸ್) ಎದುರಿನ ರೋಡ್ ಓವರ್ ಬ್ರಿಡ್ಜ್ ಯೋಜನೆಗೆ ವಿರೋಧ ವ್ಯಕ್ತವಾದ್ದರಿಂದ ತದನಂತರ  ಭೂ ಸ್ವಾಧೀನ ಸಮಸ್ಯೆಗಳಿಂದಾಗಿ  ಸೇತುವೆ ಕೆಳಗೆ ರಸ್ತೆಯಾಗಿ (ರೋಡ್ ಅಂಡರ್ ಬ್ರಿಡ್ಜ್ ) ರೈಲ್ವೆ ಬದಲಾಯಿಸಿತು ಆದರೆ, ಬಿಬಿಎಂಪಿ ಇನ್ನೂ ತನ್ನ ಅನುಮತಿಯನ್ನು ನೀಡಿಲ್ಲ.

ಯಾವುದೇ ರೀತಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ತೆಗೆದುಹಾಕುವುದರಿಂದ ಸಾರ್ವಜನಿಕರಿಗೆ ದೊಡ್ಡ ನೆಮ್ಮದಿ ಸಿಗಲಿದೆ. ಯಶವಂತಪುರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನಡುವೆ ರೈಲುಗಳು ಸಂಚಾರದೊಂದಿಗೆ  ಗೇಟ್ ಅನ್ನು ನಿಯಮಿತ ಅಂತರದಲ್ಲಿ ಮುಚ್ಚಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಆರಂಭದಲ್ಲಿ 50:50 ವೆಚ್ಚದ ಹಂಚಿಕೆಯ ಆಧಾರದ ಮೇಲೆ ಸೇತುವೆ ಕೆಳಗೆ ರಸ್ತೆಯನ್ನು ರಾಜ್ಯ ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯ ಸೇತುವೆಯನ್ನು ನೈರುತ್ಯ ರೈಲ್ವೆಯಿಂದ ನಿರ್ಮಿಸಬೇಕಾದರೆ ಬಿಬಿಎಂಪಿ ರಸ್ತೆಯನ್ನು ಮಾಡಬೇಕಾಗಿದೆ. 3491.69 ಚದರ ಮೀಟರ್ ಭೂ ಸ್ವಾಧೀನದ ಅಗತ್ಯವಿದೆ. ಅದರಲ್ಲಿ ವಸತಿ ಬಿಲ್ಡಿಂಗ್ ಗಳನ್ನು ಕೂಡಾ ಧ್ವಂಸಗೊಳಿಸಬೇಕಾಗಿದೆ. ಬಿಬಿಎಂಪಿಯಿಂದ ಹೇಳಲ್ಪಟ್ಟ ಈ ಭೂ ಸ್ವಾಧೀನ ಸಮಸ್ಯೆಯಿಂದಾಗಿ ಅದನ್ನು 2018ರಲ್ಲಿ ರೈಲ್ವೆ ಸೇತುವೆ ಕೆಳಗಿನ ರಸ್ತೆಯನ್ನಾಗಿ ಬದಲಾಯಿಸಲಾಯಿತು.

 ಎರಡು ಸೇತುವೆ ಕೆಳಗಿನ ರಸ್ತೆ ನಿರ್ಮಾಣಕ್ಕಾಗಿ ಜನವರಿ 5, 2018ರಲ್ಲಿ ರೈಲ್ವೆ ಪ್ರಸ್ತಾವನೆ ಸಲ್ಲಿಸಿತ್ತು. ಎರಡು ವರ್ಷದ ನಂತರ ಫೆಬ್ರವರಿ 14, 2020ರಲ್ಲಿ ಜಂಟಿ ಪರಿಶೀಲನೆ ನಡೆಸಿ ಬಿಬಿಎಂಪಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದಾಗ್ಯೂ, ಯೋಜನೆ ರೂಪುರೇಷೆಗೆ  ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಅವರು ಹೇಳಿದರು.ಬಿಬಿಎಂಪಿ ಅನುಮೋದನೆ ದೊರೆಯದೆ ನಾವು ಮುಂದೆ ಹೋಗಲು ಸಾಧ್ಯವಿಲ್ಲ. ಯೋಜನೆ ಅಂದಾಜು ವೆಚ್ಚ ತಯಾರಿಸಲು ಸಾಧ್ಯವಾಗುವುದು ಎಂದು ಅಧಿಕಾರಿ ತಿಳಿಸಿದರು. ಈ ಬಗ್ಗೆ ಬಿಬಿಎಂಪಿ ಕಚೇರಿಯಲ್ಲಿ ವಿಚಾರಿಸಿದಾಗ ಯಾರೊಬ್ಬರು ಪ್ರತಿಕ್ರಿಯೆ ನೀಡಲಿಲ್ಲ.

ಈ ಮಧ್ಯೆ ಯಶವಂತಪುರದಲ್ಲಿ ಮತ್ತೊಂದು ಮೂಲಸೌಕರ್ಯ ಯೋಜನೆಯಾಗಿರುವ ಈಗಿರುವ ನಾಲ್ಕು ಪಥದ ಮೇಲ್ಸುತುವೆಯನ್ನು ಆರು ಪಥದ ಮೇಲ್ಸುತುವೆಯಾಗಿ ವಿಸ್ತರಣೆಗೆ ಬಿಬಿಎಂಪಿ ಅನುಮೋದನೆ ಸಿಕ್ಕದ್ದು,  ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಮತ್ತೋರ್ವ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com