ರಾಜಭವನದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ರಾಷ್ಟ್ರೀಯ ಸಹೋದರತೆ ಬಂಧವನ್ನು ಸಾರುವ ರಕ್ಷಾ ಬಂಧನವನ್ನು ಪುಟ್ಟ ಪುಟ್ಟ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಆಚರಿಸಿದರು.
Published: 22nd August 2021 07:06 PM | Last Updated: 22nd August 2021 07:10 PM | A+A A-

ವೆಂಕಯ್ಯ ನಾಯ್ಡು
ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ರಾಷ್ಟ್ರೀಯ ಸಹೋದರತೆ ಬಂಧವನ್ನು ಸಾರುವ ರಕ್ಷಾ ಬಂಧನವನ್ನು ಪುಟ್ಟ ಪುಟ್ಟ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಆಚರಿಸಿದರು.
ಭಾನುವಾರ ರಾಜಭವನದಲ್ಲಿ ಮಕ್ಕಳು ಉಪರಾಷ್ಟ್ರಪತಿಗಳಿಗೆ ರಾಖಿ ಕಟ್ಟಿ, ಹಣೆಗೆ ತಿಲಕವಿಟ್ಟು, ಆರತಿ ಮಾಡಿ ಸಂಭ್ರಮಿಸಿದರು. ಉಪರಾಷ್ಟ್ರಪತಿಗಳು ಮಕ್ಕಳಿಗೆ ಸಿಹಿ ನೀಡಿ ಆಶೀರ್ವದಿಸಿದರು.
ನಂತರ ಮಾತನಾಡಿದ ಅವರು, ರಕ್ಷಾ ಬಂಧನವು ಐಕ್ಯತೆ ಸಾರುವ ಬಂಧನವಾಗಿದೆ. ಪ್ರತಿಯೊಂದು ಹೆಣ್ಣು ಮಗುವಿನ ರಕ್ಷಣೆ ಮಾಡುವುದು ಸಹೋದರತೆಯ ಜವಾಬ್ದಾರಿಯಾಗಿರುತ್ತದೆ. ರಕ್ತ ಸಂಬಂಧದ ಜೊತೆಗೆ ಸಮಾಜದ ಪ್ರತಿ ಹೆಣ್ಣು ಮಗುವನ್ನು ನಾವು ರಕ್ಷಿಸಬೇಕು. ಮಹಿಳೆಯನ್ನು ಗೌರವಿಸುವುದರ ಜೊತೆಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಈ ಮೂಲಕ ದೇಶದ ಐಕ್ಯತೆ ಬಲಪಡಿಸಿದಂತಾಗುತ್ತದೆ ಎಂದರು.
ರಕ್ಷಾ ಬಂಧನ ಹಬ್ಬ ಸಂಬಂಧವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬವಾಗಿದ್ದು, ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಹೆಣ್ಣು ಮಕ್ಕಳನ್ನು ರಕ್ಷಿಸಿ, ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳುವ ಮೂಲಕ ದೇಶದ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭ ಕೋರಿದರು.
The Vice President, Shri M. Venkaiah Naidu celebrated #Rakshabandhan with school children at Raj Bhavan in Bengaluru today. #Rakhi pic.twitter.com/91oHXmsC8g
— Vice President of India (@VPSecretariat) August 22, 2021