ಬೆಂಗಳೂರಿನ ಕೋವಿಡ್ ಸಾವು, ಪಾಸಿಟಿವ್ ಪ್ರಕರಣಗಳ ಅಂಕಿ ಅಂಶ ಹೆಚ್ಚು ಪಾರದರ್ಶಕ: ಅಧ್ಯಯನ

ಆರು ಬೃಹತ್ ನಗರಗಳಲ್ಲಿ - ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬೈ ನಗರಗಳ ಪೈಕಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಹೆಚ್ಚು ಪಾರದರ್ಶಕವಾಗಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆರು ಬೃಹತ್ ನಗರಗಳಲ್ಲಿ - ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬೈ ನಗರಗಳ ಪೈಕಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಹೆಚ್ಚು ಪಾರದರ್ಶಕವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಜೀವನ್ ರಕ್ಷಾ ನಡೆಸಿದ ಅಧ್ಯಯನದ ಪ್ರಕಾರ, ಆರು ಮೆಗಾ ಸಿಟಿಗಳು ಜುಲೈನಲ್ಲಿ 36,688 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಆದಾಗ್ಯೂ, ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಈ ಆರು ಮೆಗಾ ನಗರಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 33,241 ಹೊಸ ಆರೋಗ್ಯ ವಿಮಾ ಹಕ್ಕುಗಳನ್ನು ನೋಂದಾಯಿಸಲಾಗಿದೆ. ಇದರರ್ಥ, ಜುಲೈನಲ್ಲಿ ಕೋವಿಡ್-ಪಾಸಿಟಿವ್ ರೋಗಿಗಳಲ್ಲಿ ಶೇ. 91 ರಷ್ಟು ಜನರು ಗುಂಪು ಅಥವಾ ವೈಯಕ್ತಿಕ ಆರೋಗ್ಯ ವಿಮೆ ಹೊಂದಿದ್ದರು(PM-JAY ಮತ್ತು ಇತರ ಸರ್ಕಾರಿ ಯೋಜನೆ ಫಲಾನುಭವಿಗಳನ್ನು ಹೊರತುಪಡಿಸಿ).

ರಾಜ್ಯವಾರು ಆರೋಗ್ಯ ವಿಮೆಯ ಐಆರ್ ಡಿಎ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಕೇವಲ ಶೇ. 2 ಜನರು ಮಾತ್ರ ಗುಂಪು / ವೈಯಕ್ತಿಕ ಆರೋಗ್ಯ ವಿಮೆ(ಸರ್ಕಾರೇತರ ಯೋಜನೆಗಳು) ವ್ಯಾಪ್ತಿಗೆ ಒಳಪಡುತ್ತಾರೆ. 
ಭಾರತದ ಮೆಗಾ ನಗರಗಳಲ್ಲಿನ ಶೇ. 10-20ರಷ್ಟು ಜನರು ಮಾತ್ರ ಕೋವಿಡ್ ಆರೋಗ್ಯ ವಿಮೆ ಲಾಭ ಪಡೆದಿದ್ದಾರೆ.

ಜುಲೈನಲ್ಲಿ ಅಹಮದಾಬಾದ್ ನಲ್ಲಿ 283 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆದರೆ ಕೋವಿಡ್‌ಗಾಗಿ 5,009 ಹೊಸ ವೈದ್ಯಕೀಯ ವಿಮಾ ಹಕ್ಕುಗಳನ್ನು ನೋಂದಾಯಿಸಲಾಗಿದೆ, ಇದು ವರದಿ ಮಾಡಿದ ಕೋವಿಡ್ ಪ್ರಕರಣಗಳಿಗಿಂತ 18 ಪಟ್ಟು ಹೆಚ್ಚಾಗಿದೆ ಮತ್ತು ಜುಲೈನಲ್ಲಿ 81 ಸಾವುಗಳು ದಾಖಲಾಗಿವೆ.

ಇನ್ನು ಬೆಂಗಳೂರಿನಲ್ಲಿ, 13,780 ಪ್ರಕರಣಗಳು ವರದಿಯಾಗಿವೆ ಮತ್ತು 4,991 ವಿಮೆ ಕ್ಲೇಮ್‌ ಮಾಡಲಾಗಿದ್ದು, ವಿಮಾ ಕ್ಲೈಮ್ ಶೇಕಡಾ 36ರಷ್ಟು ಇದೆ. 246 ಸಾವುಗಳು ಮತ್ತು 38 ವಿಮೆ ಕ್ಲೈಮ್‌ ಆದಿದ್ದು, ಇದು ಶೇ. 15 ರಷ್ಟು ಸಾವಿನ ಕ್ಲೈಮ್‌ಗಳನ್ನು ತೋರಿಸುತ್ತದೆ ಮತ್ತು ಇದು ಕಡಿಮೆ ಪ್ರಮಾಣವನ್ನು ಸೂಚಿಸುತ್ತದೆ ಎಂದು ವರದಿ ವಿವರಿಸಿದೆ.

"ಬೆಂಗಳೂರು ನಗರ ಕೋವಿಡ್ ಡೇಟಾ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕ ಮೆಗಾ ನಗರವಾಗಿದೆ. ರಾಜ್ಯ ಕೋವಿಡ್ ಬುಲೆಟಿನ್ ನಿಂದ ಸ್ವತಂತ್ರವಾದ ಸಮಗ್ರ ದೈನಂದಿನ ಬುಲೆಟಿನ್ ನೀಡುವ ಏಕೈಕ ಬೃಹತ್ ನಗರ ಇದಾಗಿದ್ದು, ದೈನಂದಿನ ಪರೀಕ್ಷಾ ದತ್ತಾಂಶ ಮತ್ತು ಇತರ ನಿರ್ಣಾಯಕ ಡೇಟಾವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿದೆ ಎಂದು ಜೀವನ್ ರಕ್ಷಾದ ಸಂಚಾಲಕ ಸಂಜೀವ್ ಮೈಸೂರು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com