ಕೊರೊನಾ ಮೃತ್ಯು ಪ್ರಮಾಣ 90-99ರ ವಯೋಮಾನದವರಲ್ಲಿ ಹೆಚ್ಚು: ರಾಜ್ಯದ ಕೋವಿಡ್ ವಾರ್ ರೂಮ್ ಮಾಹಿತಿ

ಕೊರೊನಾದಿಂದ ಮೃತಪಟ್ಟವರಲ್ಲಿ 90-99ರ ವಯೋಮಾನದ ಸೋಂಕಿತರೇ ಹೆಚ್ಚಾಗಿರುವುದು ಕಂಡುಬಂದಿದೆ. ಶೇ. 12 ಪ್ರತಿಶತ ಮೃತ್ಯು ಈ ವಯೋಮಾನದವರಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಕೊರೊನಾ ಮಾಧ್ಯಮ ಕೊಠಡಿಯ(ವಾರ್ ರೂಮ್) ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಇದುವರೆಗೂ ಕೊರೊನಾದಿಂದ ಮೃತಪಟ್ಟವರಲ್ಲಿ 90- 99ರ ವಯೋಮಾನದ ಸೋಂಕಿತರೇ ಹೆಚ್ಚಾಗಿರುವುದು ಕಂಡುಬಂದಿದೆ. ಶೇ. 12 ಪ್ರತಿಶತ ಮೃತ್ಯು ಈ ವಯೋಮಾನದವರಲ್ಲಿ ಸಂಭವಿಸಿದೆ. ಅದನ್ನು ಹೊರತು ಪಡಿಸಿದರೆ ಶೇ. 7.7 ಪ್ರತಿಶತ ಮಂದಿ 80- 89ರ ವಯೋಮಾನದವರಾಗಿದ್ದಾರೆ. ಶೇ.6 ಪ್ರತಿಶತ ಮಂದಿ 70- 79 ವಯೋಮಾನದವರಾಗಿದ್ದಾರೆ. ಇದು ಶೇಖಡಾವಾರು ಆಧಾರದಲ್ಲಿ ಸಿಕ್ಕ ಮಾಹಿತಿ.

ಆದರೆ ಸಂಖ್ಯಾವಾರು ಮಾಹಿತಿಯನ್ನು ಪರಿಗಣಿಸಿದರೆ ಅತಿ ಹೆಚ್ಚು ಮಂದಿ ಮೃತರು 60- 69 ವಯೋಮಾನಕ್ಕೆ ಸೇರಿದವರಾಗಿದ್ದಾರೆ. ಈ ವರ್ಗದಲ್ಲಿ 10,692 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 50- 59ರ ವಯೋಮಾನದ 8,181 ಮಂದಿ ಇದುವರೆಗೂ ಸಾವನ್ನಪ್ಪಿದ್ದಾರೆ. 70- 79ರ ವಯೋಮಾನದ 7,236 ಮಂದಿ ಸಾವನ್ನಪ್ಪಿದ್ದಾರೆ. 80- 89ರ ವಯೋಮಾನದ 2,668 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 90- 99ರ ವಯೋಮಾನದವರ ವರ್ಗದಲ್ಲಿ 540 ಮೃತ್ಯು ಸಂಭವಿಸಿದೆ.

ರಾಜ್ಯಾದ್ಯಂತ ಭಾನುವಾರ ಒಟ್ಟು 1,189 ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕು ಪ್ರಕರನಗಳ ಸಂಖ್ಯೆ 29,38,616 ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com