ಕೋವಿಡ್ ಆತಂಕ: ಮನೆಯಲ್ಲಿರುವುದೇ... ಸ್ನೇಹಿತರ ಭೇಟಿಯಾಗುವುದೇ?; ಗೊಂದಲದಲ್ಲಿ ವಿದ್ಯಾರ್ಥಿಗಳು!

ಕೋವಿಡ್ ಆತಂಕದ ನಡುವಲ್ಲೂ ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಶಾಲೆ ಹಾಗೂ ಕಾಲೇಜುಗಳ ಭೌತಿಕ ತರಗತಿಗೆ ಹಾಜರಾಗುವ ಕುರಿತು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಆತಂಕದ ನಡುವಲ್ಲೂ ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಶಾಲೆ ಹಾಗೂ ಕಾಲೇಜುಗಳ ಭೌತಿಕ ತರಗತಿಗೆ ಹಾಜರಾಗುವ ಕುರಿತು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ. 

ವರ್ಷಗಳ ಬಳಿಕ ಸ್ನೇಹಿತರನ್ನು ಶಾಲೆ ಹಾಗೂ ಕಾಲೇಜುಗಳಲ್ಲಿ ಭೇಟಿ ಮಾಡುವ ಅವಕಾಶ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಆದರೆ, ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. 

ವಿದ್ಯಾರ್ಥಿನಿ ಪ್ರಿಯಾ ಎಂಬುವವರು ಮಾತನಾಡಿ, ಕೊರೋನಾ ಮೂರನೇ ಅಲೆ ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಶಾಲೆಗಳ ಆರಂಭ ಮಾಡಿರುವುದು ಉತ್ತಮ ಆಲೋಚನೆಯಲ್ಲ. ಈ ಸಮಯದಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವುದು ಅಪಾಯಕಾರಿಯಾಗಿದೆ. ವಿದ್ಯಾರ್ಥಿಗಳಿಗಿನ್ನೂ ಲಸಿಕೆಯನ್ನು ನೀಡಿಲ್ಲ ಎಂದು ಹೇಳಿದ್ದಾರೆ. 

ದ್ವಿತೀಯ ಪಿಯುಸಿ ವಿದ್ಯಾರ್ಥಿ ನಂದನ್ ಎಸ್'ಬಿ ಎಂಬುವವರು ಮಾತನಾಡಿ, ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಸಾಕಷ್ಟು ಪೋಷಕರು ನಿರಾಕರಿಸುತ್ತಿದ್ದಾರೆ. ಶಾಲೆಗಳನ್ನು ಆರಂಭ ಕುರಿತು ಪೋಷಕರಿಗೆ ಪತ್ರಗಳನ್ನು ಬರೆಯಲಾಗಿದೆ. ಆನ್ ಲೈನ್ ತರಗತಿಗಳು ಇಷ್ಟವೇ ದರೆ, ಭೌತಿಕ ತರಗತಿಗಳಷ್ಟು ಆನ್'ಲೈನ್ ತರಗತಿಗಳು ಪರಿಣಾಮಕಾರಿಯಲ್ಲ ಎಂದು ತಿಳಿಸಿದ್ದಾರೆ. 

ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಮುಂದಿನ ತಿಂಗಳ ವರೆಗೂ ಆನ್'ಲೈನ್ ತರಗತಿಗಳ ನಡೆಸುವುದಾಗಿ ಶಾಲೆ ತಿಳಿಸಿದೆ. ಆದರೆ, ಆಫ್'ಲೈನ್ ತರಗತಿ ಕುರಿತು ಯಾವುದೇ ಸೂಚನೆಗಳನ್ನೂ ನೀಡಿಲ್ಲ. ನಾವು 18 ವರ್ಷಕ್ಕಿಂತ ಕೆಳಗಿರುವವರಾಗಿದ್ದು, ನಮಗಿನ್ನೂ ಲಸಿಕೆ ನೀಡಿಲ್ಲ. ಈ ಸಂದರ್ಭದಲ್ಲಿ ಆನ್'ಲೈನ್ ತರಗತಿಗಳೇ ಉತ್ತಮ, ಈಗಾಗಲೇ ರೂಪಾಂತರಿ ವೈರಸ್ ಗಳ ಸೋಂಕು ಆರಂಭವಾಗಿದ್ದು. ವಿದ್ಯಾರ್ಥಿಗಳಿಗೆ ಆನ್'ಲೈನ್ ತರಗತಿ ಮುಂದುವರೆಸುವುದು ಉತ್ತಮ ಎಂದಿದ್ದಾರೆ. 

ಸುರಕ್ಷತೆ ಬಗ್ಗೆ ಆಲೋಚಿಸುವುದಾದರೆ ಆನ್'ಲೈನ್ ತರಗತಿ ಉತ್ತಮವಾಗಿದೆ. ಆದರೆ, ಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ವರ್ಷವಾಗಿದೆ. ವರ್ಷದಿಂದ ಮನೆಯಲ್ಲಿಯೇ ಉಳಿದುಕೊಂಡಿರುವುದರಿಂದ ಶಾಲೆಗೆ ಹೋಗುವ ಮನಸ್ಸಾಗುತ್ತಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com