ಬೆಂಗಳೂರು: ಕೊರೋನಾ 2ನೇ ಅಲೆ ಆರಂಭ ಬಳಿಕ ಇದೇ ಮೊದಲ ಬಾರಿಗೆ ಶೂನ್ಯ ಸಾವು ದಾಖಲು!

ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಸೋಮವಾರ 270 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಂದೂ ಸಾವು ಸಂಭವಿಸಿಲ್ಲ. 2ನೇ ಅಲೆ ಆರಂಭವಾದ ನಂತರ ನಗರದಲ್ಲಿ ಕೋವಿಡ್ ಸಾವು ಶೂನ್ಯಕ್ಕೆ ಇಳಿದಿರುವುದು ಇದೇ ಮೊದಲಾಗಿದೆ. 
ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿರುವುದು.
ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿರುವುದು.

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಸೋಮವಾರ 270 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಂದೂ ಸಾವು ಸಂಭವಿಸಿಲ್ಲ. 2ನೇ ಅಲೆ ಆರಂಭವಾದ ನಂತರ ನಗರದಲ್ಲಿ ಕೋವಿಡ್ ಸಾವು ಶೂನ್ಯಕ್ಕೆ ಇಳಿದಿರುವುದು ಇದೇ ಮೊದಲಾಗಿದೆ. 

2020 ಜೂ.5 ಮತ್ತು 2021 ಜ.10ರಂದು ಸೋಂಕಿನಿಂದ ಸಾವು ಸಂಭವಿಸಿರಲಿಲ್ಲ. ಹೊಸ ಪ್ರಕರಣಗಳ ರತ್ತೆಯಿಂದ ಈವರೆಗೆ ಸೋಂಕಿತರ ಸಂಖ್ಯೆ 12,35,306ಕ್ಕೆ ಏರಿಕೆಯಾಗಿದೆ. 336 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 12,11,677 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 15,957 ಇದೆ. ಪ್ರಸ್ತುತ ನಗರದಲ್ಲಿ 7669 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಬಿಬಿಎಂಪಿ ವಾರ್ ರೂಂ ಮಾಹಿತಿ ನೀಡಿರುವ ಪ್ರಕಾರ, ಬೆಂಗಳೂರಿನಲ್ಲಿ ಸಾವಿನ ಪ್ರಮಾಣವು ಗರಿಷ್ಠ 2.07 ಶೇಕಡದಿಂದ 0.84 ಕ್ಕೆ ಇಳಿದಿದೆ. ನಗರದಲ್ಲಿ ಈ ವರೆಗೂ ಸಂಭವಿಸಿರುವ ಅತಿ ಹೆಚ್ಚು ಸಾವುಗಳು 70 ವರ್ಷಕ್ಕಿಂತ ಮೇಲ್ಪಟ್ಟವರದ್ದೇ ಆಗಿದ್ದು, 3,465 ಪುರುಷರು ಮತ್ತು 1,837 ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆಂದು ತಿಳಿಸಿದೆ. ಒಟ್ಟು 14 ಜಿಲ್ಲೆಗಳು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ ಎಂದು ತಿಳಿದುಬಂದಿದೆ. 

ಶೇ.7ಕ್ಕಿಂತ ಕಡಿಮೆಗೆ ಇಳಿದ ಪಾಸಿಟಿವಿಟಿ ದರ
ಚಿತ್ರದುರ್ಗ, ಉಡುಪಿ, ಯಾದಗಿರಿ, ಚಿಕ್ಕಮಗಳೂರು, ರಾಯಚೂರು, ಮಂಡ್ಯ, ಕೊಡಗು, ತುಮಕೂರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾಸನ, ಬೆಳಗಾವಿ, ದಾವಣಗೆರೆ ಹಾಗೂ ಗದಗ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.7ಕ್ಕಿಂತ ಕೆಳಗೆ ಇಳಿದಿದೆ ಎಂದು ತಿಳಿದುಬಂದಿದೆ. 

ಕಳೆದ 7 ದಿನಗಳಿಂದ 6 ಜಿಲ್ಲೆಗಳಲ್ಲಿ ಸತತ ಶೂನ್ಯ ಸಾವು ದಾಖಲಾಗಿದ್ದು, ಆಗಸ್ಟ್ 23 ರಂದು 23 ಜಿಲ್ಲೆಗಳಲ್ಲಿ ಶೂನ್ಯ ಸಾವುಗಳು ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com