ಮಾಸ್ಕ್ ಧರಿಸದ ಮಹಿಳೆಗೆ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್
ಮಾಸ್ಕ್ ಧರಿಸದ ಮಹಿಳೆಗೆ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್

ಕೋವಿಡ್-19: ನಗರದಲ್ಲಿ ಸೋಂಕಿನ ಜೊತೆಗೆ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯೂ ಇಳಿಕೆ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಇಳಿಕೆಯಾಗಿದೆ. ನಗರದಲ್ಲಿ ಸೋಂಕಿನ ಜೊತೆ ಜೊತೆಗೆ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯೂ ಇಳಿಕೆಯಾಗುತ್ತಿರುವ ಉತ್ತಮ ಬೆಳವಣಿಗಳು ಕಂಡು ಬರುತ್ತಿವೆ. 

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಇಳಿಕೆಯಾಗಿದೆ. ನಗರದಲ್ಲಿ ಸೋಂಕಿನ ಜೊತೆ ಜೊತೆಗೆ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯೂ ಇಳಿಕೆಯಾಗುತ್ತಿರುವ ಉತ್ತಮ ಬೆಳವಣಿಗಳು ಕಂಡು ಬರುತ್ತಿವೆ. 

ಆಗಸ್ಟ್ 12ರವರೆಗೆ 176 ಇದ್ದ ಕಂಟೈನ್ಮೆಂಟ್ ಗಳ ಸಂಖ್ಯೆ ಸೋಮವಾರ 116ಕ್ಕೆ ಇಳಿಕೆಯಾಗಿದೆ. ನಗರದ 8 ವಲಯಗಳ ಪೈಕಿ ಮಹದೇವಪುರದಲ್ಲಿ ಅತೀ ಹೆಚ್ಚು 49 ಕಂಟೈನ್ಮೆಂಟ್ ಝೋನ್ ಗಳಿವೆ ಎಂದು ತಿಳಿದುಬಂದಿದೆ. 

ಪೂರ್ವ ವಲಯದಲ್ಲಿ 38 ಕಂಟೈನ್ಮೆಂಟ್ ಝೋನ್ ಗಳಿದ್ದು, ಇದು ಎರಡನೇ ಸ್ಥಾನದಲ್ಲಿದೆ. ಈ ನಡುವೆ ಬಿಬಿಎಂಪಿ ವಾರ್ ರೂಮ್ ಮಾಹಿತಿ ನೀಡಿರುವ ಪ್ರಕಾರ, ಮಹಾದೇವಪುರದಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 27 ಹಾಗೂ ಪೂರ್ವ ವಲಯದಲ್ಲಿ 18 ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. 

ಪಶ್ಚಿಮ ವಲಯ ಮತ್ತು ರಾಜರಾಜೇಶ್ವರಿ ನಗರದಲ್ಲಿ ತಲಾ 10 ಕ್ಕಿಂತ ಕಡಿಮೆ ಕಂಟೈನ್‌ಮೆಂಟ್ ಝೋನ್ ಗಳಿದ್ದು, ದಾಸರಹಳ್ಳಿಯಲ್ಲಿ ಒಂದೂ ಕೂಡ ಕಂಟೈನ್ಮೆಂಟ್ ಝೋನ್ ಗಳು ಕಂಡು ಬಂದಿಲ್ಲ. ನಗರದಲ್ಲಿ 940 ವಲಯಗಳನ್ನು ಈ ಹಿಂದೆ ಕಂಟೈನ್ಮೆಂಟ್ ಝೋನ್ ಗಳೆಂದು ಘೋಷಣೆ ಮಾಡಲಾಗಿತ್ತು. ಇದೀಗ 824 ವಲಯಗಳನ್ನು ಈ ಪಟ್ಟಿಯಿಂದ ತೆಗೆಯಲಾಗಿದೆ. 

ಮಹಾದೇವಪುರದ ವಲಯ ಅಧಿಕಾರಿಯೊಬ್ಬರು ಮಾತನಾಡಿ, ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ, ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಸಾಮಾನ್ಯವಾಗಿ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮೂರು ಅಥವಾ ಹೆಚ್ಚಿನ ಪ್ರಕರಣಗಳು ಕಂಡು ಬಂದಾಗ ನಾವು ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಗುರುತಿಸುತ್ತೇವೆ. ಸಾಕಷ್ಟು ಪ್ರಕರಣಗಳು ಅಪಾರ್ಟ್'ಮೆಂಟ್ ಗಳಲ್ಲಿ ವರದಿಯಾಗುತ್ತಿವೆ. ಕಠಿಣ ಕ್ರಮ ಹಾಗೂ ಐಸೋಲೇಷನ್ ಕ್ರಮಗಳಿಂದಾಗಿ ಸೋಂಕು ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಜನರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು ಪರಿಶೀಲನೆ ನಡೆಸಲು ನಗರದಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ ಎಂದು ದಕ್ಷಿಣ ವಲಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೆಲ ವಾರಗಳಿಂದ ದೊಡ್ಡ ಪ್ರಮಾಣದ ಯಾವುದೇ ರೀತಿಯ ಕ್ಲಸ್ಪರ್ ಪ್ರಕರಣಗಳು ಕಂಡು ಬಂದಿಲ್ಲ. ಇದು ಉತ್ತಮವಾದ ಸಂಕೇತ ಎಂದಿದ್ದಾರೆ. 

ಆರೋಗ್ಯ ಆಯುಕ್ತ ರಣದೀಪ್ ಡಿ ಅವರು ಪ್ರತಿಕ್ರಿಯೆ ನೀಡಿ, "ಲಸಿಕೆ ಕೋವಿಡ್‌ನ ತೀವ್ರತೆಯನ್ನು ಕಡಿಮೆ ಮಾಡಿದೆ. ಅಲ್ಲದೆ, ಸೋಂಕಿತರ ಸಂಪರ್ಕಿತರನ್ನು ಶೀಘ್ರಗತಿಯಲ್ಲಿ ಪತ್ತೆ ಹಚ್ಚುತ್ತಿರುವುದು ಕಂಟೈನ್ಮೆಂಟ್ ತಂತ್ರಗಳು ಸಹಾಯ ಮಾಡುತ್ತಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಸಹಕಾರ ನೀಡುತ್ತಿದ್ದು, ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com