ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 75 ಹುದ್ದೆಗಳು ಖಾಲಿ, ಆಸಕ್ತರು ಅರ್ಜಿ ಸಲ್ಲಿಸಬಹುದು

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 75 ಹುದ್ದೆಗಳು ಖಾಲಿ
ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 75 ಹುದ್ದೆಗಳು ಖಾಲಿ

ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ಹೆಸರು: ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಜನರಲ್ ಮೆಡಿಸಿನ್, ಎಂ.ಬಿ.ಬಿ.ಎಸ್, ಫಿಜಿಷಿಯನ್, ಡೆಂಟಲ್ ಟೆಕ್ನಿಷಿಯನ್, ಶುಶ್ರೂಷಕಿಯರು,  ಓ.ಟಿ. ಟೆಕ್ನಿಷಿಯನ್, ಕ್ಷೇತ್ರ ಲಸಿಕಾ ಕಾರ್ಯಕರ್ತರು, ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್, ಮೈಕ್ರೋ ಬಯೋಲಾಜಿಸ್ಟ್, ಜಿಲ್ಲಾ ಆಶಾ ಮೇಲ್ವಿಚಾರಕರು, ತಾಲೂಕಾ ಆಶಾ ಮೇಲ್ವಿಚಾರಕರು, ಡಿ.ಇ.ಐ.ಸಿ. ಮ್ಯಾನೇಜರ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು

ಒಟ್ಟು ಹುದ್ದೆಗಳ ಸಂಖ್ಯೆ: 75

ಕರ್ತವ್ಯ ಸ್ಥಳ: ಉತ್ತರ ಕನ್ನಡ ಜಿಲ್ಲೆ

ವೇತನ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40 ಸಾವಿರ ರೂ ಗೌರವ ಧನ ನೀಡಲಾಗುತ್ತದೆ.

ಅರ್ಹತೆ:  ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಜನರಲ್ ಮೆಡಿಸಿನ್ ಹುದ್ದೆಗೆ ಸಂಬಂಧಿಸಿದ ತಜ್ಞತಿ ವಿಷಯದಲ್ಲಿ ಎಂ.ಡಿ/ ಎಂ.ಎಸ್/ ಡಿಪ್ಲೋಮಾ ಪದವಿ ಪಡೆದಿರಬೇಕು.

ಫಿಜಿಷಿಯನ್ ಹುದ್ದೆಗೆ ಎಂ.ಬಿ.ಬಿ.ಎಸ್, ಎಂ.ಡಿ, ಅಥವಾ ಸಮಾನಾಂತರ ಪದವಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಹೊಂದಿರಬೇಕು. 

ಡೆಂಟಲ್ ಟಿಕ್ನಿಷಿಯನ್ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮಾ ಇನ್ ಡೆಂಟಲ್ ಟಿಕ್ನಿಷಿಯನ್ ಹಾಗೂ ರಾಜ್ಯ ದಂತ ಕೌನ್ಸಿಲ್ ನಿಂದ ರಿಜಿಸ್ಟ್ರೇಷನ್ ಹೊಂದಿರಬೇಕು.

ಶುಶ್ರೂಷಕಿಯರ ಹುದ್ದೆಗೆ ಎಂ.ಎಸ್ಸಿ/ಬಿ.ಎಸ್ಸಿ/ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆಯೊಂದಿಗೆ ಪಬ್ಲಿಕ್ ಹೆಲ್ತ್/ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

ಓ.ಟಿ. ಟೆಕ್ನಿಷಿಯನ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮ ಇನ್ ಓ.ಟಿ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು

ಕ್ಷೇತ್ರ ಲಸಿಕಾ ಕಾರ್ಯಕರ್ತರು ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಮ್.ಎಸ್.ಡಬ್ಲ್ಯೂ ಪದವಿ ಅಥವಾ ತತ್ಸಮಾನ ಪದವಿಯೊಂದಿಗೆ 2 ವರ್ಷಗಳ ಸರಕಾರಿ ಅಥವಾ ಅರೇಸರಕಾರಿ ಎನ್.ಜಿ.ಓ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಆಶಾ ಮೇಲ್ವಿಚಾರಕರು ಹುದ್ದೆಗೆ ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೋಮಾ ಇನ್ ನರ್ಸಿಂಗ್ ಆಯುಷ್ ಕೋರ್ಸ್ ಗಳಲ್ಲಿ ತೇರ್ಗಡೆಯಾಗಿರಬೇಕು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ ಎಂ.ಬಿ.ಎ ಪದವಿ ಪಡೆದಿರಬೇಕು

ಆಯ್ಕೆ ವಿಧಾನ: ಗುತ್ತಿಗೆ ಆಧಾರದಲ್ಲಿ ನೇಮಕ

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-09-2021

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಕಚೇರಿಗೆ ಖುದ್ದಾಗಿ ಆಗಮಿಸಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ
ಕಚೇರಿ ದೂರವಾಣಿ ಸಂಖ್ಯೆ: 08382 226339

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com