ಬೆಂಗಳೂರಿನ ಹೆಚ್ ಎಎಲ್ ಗೆ ವಾಯುಪಡೆ ಮುಖ್ಯಸ್ಥ ಭೇಟಿ: ಎಲ್ ಸಿಎ ಹಗುರ ಯುದ್ಧ ವಿಮಾನದಲ್ಲಿ ಹಾರಾಟ, ಪರಿಶೀಲನೆ

ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಆರಂಭಿಕ ಕಾರ್ಯಾಚರಣೆಯ ಅನುಮೋದನೆ (ಐಒಸಿ) ಗುಣಮಟ್ಟ ಹಗುರ ಯುದ್ಧ ವಿಮಾನ ತೇಜಸ್ ನಲ್ಲಿ ಆಗಮಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ತೇಜಸ್ ಹಗುರ ಯುದ್ಧ ವಿಮಾನ
ತೇಜಸ್ ಹಗುರ ಯುದ್ಧ ವಿಮಾನ

ಬೆಂಗಳೂರು: ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಆರಂಭಿಕ ಕಾರ್ಯಾಚರಣೆಯ ಅನುಮೋದನೆ (ಐಒಸಿ) ಗುಣಮಟ್ಟ ಹಗುರ ಯುದ್ಧ ವಿಮಾನ ತೇಜಸ್ ನಲ್ಲಿ ಆಗಮಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬೆಂಗಳೂರಿನ ಡಿಆರ್ ಡಿಒ ಮತ್ತು ಹೆಚ್ ಎಎಲ್ ಗೆ ಮೊನ್ನೆ ಆಗಸ್ಟ್ 23 ಮತ್ತು 24ರಂದು ಭಾರತೀಯ ವಾಯುಪಡೆಯ ಘಟಕಗಳು ಮತ್ತು ವಿಮಾನ ಪರೀಕ್ಷಾ ಕೇಂದ್ರಗಳಿಗೆ ವಾಯುಪಡೆ ಮುಖ್ಯಸ್ಥರು ಭೇಟಿ ನೀಡಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಅವರು ತಮ್ಮ ಬೆಂಗಳೂರು ಭೇಟಿ ಸಂದರ್ಭದಲ್ಲಿ ತೇಜಸ್ ಹಗುರ ಯುದ್ಧ ವಿಮಾನದ ಆರಂಭಿಕ ಕಾರ್ಯಾಚರಣೆ ಅನುಮೋದನೆ ಕೇಂದ್ರಕ್ಕೆ ಸಹ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.

ಭಾರತೀಯ ವಾಯುಪಡೆ ಮುಖ್ಯಸ್ಥರ ಭೇಟಿಯ ಫೋಟೋಗಳನ್ನು ಟ್ವೀಟ್ ಮಾಡಿದೆ. ಅವರು ತೇಜಸ್ ಎಂಕೆ 1 ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಏರ್ ಕ್ರಾಫ್ಟ್ ಮತ್ತು ಸಿಸ್ಟಮ್ಸ್ ಟೆಸ್ಟಿಂಗ್ ಇನ್ಸ್ಟಾಬ್ಲಿಷ್ಮೆಂಟ್ (ASTE) ಗೆ ಭೇಟಿ ನೀಡಿದಾಗ, ಅಲ್ಲಿ ನಡೆಯುತ್ತಿರುವ ಯೋಜನೆಗಳ ಅವಲೋಕನ ನಡೆಸಿದ್ದಾರೆ ಜೊತೆಗೆ ಕಾರ್ಯಾಚರಣೆಯ ಪ್ರಯೋಗಗಳ ಪ್ರಗತಿಯ ವಿವರ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com