ಅನುದಾನಿತ ಸ್ಥಾನಮಾನ ನೀಡದಿದ್ದರೆ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಂದ ಪ್ರತಿಭಟನೆಯ ಎಚ್ಚರಿಕೆ

1995ರ ನಂತರ ಸ್ಥಾಪನೆಯಾಗಿರುವ ಶಾಲೆಗಳಿಗೆ ಸರ್ಕಾರ ಅನುದಾನಿತ ಸ್ಥಾನಮಾನ ನೀಡದಿದ್ದರೆ ಸೆಪ್ಟೆಂಬರ್ 15 ರ ನಂತರ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ಎಚ್ಚರಿಕೆ ನೀಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 1995ರ ನಂತರ ಸ್ಥಾಪನೆಯಾಗಿರುವ ಶಾಲೆಗಳಿಗೆ ಸರ್ಕಾರ ಅನುದಾನಿತ ಸ್ಥಾನಮಾನ ನೀಡದಿದ್ದರೆ ಸೆಪ್ಟೆಂಬರ್ 15 ರ ನಂತರ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ಎಚ್ಚರಿಕೆ ನೀಡಿವೆ.

ಈ ಹಿಂದೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ (RUPSA ) ಕೂಡಾ ಯಡಿಯೂರಪ್ಪ ಅವರ ಮುಂದೆ ಇದೇ ಬೇಡಿಕೆಯನ್ನಿಟ್ಟಿತ್ತು. ಆದರೆ, ಅವರ ಬೇಡಿಕೆ ಈಡೇರಿಸಿರಲಿಲ್ಲ. ಸಂಬಳ ಇಲ್ಲದೆ ಸಾವಿರಾರು ಶಿಕ್ಷಕರು ಬೋಧಿಸುತ್ತಿದ್ದು, ಸರ್ಕಾರದ ಮಧ್ಯಪ್ರವೇಶಕ್ಕಾಗಿ ಪ್ರತಿದಿನ ಅವರು ಕಾಯುತ್ತಿರುವುದಾಗಿ ಅಸೋಸಿಯೇಷನ್ ಹೇಳಿದೆ.

ಬೇಡಿಕೆ ಈಡೇರಿಸುವಂತೆ ಮಾರ್ಚ್ 23 ರಂದು ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೇವು. ಮಾರ್ಚ್ 31ರೊಳಗೆ ನೋಡುವುದಾಗಿ ಹೇಳಿದ್ದ ಸಚಿವರು, ರಾಜ್ಯದ ಗಮನ ಮತ್ತೆ ಆರೋಗ್ಯ ತುರ್ತುಪರಿಸ್ಥಿತಿಯತ್ತ ಸ್ಥಳಾಂತರವಾಗಿರುವುದಾಗಿ ಹೇಳಿದ್ದರು ಎಂದು ಅಸೋಸಿಯೇಷನ್ ಸದಸ್ಯರೊಬ್ಬರು ತಿಳಿಸಿದರು.

ಹಳೆಯ ಪಿಂಚಣಿ ವ್ಯವಸ್ಥೆ ಅನುಷ್ಠಾನಕ್ಕೆ ಒತ್ತಾಯಿಸಿದ ಅವರು, ಸರ್ಕಾರದ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com