ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ರೂ.1 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿದ ಬಿಎಸ್'ವೈ!

ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ರಾಜಕೀಯ ಜಂಜಾಟವನ್ನೆಲ್ಲಾ ಬಿಟ್ಟು ಕುಟುಂಬಸ್ಥರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿ, ಮರಳಿ ರಾಜ್ಯಕ್ಕೆ ವಾಪಸ್ಸಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ರೂ.1 ಕೋಟಿ ವೆಚ್ಚದ ಕಾರೊಂದನ್ನು ಖರೀದಿ ಮಾಡಿದ್ದಾರೆ. 
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ರಾಜಕೀಯ ಜಂಜಾಟವನ್ನೆಲ್ಲಾ ಬಿಟ್ಟು ಕುಟುಂಬಸ್ಥರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿ, ಮರಳಿ ರಾಜ್ಯಕ್ಕೆ ವಾಪಸ್ಸಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ರೂ.1 ಕೋಟಿ ವೆಚ್ಚದ ಕಾರೊಂದನ್ನು ಖರೀದಿ ಮಾಡಿದ್ದಾರೆ. 

ಸುಮಾರು  1 ಕೋಟಿ ಬೆಲೆ ಬಾಳುವ ಬಿಳಿ ಬಣ್ಣದ ಕೆಎ -05- ಎನ್'ಡಿ – 4545 ನೋಂದಣಿ ಸಂಖ್ಯೆಯ ಟಯೋಟಾ ವೆಲ್‌ಫೈರ್ ಕಾರನ್ನು ಯಡಿಯೂರಪ್ಪ ಅವರು ಸ್ವಂತ ಬಳಕೆಗೆ ಖರೀದಿ ಮಾಡಿದ್ದಾರೆ. 

ರಾಜ್ಯ ಪ್ರವಾಸಕ್ಕೆ ಹೈಕಮಾಂಡ್​ ಈಗಾಗಲೇ ಗ್ರೀನ್​ ಸಿಗ್ನಲ್​ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಸ ಕಾರಿನಲ್ಲೇ ಯಡಿಯೂರಪ್ಪ ಅವರು ಪ್ರವಾಸ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ. 

ಇಷ್ಟು ದಿನ ಸರ್ಕಾರ ಅಧಿಕೃಕ ಕಾರನ್ನು ಯಡಿಯೂರಪ್ಪ ಅವರು ಬಳಕೆ ಮಾಡುತ್ತಿದ್ದರು. ಇದಕ್ಕೂ ಮುನ್ನ ಪುತ್ರ ವಿಜಯೇಂದ್ರ ಅವರ ಕಾರನ್ನು ಬಳಕೆ ಮಾಡುತ್ತಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಯಡಿಯೂರಪ್ಪ ಅವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ ಎಂದು ತಿಳಿಸಲಾಗಿತ್ತು. 

ಪ್ರಸ್ತುತ ಯಡಿಯೂರಪ್ಪ ಅವರ ಖರೀದಿ ಮಾಡಿರುವ ಕಾರಿನ ಬೆಲೆ ರೂ.87 ಲಕ್ಷವಾಗಿದ್ದು, ತೆರಿಗೆ ಸೇರಿ ಒಟ್ಟಾರೆ ಕಾರಿನ ಬೆಲೆ ರೂ.1 ಕೋಟಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿಗಳ ಆಪ್ತ ಮೂಲಗಳು ಮಾಹಿತಿ ನೀಡಿವೆ. 

ಈ ನಡುವೆ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿ, ಮಾಜಿ ಮುಖ್ಯಮಂತ್ರಿಗಳ ಮೊದಲ ಕಾರು ಇದಾಗಿದೆ ಎಂದು ಹೇಳಿದ್ದಾರೆ. 

1980ರಲ್ಲಿ ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದರು. ಈ ಮೂಲಕ ಪಕ್ಷದ ಪರ ಪ್ರಚಾರವನ್ನೂ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ರಾಜ್ಯದ ವಿಧಾನಸಭೆಯಲ್ಲಿ ಯಡಿಯೂರಪ್ಪ ಸೇರಿ ಇಬ್ಬರು ಬಿಜೆಪಿ ಶಾಸಕರು ಮಾತ್ರ ಇದ್ದರು. ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ ಬಳಿಕವೂ ಪಕ್ಷವನ್ನು ಬಲಪಡಿಸುವುದಾಗಿ ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com