ಕಾಂಗ್ರೆಸ್ ನಾಯಕರು ರೇಪ್ ಮಾಡಿದ್ದರೆ ಅವರನ್ನು ಬಂಧಿಸಲಿ, ಗೃಹ ಸಚಿವರ ಹೇಳಿಕೆ ನಾಚಿಕೆಗೇಡು: ಡಿ.ಕೆ. ಶಿವಕುಮಾರ್

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ರೇಪ್ ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಳ್ಳುತ್ತಿದೆ. ಒಬ್ಬ ರಾಜ್ಯದ ಗೃಹ ಸಚಿವರಾಗಿ ಇಷ್ಟು ಬಾಲಿಶವಾಗಿ ಮಾತನಾಡುವುದು ಎಷ್ಟು ಸರಿ, ರಾಜ್ಯದ ಜನರಿಗೆ, ಮಹಿಳೆಯರಿಗೆ ಹಾಗಾದರೆ ರಕ್ಷಣೆ ಎಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ರೇಪ್ ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಳ್ಳುತ್ತಿದೆ. ಒಬ್ಬ ರಾಜ್ಯದ ಗೃಹ ಸಚಿವರಾಗಿ ಇಷ್ಟು ಬಾಲಿಶವಾಗಿ ಮಾತನಾಡುವುದು ಎಷ್ಟು ಸರಿ, ರಾಜ್ಯದ ಜನರಿಗೆ, ಮಹಿಳೆಯರಿಗೆ ಹಾಗಾದರೆ ರಕ್ಷಣೆ ಎಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನನ್ನನ್ನು ರೇಪ್ ಮಾಡಲು ನೋಡುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಗೃಹ ಸಚಿವರು ನೀಡುತ್ತಿದ್ದಾರೆ. ರೇಪ್ ಪದ ಬಿಜೆಪಿಯವರಿಗೆ, ಗೃಹ ಸಚಿವರಿಗೆ ಸರಳ, ಪ್ರಿಯವಾದ ಪದ ಅಂತ ಕಾಣುತ್ತಿದೆ. ಅವರ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರೆಲ್ಲರೂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡಲು ನೋಡುತ್ತಿದ್ದಾರೆ ಎಂದ ಮೇಲೆ ಇಲಾಖೆಯ ಆಡಳಿತ, ಕಾರ್ಯವೈಖರಿ ಹೇಗಿರಬಹುದು, ಗೃಹ ಸಚಿವರ ಮೇಲೆ ಯಾರ್ಯಾರು ರೇಪ್ ಮಾಡಲು ನೋಡುತ್ತಿದ್ದಾರೆಯೋ ಅವರ ಮೇಲೆ ಕೇಸು ಹಾಕಿ ಬಂಧಿಸಲಿ, ಅದು ಯಾರೇ ಮಾಡಿರಲಿ ಉಗ್ರಪ್ಪ ಮಾಡಿರಲಿ, ರೇವಣ ಮಾಡಿರಲಿ, ಸಿದ್ದರಾಮಯ್ಯನವರು ಮಾಡಿರಲಿ ಅಥವಾ ನಾನೇ ಮಾಡಿರಲಿ ಅವರ ಮೇಲೆ ಕೇಸು ಹಾಕಿ ಬಂಧಿಸುವ ಕೆಲಸ ಮಾಡಲಿ ಎಂದು ನಾನು ಪೊಲೀಸ್ ಮಹಾ ನಿರ್ದೇಶಕರಿಗೆ ಒತ್ತಾಯಿಸುತ್ತಿದ್ದೇನೆ ಎಂದರು.

ಘಟನೆ ನಡೆದು 48 ಗಂಟೆಯಾದರೂ ಇನ್ನೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ, ಇದು ಪೊಲೀಸ್ ಇಲಾಖೆಯ ವೈಫಲ್ಯವಾಗಿದ್ದು ಇಲಾಖೆಯ ಬಗ್ಗೆ ನಾಚಿಕೆಯೆನಿಸುತ್ತದೆ ಎಂದರು.ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡುತ್ತೇವೆ. ಕಾಂಗ್ರೆಸ್ ನ ನಾಯಕರು ಮೈಸೂರಿಗೆ ಹೋಗಿ ಸ್ಥಳ ಪರಿಶೀಲಿಸಿ ವರದಿಯನ್ನು ನೀಡಬೇಕೆಂದು ಸೂಚಿಸಿದ್ದೇನೆ ಎಂದರು.

ಗೃಹ ಸಚಿವರು ಅತ್ಯಾಚಾರಕ್ಕೊಳಗಾದ ಯುವತಿಯ ಗುರುತನ್ನು ಭಾಗಶಃ ಬಹಿರಂಗಪಡಿಸಿದ್ದು ಅದು ಸರಿಯಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಯುವತಿಗೆ ಮತ್ತು ಆಕೆಯ ಪೋಷಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com