ಕಡತಗಳ ವಿಲೇವಾರಿ ಪ್ರಕ್ರಿಯೆಗೆ ಅನಗತ್ಯ ವಿಳಂಬ ಬೇಡ: ಇಲಾಖಾ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಸಾದ್ಯವಾದಷ್ಟು ಬೇಗ ಕಡತಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದರು. ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದ್ದರೂ ಕೆಲವು ಪ್ರಮುಖ ಕಡತಗಳು ಇನ್ನೂ ಕ್ಲಿಯರ್ ಆಗಿಲ್ಲ.  ಇನ್ನೂ ಕೆಲವು ಪ್ರಮುಖ ಫೈಲ್ ಗಳು ಆರು ತಿಂಗಳಾದರೂ ವಿಲೇವಾರಿಯಾಗಿಲ್ಲ.

ಶೀಘ್ರದಲ್ಲೇ ಎಲ್ಲಾ ಇಲಾಖೆಗಳು ಮತ್ತು ಅಧಿಕಾರಿಗಳೊಂದಿಗೆ ಕಡತಗಳ ಬಾಕಿ ಮತ್ತು ತೆರವು ಕುರಿತು ಸಭೆ ನಡೆಸುವುದಾಗಿ  ಸಿಎಂ ಹೇಳಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಡಿಪಿಎಆರ್) ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಮಂಗಳವಾರ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶವನ್ನು ಜಾರಿಗೊಳಿಸಿದ್ದು, ಬಾಕಿ ಇರುವ ಕಡತಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಎಲ್ಲ ಹಳೆಯ ಕಡತಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಡತಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬೇಕು: ಒಂದು ವರ್ಷಕ್ಕಿಂತ ಹಳೆಯದು (ಶೇ.100ರಷ್ಟು), 6 ತಿಂಗಳುಗಳಿಗಿಂತ ಹಳೆಯದು (ಶೇ.50ರಷ್ಟು) ಮತ್ತು ಒಂದು ತಿಂಗಳಿಗಿಂತ ಹಳೆಯದು ಎಂದು ವಿಂಗಡಿಸಬೇಕು. ಕಡತಗಳನ್ನು ತೆರವುಗೊಳಿಸಲು
ವಿಫಲವಾದ ಕಾರಣಗಳನ್ನು ಅಧಿಕಾರಿಗಳು ಒಪ್ಪಿಕೊಳ್ಳಬೇಕು.

ಮುಖ್ಯಮಂತ್ರಿಗಳ ಈ ಆದೇಶದಿಂದ ವಿಧಾನಸೌಧದ ಅಧಿಕಾರಿಗಳು ವಿಚಲಿತರಾಗಿಲ್ಲ, ಏಕೆಂದರೆ ಕಳೆದ ನಾಲ್ಕು ದಶಕಗಳಿಂದ ಇಂತದ ಅಧಿಸೂಚನೆಗಳು ಅಧಿಕಾರಿಗಳಿಗೆ ಪದೇ ಪದೇ ಬರುತ್ತಲೇ ಇರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲ್ಲಾ ಕಡತಗಳನ್ನು ತೆರವುಗೊಳಿಸುವವರೆಗೂ ವಿಧಾನಸೌಧಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗದು ಎಂದು ಈ ಹಿಂದೆ ಮಾಜಿ ಸಿಎಂ ಗುಂಡು ರಾವ್ ಆದೇಶವನ್ನು ಜಾರಿಗೊಳಿಸಿದಾಗ ಅವರು ಕಡತವನ್ನು ತೆರವುಗೊಳಿಸುವ ಆದೇಶವನ್ನು ನೆನಪಿಸಿಕೊಂಡಿದ್ದಾರೆ.

ಅನಗತ್ಯ ಕಡತಗಳ ಬಾಕಿಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮೌಖಿಕವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಂದು ವಿಶ್ವಾಸಾರ್ಹ ಮೂಲವು ಎಲ್ಲಾ ಹಳೆಯ ಫೈಲ್‌ಗಳನ್ನು ತೆರವುಗೊಳಿಸಲಾಗಿದೆ ಅಥವಾ ಡಂಪ್ ಮಾಡಲಾಗಿದೆ ಎಂದು ಇದರ ಅರ್ಥವಲ್ಲ.

ಕೆಲವು ಪ್ರಾಜೆಕ್ಟ್‌ಗಳು ವರ್ಷಗಳವರೆಗೆ ನಡೆಯುತ್ತವೆ, ಮತ್ತು ಫೈಲ್‌ಗಳು ಕೆಲಸದ ಪ್ರಗತಿಯ ದಾಖಲೆಯಾಗಿದೆ. ಮುಂದಿನ ವಿಧಾನಮಂಡಲ ಅಧಿವೇಶನಕ್ಕೆ ಕೇವಲ ಮೂರು ವಾರಗಳು ಬಾಕಿಯಿರುವಾಗ, ಸರ್ಕಾರದ ಮತ್ತು ಸಿಎಂ ಬೊಮ್ಮಾಯಿ ವಿರುದ್ಧ ಯಾರೋಬ್ಬರು ಬೆರಳು ಮಾಡಿ ತೋರಿಸಬಾರದು ಎಂಬ ಉದ್ದೇಶದಿಂದ ಕಡತ ವಿಲೇವಾರಿಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com