ಕೊಡಗು: ಮನೆ ಕಳೆದುಕೊಂಡು ನಿರಾಶ್ರಿತರಾದ ಎಂಟು ಮಂದಿಯ ಕುಟುಂಬ, ನ್ಯಾಯ ಒದಗಿಸಲು ಕೋರಿಕೆ

ಕೊಡಗಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಯರವ ಸಮುದಾಯದ ಕುಟುಂಬವೊಂದು ನ್ಯಾಯ ಒದಗಿಸುವಂತೆ ಕೋರಿದೆ.ಹುಟ್ಟಿದಾಗಿನಿಂದ ವಾಸಿಸುತ್ತಿದ್ದ ಮನೆ ಕಳೆದುಕೊಂಡ ಮಹಿಳೆ ಪಂಜಿರಿ ಯರವರ ಕುಂಜಿಯ ನೋವು ಹೇಳತೀರದಾಗಿತ್ತು. 
ಮನೆ ಧ್ವಂಸಗೊಂಡಿರುವ ಚಿತ್ರ
ಮನೆ ಧ್ವಂಸಗೊಂಡಿರುವ ಚಿತ್ರ

ಮಡಿಕೇರಿ: ಕೊಡಗಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಯರವ ಸಮುದಾಯದ ಕುಟುಂಬವೊಂದು ನ್ಯಾಯ ಒದಗಿಸುವಂತೆ ಕೋರಿದೆ. ಹುಟ್ಟಿದಾಗಿನಿಂದ ವಾಸಿಸುತ್ತಿದ್ದ ಮನೆ ಕಳೆದುಕೊಂಡ ಮಹಿಳೆ ಪಂಜಿರಿ ಯರವರ ಕುಂಜಿಯ ನೋವು ಹೇಳತೀರದಾಗಿತ್ತು. ಧ್ವಂಸಗೊಂಡಿರುವ ಮನೆಯನ್ನು ನೋಡುತ್ತಾ ಮಳೆಯಲ್ಲಿಯೇ ಅಳುತ್ತಾ ಕುಳಿತಿದ್ದರು.

ಕುಂಜಿ ದಕ್ಷಿಣ ಕೊಡಗಿನ ದೇವರಪುರ ಗ್ರಾಮದ ಕನ್ನಂಬಾಡಿ ನಿವಾಸಿ. ಅನೇಕ ಎಸ್ಟೇಟ್ ಗಳಲ್ಲಿ ಕಾರ್ಮಿಕರಾಗಿ ವಾಸಿಸುತ್ತಿದ್ದ ಇವರು ಕನ್ನಂಬಾಡಿಯ ಸರ್ವೆ ನಂಬರ್ 215/8ರಲ್ಲಿ ಶೀಟ್ ಮನೆಯೊಂದರಲ್ಲಿ ಎಳು ಮಂದಿ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು. ಸುಮಾರು 50 ವರ್ಷಗಳ ಹಿಂದೆ ಆಂಗ್ಲೋ ಇಂಡಿಯನ್ ವಾರಿಂಗ್ ಕುಟುಂಬದಿಂದ ತನ್ನ ತಾತನಿಗೆ ಉಡುಗೊರೆಯಾಗಿ ಬಂದಿದ್ದ ತುಂಡು ಭೂಮಿಯಲ್ಲಿ ಕುಂಜಿ ವಾಸಿಸುತ್ತಿದ್ದರು.

ಕುಂಜಿಯ ಅಜ್ಜ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಕೆಯ ಕುಟುಂಬಕ್ಕೆ ತಮ್ಮ ಕುಟುಂಬದಿಂದ 215/8 ಸರ್ವೇ ನಂಬರ್ ಭೂಮಿಯನ್ನು ಉಡುಗೊರೆಯಾಗಿ ನೀಡಲಾಯಿತು. 215/8 ರಲ್ಲಿನ ಭೂಮಿಯು ಇನ್ನೂ ವಾರಿಂಗ್ ಕುಟುಂಬದ ಒಡೆತನದಲ್ಲಿದೆ ಮತ್ತು ಕುಂಜಿಯ ಕುಟುಂಬವನ್ನು ಸ್ಥಳವನ್ನು ಖಾಲಿ ಮಾಡುವಂತೆ ನಾವು ಎಂದಿಗೂ ಕೇಳಿರಲಿಲ್ಲ ಎಂದು ಈಗ ಚೆನ್ನೈನಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಅವ್ರಿಲ್ ಹೇಳಿದರು. ಸರ್ವೇ ನಂಬರ್ 215/8ರಲ್ಲಿ ಕುಟುಂಬದ ತೆರವಿಗಾಗಿ ಕುಟುಂಬ ಯಾವುದೇ ಕೋರ್ಟ್ ನೋಟಿಸ್ ಪಡೆದಿಲ್ಲ ಎಂದು ಅವರು ದೃಢಪಡಿಸಿದರು.

ಆದಾಗ್ಯೂ, ಆಗಸ್ಟ್ 20 ರಂದು ನೆರೆಯ ಪ್ಲಾಟ್ ನ ಸುಷ್ಮಾ ಸುಬ್ಬಯ್ಯ ನೇತೃತ್ವದಲ್ಲಿ ಕುಂಜಿ ಅವರ ಮನೆಯನ್ನು ಧ್ವಂಸ ಗೊಳಿಸಲಾಗಿದೆ. ನಮಗೆ ಇಂಗ್ಲೀಷ್ ಓದುವುದಕ್ಕೆ ಬರುವುದಿಲ್ಲ, ಕೋರ್ಟ್ ನೋಟಿಸ್ ತೋರಿಸಿ ಬಲವಂತದಿಂದ ನಮ್ಮನ್ನು ಮನೆಯಿಂದ ಹೊರಗೆ ಹಾಕಲಾಯಿತು ಎಂದು ಕುಂಜಿ ಕುಟುಂಬದ ಸದಸ್ಯರೊಬ್ಬರು ಹೇಳಿದರು.

ಅನೇಕ ವರ್ಷಗಳಿಂದ ತಮ್ಮ ಕುಟುಂಬ ತೊಂದರೆಯಲ್ಲಿರುವುದನ್ನು ಆಕೆ ವಿವರಿಸಿದರು. ಸುಬ್ಬಯ್ಯ ಅವರಿಂದ ಅನೇಕ ಸಲ ಮನೆಯಿಂದ ಹೊರಗೆ ಹಾಕಲಾಯಿತು. ಆದರೆ, ಸುಬ್ಬಯ್ಯ ಸಾವಿನ ನಂತರ ಅವರ ಪುತ್ರಿ ಸುಷ್ಮಾ ನಮ್ಮ ಸಮುದಾಯದ ವಿರುದ್ಧ ನಿಂಧನೆ ಹೆಚ್ಚಾಗಿತ್ತು ಎಂದು ಅವರು ತಿಳಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಕೋರ್ಟ್ ನೋಟಿಸ್ ಸಿಕ್ಕಿದೆ. ಸರ್ವೆ ನಂಬರ್ 218/8 ರಲ್ಲಿ ತೆರವಿಗೆ ಆದೇಶಿಸಲಾಗಿದೆ. ಆದಾಗ್ಯೂ, ಕುಂಜಿ ಬಳಿಯಿರುವ ಆರ್ ಟಿಸಿಯಲ್ಲಿ ವಾರಿಂಗ್ ಕುಟುಂಬಕ್ಕೆ ಸೇರಿದಿರುವ ಸರ್ವೇ ನಂಬರ್ 215/8ರಲ್ಲಿ ವಾಸಿಸುತ್ತಿರುವುದು ದೃಢಪಟ್ಟಿದೆ ಮತ್ತು ಈ ಸ್ಥಳದಲ್ಲಿ ತೆರವಿನ ಆದೇಶ ಇಲ್ಲ.

ಯರವ ಕುಟುಂಬದವರು ಗೋಣಿಕೊಪ್ಪಲು ಪೊಲೀಸರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಕುಟುಂಬವು ನ್ಯಾಯವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾಗಲೂ ಶೀಘ್ರದಲ್ಲೇ ಎಸ್‌ಪಿಯನ್ನು ಭೇಟಿ ಮಾಡುವುದಾಗಿ ಹೇಳಿದರು.

ಯೆರವ ಕುಟುಂಬ ಗೋಣಿಕೊಪ್ಪಲು ಪೊಲೀಸರನ್ನು ಸಂಪರ್ಕಿಸಿದಾಗ, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಶೀಘ್ರದಲ್ಲಿಯೇ ಎಸ್ ಪಿ ಭೇಟಿಯಾಗಲಿದ್ದು, ನ್ಯಾಯ ದೊರೆಯುವ ವಿಶ್ವಾಸವಿರುವುದಾಗಿ ಕುಟುಂಬ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com