ಪೋಂಜಿ ಸ್ಕೀಮ್: ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದಲ್ಲಿ 32.37 ಕೋಟಿ ರೂ. ಮೌಲ್ಯದ 52 ಸ್ಥಿರಾಸ್ತಿ ಲಗತ್ತಿಸಿದ ಜಾರಿ ನಿರ್ದೇಶನಾಲಯ

2002ರ ಅಕ್ರಮ ಹಣ ವರ್ಗಾವಣೆ ತಡೆ(ಪಿಎಂಎಲ್ಎ)ಯ ಅಡಿ ಆಗ್ರಿ ಗೋಲ್ಡ್ ಪೋಂಜಿ ಸ್ಕೀಮ್ ವಂಚನೆ ಪ್ರಕರಣದಲ್ಲಿ ಮತ್ತೆ 32.37 ಕೋಟಿ ರೂಪಾಯಿ ಮೌಲ್ಯದ 52 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ED) ಲಗತ್ತಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2002ರ ಅಕ್ರಮ ಹಣ ವರ್ಗಾವಣೆ ತಡೆ(ಪಿಎಂಎಲ್ಎ)ಯ ಅಡಿ ಆಗ್ರಿ ಗೋಲ್ಡ್ ಪೋಂಜಿ ಸ್ಕೀಮ್ ವಂಚನೆ ಪ್ರಕರಣದಲ್ಲಿ ಮತ್ತೆ 32.37 ಕೋಟಿ ರೂಪಾಯಿ ಮೌಲ್ಯದ 52 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ED) ಲಗತ್ತಿಸಿದೆ.

ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ದಾಖಲಾದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಿದೆ. ಅವ್ವಾ ವೆಂಕಟ ರಾಮರಾವ್ ನೇತೃತ್ವದ ಅಗ್ರಿ ಗೋಲ್ಡ್ ಗ್ರೂಪ್, ರಿಯಲ್ ಎಸ್ಟೇಟ್ ವ್ಯವಹಾರದ ಸೋಗಿನಲ್ಲಿ ಮೋಸದ ಸಾಮೂಹಿಕ ಹೂಡಿಕೆ ಯೋಜನೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ, ಇದಕ್ಕಾಗಿ 130 ಕ್ಕೂ ಹೆಚ್ಚು ಕಂಪೆನಿಗಳನ್ನು ಅಕ್ರಮ ವ್ಯವಹಾರಕ್ಕೆ ಬಳಸಿಕೊಳ್ಳಲಾಗಿದೆ. 

ಸಿದ್ಧಗೊಂಡಿರುವ ಫ್ಲಾಟ್ ಗಳು, ಕೃಷಿ ಭೂಮಿಗಳನ್ನು ಒದಗಿಸುವ ಹಾಗೂ ಜನರ ಠೇವಣಿಗಳಿಗೆ ಅಧಿಕ ಬಡ್ಡಿ ನೀಡುವ ಭರವಸೆಯಲ್ಲಿ ಆಗ್ರಿ ಗೋಲ್ಡ್ ಗ್ರೂಪ್ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿತ್ತು. ಅಧಿಕ ಕಮಿಷನ್ ನೀಡುವ ಆಮಿಷವೊಡ್ಡಿ ಸಾವಿರಾರು ಕಮಿಷನ್ ಏಜೆಂಟ್ ಗಳನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಈ ಮೂಲಕ 32 ಲಕ್ಷದ 02 ಸಾವಿರದ 628 ಹೂಡಿಕೆ ಅಕೌಂಟ್ ದಾರರಿಂದ ಸುಮಾರು 6 ಸಾವಿರದ 380 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. 

ಆದರೆ ಕೊನೆಗೆ ಹಣ ಹೂಡಿಕೆ ಮಾಡಿದವರಿಗೆ ಫ್ಲ್ಯಾಟ್ ಆಗಲಿ, ಜಮೀನು ಆಗಲಿ ಸಿಗಲಿಲ್ಲ. ಅವರು ಇಟ್ಟ ಠೇವಣಿಯನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಾರಿ ನಿರ್ದೇಶನಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 

ಕಳೆದ ವರ್ಷ ಡಿಸೆಂಬರ್ 24ರಂದು ಜಾರಿ ನಿರ್ದೇಶನಾಲಯ 4 ಸಾವಿರದ 109.31 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಗತ್ತಿಸಿತ್ತು. ಕೇಸಿನಲ್ಲಿ ಒಟ್ಟು ಆಸ್ತಿಮೌಲ್ಯ 4 ಸಾವಿರದ 141.68 ಕೋಟಿ ರೂಪಾಯಿಯಾಗಿದೆ ಎಂದು ಇಡಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com