ಬೆಂಗಳೂರಿನಲ್ಲಿ ಬ್ಲಾಕ್ ಆಂಡ್ ವೈಟ್ ದಂಧೆ; 21 ಲಕ್ಷ ರೂ. ನಗದು ವಶ!

ಬ್ಲ್ಯಾಕ್ ಆಂಡ್ ವೈಟ್ ದಂಧೆ ಹಿಂದೆ ಬಿದ್ದಿರುವ ಬೆಂಗಳೂರು ಪೊಲೀಸರು, 21 ಲಕ್ಷ ನಗದು ಸೇರಿದಂತೆ ಸಾವಿರಾರು ರಶೀದಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬ್ಲ್ಯಾಕ್ ಆಂಡ್ ವೈಟ್ ದಂಧೆ ಹಿಂದೆ ಬಿದ್ದಿರುವ ಬೆಂಗಳೂರು ಪೊಲೀಸರು, 21 ಲಕ್ಷ ನಗದು ಸೇರಿದಂತೆ ಸಾವಿರಾರು ರಶೀದಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಟ್ಟೇನಹಳ್ಳಿ ಪೊಲಿಸರ ವಿಶೇಷ ಕಾರ್ಯಾಚರಣೆಯಿಂದ ಈ ಬ್ಲ್ಯಾಕ್ ಆಂಡ್ ವೈಟ್ ದಂಧೆ ಪ್ರಕರಣ ಬೆಳಕಿಗೆ ಬಂದಿದ್ದೆ ಬಲು ರೋಚಕ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರವಾಣಿ ಕರೆಯೊಂದು ಬಂದಿತ್ತು. ಈ ಕಾಲ್ ಮಾಡಿದ ವ್ಯಕ್ತಿ, ಎಟಿಎಂ ಬಳಿ ಮಾರಕಾಸ್ತ್ರ ಹಿಡಿದು ವ್ಯಕ್ತಿಯೊಬ್ಬ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ.

ಈ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು, ವ್ಯಕ್ತಿಯೋರ್ವನ ಬಳಿ ಒಂದು ಲಕ್ಷ ನಗದು ಹಾಗೂ ಲಾಂಗ್ ಪತ್ತೆಯಾಗಿದೆ. ಈ ವೇಳೆ ಆರೋಪಿಯನ್ನ ಹೆಚ್ಚಿನ ವಿಚಾರಣೆಗಾಗಿ ಆತನ ಮನೆಗೆ ಕರೆದೊಯ್ದಾಗ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 

ಮನೆ ಪರಿಶೀಲನೆ ವೇಳೆ, ವಿವಿಧ ಖಾತೆಗಳಿಗೆ ಹಣ ಜಮಾ ಮಾಡಿದ್ದ ದಾಖಲಾತಿಗಳು ದೊರೆತಿವೆ. 21 ಲಕ್ಷ ನಗದು ಸೇರಿದಂತೆ ಸಾವಿರಾರು ರಶೀದಿಗಳು ತನಿಖೆ ವೇಳೆ ಪತ್ತೆಯಾಗಿದ್ದು, ಪಿಎಂಎಲ್ಎ ಆಕ್ಟ್ ಪ್ರಕಾರ ಹಣವನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್‌ವೊಂದು ಕಾದಿತ್ತು. 2,656 ಅಕೌಂಟ್ ಗೆ 8.59 ಕೋಟಿ ರೂಪಾಯಿಗಳನ್ನು ಆರೋಪಿಗಳು ಡೆಪಾಸಿಟ್ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರತಿ ಅಕೌಂಟ್ ಗೂ 10 ಸಾವಿರದಿಂದ 30 ಸಾವಿರದಷ್ಟು ಹಣ ಜಮಾವಣೆ ಮಾಡಿರುವ ಬಂಧಿತರು, ಇಲ್ಲಿಯವರೆಗೆ 185 ಖಾತೆಗೆ 31 ಕೋಟಿ ರೂಪಾಯಿ ಹಣವನ್ನು ಡಿಪಾಸಿಟ್ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಪತ್ತೆ ಹಚ್ಚಿದ್ದಾರೆ.

ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು, ಬ್ಲ್ಯಾಕ್ ಆಂಡ್ ವೈಟ್ ದಂಧೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪ್ರಕರಣ ಕುರಿತಂತೆ ಐಟಿಗೆ ಪೊಲೀಸರು ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com