'ಕನ್ನಡ ನುಡಿ ಕಲಿಕೆ ಪಟ' ಎಂಬ 20 ನಿಮಿಷಗಳ ಮಾಡ್ಯೂಲ್‌; ಆನ್ ಲೈನ್ ನಲ್ಲೂ ಕನ್ನಡ ಕಲಿಕೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ನೆರವಾಗಬಲ್ಲ ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ಹೊರ ತಂದಿದೆ. 
ಕನ್ನಡ ನುಡಿ ಕಲಿಕೆ ಪಾಠಗಳ ಆನ್ ಲೈನ್ ಮಾಡ್ಯೂಲ್ ಸುನೀಲ್ ಕುಮಾರ್ ಚಾಲನೆ
ಕನ್ನಡ ನುಡಿ ಕಲಿಕೆ ಪಾಠಗಳ ಆನ್ ಲೈನ್ ಮಾಡ್ಯೂಲ್ ಸುನೀಲ್ ಕುಮಾರ್ ಚಾಲನೆ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ನೆರವಾಗಬಲ್ಲ ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ಹೊರ ತಂದಿದೆ. 

ಹೌದು.. ಕನ್ನಡ ಮಾತನಾಡಲು ಮತ್ತು ಬರೆಯಲು ಬಯಸುವವರಿಗೆ, ಅವರ ಕೈಯಲ್ಲೇ ಅವಕಾಶವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ತಲುಪಲು ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ತಂದಿದೆ. 

ಲಿಪ್ಯಂತರಕ್ಕಾಗಿ ಇಂಗ್ಲಿಷ್ ಅನ್ನು ಬಳಸಿ ಭಾಷೆಯನ್ನು ಕಲಿಸಲಾಗುತ್ತದೆ. ಇದರಿಂದ ಜನರು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಉಚ್ಚರಿಸಬಹುದು ಎಂದು ಹೇಳಿದೆ.  ಕೆಡಿಎಯು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್, ಮೈಸೂರಿನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ 30 ಮಾಡ್ಯೂಲ್‌ಗಳನ್ನು ಶೀಘ್ರದಲ್ಲೇ ಕೆಡಿಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು, ಇದೀಗ ಎರಡು ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಮೂಲಭೂತ ಅಂಶಗಳಿಂದ ಪ್ರಾರಂಭಿಸಿ, ಪ್ರತಿ ಮಾಡ್ಯೂಲ್ ಸುಮಾರು 15-20 ನಿಮಿಷಗಳ ಅವಧಿಯನ್ನು ಹೊಂದಿದೆ. ಇದಕ್ಕೆ ಎಲ್ಲಿಂದಲಾದರೂ ಪ್ರವೇಶಿಸಬಹುದು. ಸಾರ್ವಜನಿಕ ಪ್ರತಿಕ್ರಿಯೆಯನ್ನು ಅವಲಂಬಿಸಿ, ಇತರ ಮಾಡ್ಯೂಲ್‌ಗಳನ್ನು ಸುಧಾರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ 'ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲಾ ಮಾಡ್ಯೂಲ್‌ಗಳನ್ನು ಅಪ್‌ಲೋಡ್ ಮಾಡಲಾಗುವುದು. ನಾವು ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುತ್ತೇವೆ, ಅದರ ಮೂಲಕ ನಾವು ಹೆಚ್ಚಿನ ಜನರನ್ನು ತಲುಪಬಹುದು. ಪ್ರತಿ ಮಾಡ್ಯೂಲ್ ಅನ್ನು 30 ದಿನಗಳಲ್ಲಿ ಕನ್ನಡ ಓದುವುದು ಮತ್ತು ಬರೆಯುವುದನ್ನು ಕಲಿಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಾಲ್ಕೈದು ಮಾಡ್ಯೂಲ್ ಗಳ ನಂತರ ಸರಾಗವಾಗಿ ಮಾತನಾಡುವಷ್ಟು ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಚಾಲನೆ
‘ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರೂಪಿಸಲಾದ ‘ಕನ್ನಡ ನುಡಿ ಕಲಿಕೆ ಪಾಠಗಳ' ಲಿಂಕ್ ಅನ್ನು ಕನ್ನಡ ಮತ್ತು ಸಂಸ್ಕತಿ ಹಾಗೂ ಇಂಧನ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಬುಧವಾರ ಲೋಕಾರ್ಪಣೆ ಮಾಡಿದರು.

ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಚಿವ ಸುನೀಲ್ ಕುಮಾರ್, ‘ಕನ್ನಡ ಭಾಷೆಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶೇಷ ಅಭಿಯಾನಗಳನ್ನು ರೂಪಿಸಿ ನಡೆಸಿದೆ. ಕನ್ನಡದ ಮೇಲೆ ಆಸಕ್ತಿ ಇರುವ ಅನ್ಯಭಾಷಿಕರಿಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ನುಡಿ ಕಲಿಕೆ ಪಾಠಗಳು ವಿಶೇಷ ಅಭಿಯಾನವನ್ನು ಪ್ರಾಧಿಕಾರ ರೂಪಿಸಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com