ಪಬ್‌ ಗಲಾಟೆಗೆ ಕಾರಣವಾಯ್ತು ಒಂದು ಫೋಟೋ: ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ

ತಡರಾತ್ರಿ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಕಿರಿಕ್​ ನಡೆದು, ಬಿಯರ್​ ಬಾಟಲ್ ನಿಂದ ಬಿಗ್ ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ.
ಕಿರಿಕ್ ಕೀರ್ತಿ
ಕಿರಿಕ್ ಕೀರ್ತಿ

ಬೆಂಗಳೂರು: ತಡರಾತ್ರಿ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಕಿರಿಕ್​ ನಡೆದು, ಬಿಯರ್​ ಬಾಟಲ್ ನಿಂದ ಬಿಗ್ ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ.

ಬಿಗ್​ ಬಾಸ್​ ಖ್ಯಾತಿಯ ಕಿರಿಕ್​ ಕೀರ್ತಿಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದ ಪಬ್‌ನಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾತ್ರಿ ಸ್ನೇಹಿತರ ಜತೆ ಕಿರಿಕ್ ಕೀರ್ತಿ ಅವರು ಪಬ್‌ಗೆ ತೆರಳಿದ್ದರು. ಪಕ್ಕದ ಟೇಬಲ್‌ನಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದ.

ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಆ ಕಾರಣಕ್ಕೆ ಜಗಳ ಆರಂಭ ಆಯಿತು. ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಕ್ಷಮೆ ಕೇಳಿದ್ರೂ ಕೂಡ ಬಿಡದೇ ಕೀರ್ತಿ ಬೈಯ್ಯಲು ಶುರು ಮಾಡಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದ ಕಿರಿಕ್ ಕೀರ್ತಿ ವರ್ತನೆಗೆ ಆ ವ್ಯಕ್ತಿ ರೋಸಿ ಹೋಗಿದ್ದ. ಫೋಟೋ ಕ್ಲಿಕ್ಕಿಸಿದವನ ಮೊಬೈಲ್​ ಕಸಿದುಕೊಳ್ಳಲು ಕೂಡ ಕೀರ್ತಿ ಪ್ರಯತ್ನಿದರು. ಇದರಿಂದ ಕೋಪಗೊಂಡ ಆ ವ್ಯಕ್ತಿಯು ಕಿರಿಕ್ ಕೀರ್ತಿಯ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ.

ಗುರುವಾರ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಕಿರಿಕ್​ ಕೀರ್ತಿ ಮೇಲಿನ ಅಭಿಮಾನಕ್ಕಾಗಿ ಆತ ಫೋಟೋ ಕ್ಲಿಕ್ಕಿಸಿದ್ದಾನೆ. ಆದರೆ ಅದನ್ನು ಕೀರ್ತಿ ಸಹಿಸಿಲ್ಲ. ಫೋಟೋ ತೆಗೆದ ಅಭಿಮಾನಿಯ ವಿರುದ್ಧ ಅವರು ಕೋಪಗೊಂಡು ಮನಬಂದಂತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಆ ವ್ಯಕ್ತಿ ಹಲ್ಲೆ ಮಾಡಿರುವುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com