ಬಿಪಿಎಲ್ ಕುಟುಂಬಗಳಲ್ಲಿ ಯಾರೇ ಕೊರೋನಾದಿಂದ ಮೃತಪಟ್ಟರೂ 1 ಲಕ್ಷ ರೂ. ಪರಿಹಾರ: ರಾಜ್ಯ ಸರ್ಕಾರ ಆದೇಶ

ಡೆಲ್ಟಾ ರೂಪಾಂತರಿ ಮತ್ತು ಓಮಿಕ್ರಾನ್​ ಆತಂಕದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಕೋವಿಡ್ ಸೋಂಕಿನಿಂದ ಬಿಪಿಎಲ್ ಕುಟುಂಬಗಳಲ್ಲಿ ಯಾರೇ ಮೃತಪಟ್ಟರೂ ರೂ.1 ಲಕ್ಷ ಪರಿಹಾರ ನೀಡಲು ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡೆಲ್ಟಾ ರೂಪಾಂತರಿ ಮತ್ತು ಓಮಿಕ್ರಾನ್​ ಆತಂಕದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಕೋವಿಡ್ ಸೋಂಕಿನಿಂದ ಬಿಪಿಎಲ್ ಕುಟುಂಬಗಳಲ್ಲಿ ಯಾರೇ ಮೃತಪಟ್ಟರೂ ರೂ.1 ಲಕ್ಷ ಪರಿಹಾರ ನೀಡಲು ಆದೇಶಿಸಿದೆ.

ಕೊರೋನಾದಿಂದ ಮೃತಪಟ್ಟ ಬಡವರ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಹಿಂದೆ 1 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಬಿಪಿಎಲ್  ಕಾರ್ಡ್​​ ಹೊಂದಿರುವ ಕುಟುಂಬದ ದುಡಿಯುವ ವ್ಯಕ್ತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರೆ, ಒಂದು ಕುಟುಂಬದಲ್ಲಿ ಆ ರೀತಿಯ ಒಬ್ಬರಿಗೆ ಮಾತ್ರ ಪರಿಹಾರ ನೀಡುವುದಾಗಿ ಈ ಮೊದಲು ತಿಳಿಸಿತ್ತು.

ಇದೀಗ ಈ ನಿಯಮಕ್ಕೆ ಬದಲಾವಣೆ ತರಲಾಗಿದ್ದು, ಬಿಪಿಎಲ್ ಕುಟುಂಬದ ಯಾವುದೇ ವ್ಯಕ್ತಿ ಕೊರೋನಾದಿಂದ ಮೃತರಾಗಿದ್ದರೆ, ಅವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.

ಇದರೊಂದಿಗೆ ದುಡಿಯುತ್ತಿದ್ದ ವ್ಯಕ್ತಿಯ ಸಾವಿಗೆ ಮಾತ್ರ ಪರಿಹಾರ ಎಂಬ ನಿಬಂಧನೆಯನ್ನು ತೆಗೆದು ಹಾಕಲಾಗಿದ್ದು, ಇದೀಗ ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೋನಾದಿಂದ ಮೃತರಾಗಿದ್ದರೂ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಪರಿಹಾರ ನೀಡಲು ಕೊವಿಡ್‌ನಿಂದ ಮೃತ ಪಟ್ಟ ವ್ಯಕ್ತಿಯ ವಯಸ್ಸಿನ ನಿಬಂಧನೆಯೂ ಇಲ್ಲ ಎಂದು ರಾಜ್ಯ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com