ತೆರಿಗೆ ಕಡಿತದ ನಂತರ ಇಂಧನ ಮಾರಾಟ ಕರ್ನಾಟಕದಲ್ಲಿ ಹೆಚ್ಚಳ: ಸರಿತೂಗಿದ ರಾಜ್ಯದ ಆದಾಯ ನಷ್ಟ

ಇಂಧನ ಅಂದರೆ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಇಳಿಸಿ ತಿಂಗಳಾಗಿದೆ. ಇಂಧನ ಮೇಲೆ ತೆರಿಗೆ ಕಡಿತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂಧನ ಅಂದರೆ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಇಳಿಸಿ ತಿಂಗಳಾಗಿದೆ. ಇಂಧನ ಮೇಲೆ ತೆರಿಗೆ ಕಡಿತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೂ ತೆರಿಗೆ ಕಡಿತ ನಂತರ ಪೆಟ್ರೋಲ್-ಡೀಸೆಲ್ ಮಾರಾಟ 10 ಪಟ್ಟು ಹೆಚ್ಚಾಗಿದ್ದು, ಇದರಿಂದ ರಾಜ್ಯದ ನಷ್ಟದ ಪ್ರಮಾಣ ಕಡಿಮೆಯಾಗಲಿದ್ದು, ಸರಿಹೊಂದಿಸಲಾಗುತ್ತಿದೆ.

ಕಳೆದ ತಿಂಗಳು ನವೆಂಬರ್ ನಲ್ಲಿ ಇಂಧನ ಮಾರಾಟದಿಂದ ಸರ್ಕಾರಕ್ಕೆ ಸುಮಾರು 200 ಕೋಟಿ ಆದಾಯ ಬಂದಿದೆ. ತೈಲ ಕಂಪೆನಿಗಳ ಮಾರಾಟ ತೆರಿಗೆ ಸಂಗ್ರಹ ಮತ್ತು ವ್ಯತ್ಯಯ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ ಶಿಖಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ನವೆಂಬರ್ 4ರಂದು ಸರ್ಕಾರ ಇಂಧನ ಮೇಲಿನ ತೆರಿಗೆ ಕಡಿತ ಮಾಡಿದ ನಂತರ ಆದಾಯ ನಷ್ಟವನ್ನು ಆದಾಯದ ನಷ್ಟವನ್ನು ಬಳಕೆಯ ಹೆಚ್ಚಳದಿಂದ ತುಂಬಿಸಲಾಗುತ್ತದೆ. ಕರ್ನಾಟಕವು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ ಸುಮಾರು 7 ರೂಪಾಯಿಗಳಷ್ಟು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಿದ್ದರೆ, ಕೇಂದ್ರವು ಸುಮಾರು 5 ರೂಪಾಯಿ ಕಡಿತಗೊಳಿಸಿದೆ ಎಂದು ಶಿಖಾ ಹೇಳಿದರು.

ಸರಕು ಮತ್ತು ಸೇವಾ ತೆರಿಗೆಯ ರಾಜ್ಯ ಅಧ್ಯಕ್ಷ ಬಿ ಟಿ ಮನೋಹರ್, ಇಂಧನ ದರ ಕಡಿತದಿಂದ ಬಳಕೆ ಹೆಚ್ಚಿದೆ. ಇದು ಇಂಧನ ಮಾರಾಟದಿಂದ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ, ನವೆಂಬರ್‌ನಲ್ಲಿ ಇಂಧನ ಮಾರಾಟ ಹೆಚ್ಚಾಗಿದೆ. ಹವಾಮಾನವು ಸರಾಗವಾಗುವ ನಿರೀಕ್ಷೆಯೊಂದಿಗೆ ಮುಂದಿನ ಕೆಲವು ತಿಂಗಳುಗಳಲ್ಲಿ ಬಳಕೆ ಹೆಚ್ಚಾಗಬಹುದು ಎಂದರು.

ಕರ್ನಾಟಕದಲ್ಲಿ 5 ರಿಂದ 6 ಲೀಟರ್ ದರ ವ್ಯತ್ಯಾಸ: ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕವು ಪ್ರತಿ ಲೀಟರ್‌ಗೆ ಕನಿಷ್ಠ 5-6 ರೂಪಾಯಿಗಳ ಬೆಲೆ ವ್ಯತ್ಯಾಸವನ್ನು ಹೊಂದಿದೆ. ಇದು ಸಾರಿಗೆ ವಲಯಕ್ಕೆ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದರೊಂದಿಗೆ, ಗಡಿ ಭಾಗಗಳಲ್ಲಿ ಬಂಕ್‌ಗಳಲ್ಲಿ ಡೀಸೆಲ್ ಮಾರಾಟವು ಹೆಚ್ಚಾಗಿದೆ, ಆದರೆ ಪೆಟ್ರೋಲ್ ಮಾರಾಟವು ಅಂತಹ ದೊಡ್ಡ ಏರಿಕೆ ಕಂಡುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com