ಬೆಳಗಾವಿ: ಶ್ರೀ ರೇಣುಕಾ ದೇವಾಲಯದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ

ವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ರೇಣುಕಾ ದೇವಾಲಯದ ಹುಂಡಿಯಲ್ಲಿನ ಕಾಣಿಕೆಯನ್ನು ಶನಿವಾರ ಲೆಕ್ಕ ಮಾಡಲಾಗಿದ್ದು,  ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಹುಂಡಿಯಲ್ಲಿನ ಕಾಣಿಕೆ ಲೆಕ್ಕ ಹಾಕುತ್ತಿರುವ ಸಿಬ್ಬಂದಿ ಚಿತ್ರ
ಹುಂಡಿಯಲ್ಲಿನ ಕಾಣಿಕೆ ಲೆಕ್ಕ ಹಾಕುತ್ತಿರುವ ಸಿಬ್ಬಂದಿ ಚಿತ್ರ

ಬೆಳಗಾವಿ: ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ರೇಣುಕಾ ದೇವಾಲಯದ ಹುಂಡಿಯಲ್ಲಿನ ಕಾಣಿಕೆಯನ್ನು ಶನಿವಾರ ಲೆಕ್ಕ ಮಾಡಲಾಗಿದ್ದು,  ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಒಟ್ಟು 1.20 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೆಚ್ಚಿನ ಕಾಣಿಕೆ ಸಂಗ್ರಹವಾಗಿರುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. 

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಪ್ರಸಿದ್ಧ ದೇವಾಲಯಕ್ಕೆ ಭಕ್ತಾಧಿಗಳ ಪ್ರವೇಶವನ್ನು ಬೆಳಗಾವಿ ಜಿಲ್ಲಾಡಳಿತ ನಿಷೇಧಿತ್ತು. ಭಕ್ತರಿಗೆ ದೇವಾಲಯ ಮುಚ್ಚಿದ್ದರೂ, ಆರ್ಚಕರು ಪ್ರತಿನಿತ್ಯ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಅಲ್ಲದೇ, ದೇವಾಲಯದಲ್ಲಿ ಎಲ್ಲ ಹಬ್ಬಗಳನ್ನೂ ಆಚರಿಸಲಾಗುತಿತ್ತು.

ಕೋವಿಡ್-19 ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆ ಮತ್ತು ಶೇಕಡಾ 70 ರಷ್ಟು ಅರ್ಹ ಜನಸಂಖ್ಯೆಗೆ ಲಸಿಕೆ ನೀಡಿಕೆ ಸಾಧನೆ ನಂತರ ಭಕ್ತರ ನಿರ್ಬಂಧವನ್ನು ತೆರವುಗೊಳಿಸಿದ ಜಿಲ್ಲಾಡಳಿತ ಸೆಪ್ಟೆಂಬರ್ 28 ರಿಂದ ದೇವಾಲಯಕ್ಕೆ ಭಕ್ತರು ಆಗಮಿಸಲು ಅವಕಾಶ ಮಾಡಿಕೊಟ್ಟಿತ್ತು. ಮಹಾರಾಷ್ಟ್ರ. ಕರ್ನಾಟಕ, ಗೋವಾದಿಂದ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದರು, ಮಾಸಿಕ ಪದ್ಧತಿಯಂತೆ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆ ಲೆಕ್ಕವನ್ನು ದೇವಾಲಯ ಆಡಳಿತ ಮಂಡಳಿ ಮಾಡಿದೆ. 

ಒಟ್ಟಾರೇ 1.20 ಕೋಟಿ ನಗದು, 15 ಲಕ್ಷ ಮೌಲ್ಯದ ಚಿನ್ನಾಭರಣ, 2 ಲಕ್ಷ ರೂ. ಮೌಲ್ಯದ ಬೆಳ್ಳಿಯ ಅಭರಣಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಮುಜರಾಯಿ ಇಲಾಖೆ, ತಹಸೀಲ್ದಾರ್ ಮತ್ತು ಸವದತ್ತಿ ಠಾಣೆಯ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ 85 ದೇವಾಲಯ ಸಿಬ್ಬಂದಿ, 10 ಬ್ಯಾಂಕ್ ಸಿಬ್ಬಂದಿ ಲೆಕ್ಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. 

ದೇವಾಲಯ ಅಧಿಕಾರಿಗಳ ಪ್ರಕಾರ, ಶ್ರೀ ರೇಣುಕಾ ದೇವಾಲಯದಲ್ಲಿ ಪ್ರತಿವರ್ಶ ಸರಾಸರಿ 4 ಕೋಟಿ ರೂ. ಕಾಣಿಕೆ ಸಂಗ್ರಹವಾಗುತಿತ್ತು. ಆದಾಗ್ಯೂ, ಒಂದೂವರೆ ವರ್ಷಗಳಿಂದ ದೇವಾಲಯ ಮುಚ್ಚಿದ್ದರೂ ದೇವಾಲಯ ಪುನರಾರಂಭಗೊಂಡ ಮೊದಲ ತಿಂಗಳಲ್ಲೇ ಒಳ್ಳೇಯ ಕಾಣಿಕೆ ಸಂಗ್ರಹವಾಗಿದೆ. ಆಶ್ಚರ್ಯವೆಂದರೆ ಅಪಮೌಲೀಕರಣಗೊಂಡ 1 ಸಾವಿರ, 500 ಮುಖಬೆಲೆಯ ಕರೆನ್ಸಿ ನೋಟ್ ಗಳು ಕೂಡಾ ಹುಂಡಿಯಲ್ಲಿ ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com