ರಾಜ್ಯಾದ್ಯಂತ 15 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ಎಫ್ಐಆರ್ ದಾಖಲು

ರಾಜ್ಯಾದ್ಯಂತ 15 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ಎಸಿಬಿ ದಾಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಎಸಿಬಿ ಠಾಣೆಯಲ್ಲಿ ಈ ಎಫ್ಐಆರ್ ದಾಖಲಾಗಿದ್ದು,...
ಶಾಂತಗೌಡ ಬಿರಾದಾರ್ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಶೋಧ
ಶಾಂತಗೌಡ ಬಿರಾದಾರ್ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಶೋಧ

ಬೆಂಗಳೂರು: ರಾಜ್ಯಾದ್ಯಂತ 15 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ಎಸಿಬಿ ದಾಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಎಸಿಬಿ ಠಾಣೆಯಲ್ಲಿ ಈ ಎಫ್ಐಆರ್ ದಾಖಲಾಗಿದ್ದು, ಅವರ ಹೆಸರುಗಳು ಈ ಕೆಳಗಿನಂತಿವೆ.
  1.      ಎಸ್ ಎನ್ ನಾಗರಾಜ್, ಪಿಸಿಯೋ ಥೆರಪಿಸ್ಟ್ ಸರ್ಕಾರಿ ಆಸ್ಪತ್ರೆ ಯಲಹಂಕ, ಬೆಂಗಳೂರು
  2.     ಜಿ, ವಿ ಗಿರಿ, ಡಿ ಗ್ರೂಪ್ ನೌಕರ ಬಿಬಿಎಂಪಿ ಶಾಲೆ ಮಾರಪ್ಪನ ಪಾಳ್ಯ, ಬೆಂಗಳೂರು
  3.     ಎಲ್ ಸಿ ನಾಗರಾಜ್, ಆಡಳಿತಾಧಿಕಾರಿ ಸಕಾಲ
  4.     ಮಾಯಣ್ಣ, ಪ್ರಥಮ ದರ್ಜೆ ಸಹಾಯಕ ಬಿಬಿಎಂಪಿ ಕೇಂದ್ರ ಕಚೇರಿ, ಬೆಂಗಳೂರು
 

ಎಲ್ಲಾ ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ13(1) ,13(2)  ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಉಳಿದಂತೆ 11 ಸರ್ಕಾರಿ ಅಧಿಕಾರಿಗಳ ಮೇಲೂ ರಾಜ್ಯದ ವಿವಿಧ ಎಸಿಬಿ ಠಾಣೆಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. 
  
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಏಕಕಾಲದಲ್ಲಿ ರಾಜ್ಯದ 60 ಕಡೆ ದಾಳಿ ನಡೆಸಿತ್ತು. ಈ ವೇಳೆ 15 ಅಧಿಕಾರಿಗಳ ನಿವಾಸ ಸೇರಿ ವಿವಿಧ ಸ್ಥಳಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ನಡೆಸಿತ್ತು.

ಇದನ್ನು ಓದಿ: ಎಸಿಬಿ ದಾಳಿ ವೇಳೆ ಪೈಪ್ ನಲ್ಲಿ ನೋಟಿನ ಕಂತೆ ಸಿಕ್ಕಿ ಜೈಲುಪಾಲದ ಶಾಂತಗೌಡ ಬಿರಾದಾರ್ ಗೆ ಅನಾರೋಗ್ಯ!
  
ಬೆಂಗಳೂರು, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಎಸಿಬಿ ದಾಳಿ ನಡೆಸಿ, ಅಧಿಕಾರಿಗಳ ಮನೆಯಲ್ಲಿರುವ ಚಿನ್ನಾಭರಣ, ಕಾಗದ ಪತ್ರಗಳು, ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಅಧಿಕಾರಿಗಳು ಕೋಟಿ ಕೋಟಿ ಒಡೆಯರಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿವಾಸ ಮತ್ತು ಬೇರೆ ಬೇರೆ ನಗರಗಳಲ್ಲಿರುವ ಸಂಬಂಧಿಕರ ನಿವಾಸದ ಮೇಲೆಯೂ ದಾಳಿ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com