ಬೆಂಗಳೂರು: 2ನೇ ವಿವಾಹವಾಗಲು ಪತ್ನಿ-ಮಕ್ಕಳನ್ನು ಕೊಂದಿದ್ದ ನಿವೃತ್ತ ಐಎಎಫ್ ಅಧಿಕಾರಿ 11 ವರ್ಷಗಳ ನಂತರ ಅರೆಸ್ಟ್!

ಎರಡನೇ ಮದುವೆಯಾಗಲು ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಹನ್ನೊಂದು ವರ್ಷಗಳ ಬಳಿಕ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ
ಬಂಧಿತ ಆರೋಪಿ

ಬೆಂಗಳೂರು: ಎರಡನೇ ಮದುವೆಯಾಗಲು ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಹನ್ನೊಂದು ವರ್ಷಗಳ ಬಳಿಕ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಧರ್ಮಸಿಂಗ್‌ ಯಾದವ್‌ ಬಂಧಿತ ಆರೋಪಿ.  ಈತ ದೆಹಲಿ ನಿವಾಸಿ ಅನು ಯಾದವ್‌ ಅವರನ್ನು ಮದುವೆಯಾಗಿದ್ದು, ದಂಪತಿಗೆ 14 ವರ್ಷದ ಪುತ್ರ ಹಾಗೂ 8 ವರ್ಷದ ಪುತ್ರಿ ಇದ್ದರು. ವಿದ್ಯಾರಣ್ಯಪುರದ ಸಿಂಗಾಪುರ ಲೇಔಟ್‌ನಲ್ಲಿ ಸ್ವಂತ ಮನೆಯಲ್ಲಿ ಪತ್ನಿ, ಮಕ್ಕಳ ಜತೆ ವಾಸವಾಗಿದ್ದ, ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯ ವ್ಯಾಮೋಹಕ್ಕೊಳಗಾಗಿದ್ದ. ಕೆಯನ್ನುಎರಡನೇ ಮದುವೆಯಾಗಲು ಸಿದ್ಧವಾಗಿದ್ದ.

ಈ ಮಧ್ಯೆ ಎರಡನೇ ಮದುವೆಗೆ ತೊಂದರೆಯಾಗಬಾರದೆಂದು 2008ರ ಅಕ್ಟೋಬರ್‌ 19ರಂದು ಮನೆಯಲ್ಲಿ ಮರದ ಕಟ್ಟಿಗೆಯಿಂದ ಹೆಂಡತಿ-ಮಕ್ಕಳನ್ನು ಹೊಡೆದು, ಪೊಲೀಸರಿಗೆ ಅನುಮಾನ ಬಾರದಿರಲು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದ. ನಂತರ ಪೊಲೀಸರು ಧರ್ಮಸಿಂಗ್‌ ಕೊಲೆಗೈದಿರುವುದು ಸಾಬೀತಾಗಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಎರಡು ವರ್ಷ, 2 ತಿಂಗಳು ಜೈಲಿನಲ್ಲಿದ್ದ ಆರೋಪಿ, ಮೂತ್ರಕೋಶದಲ್ಲಿ ಸಮಸ್ಯೆಯಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೇ ಅವಕಾಶವನ್ನು ದುರುಪಯೋಗ ಪಡಿಸಿಕೊಂಡ ಆತ ಪೊಲೀಸರ ಮೇಲೆ ಖಾರ ಪುಡಿ ಎರಚಿ, ಲೀಡಿಂಗ್‌ ಚೈನ್‌ ಮತ್ತು ಬೇಡಿ ಸಮೇತ ಕಾಂಪೌಂಡ್‌ ಹಾರಿ ಪರಾರಿಯಾಗಿದ್ದ.

ತಾಂತ್ರಿಕ ತನಿಖೆಗೆ ಕೈಹಾಕಿದ ಪೊಲೀಸರು ಆರೋಪಿಯ ಹಿನ್ನೆಲೆ ಶೋಧಿಸಿದಾಗ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡಿ, ನಿವೃತ್ತಿ ಹೊಂದಿ ಮಾಸಿಕ ಪಿಂಚಣಿ ಪಡೆಯುತ್ತಿದ್ದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಕೇಂದ್ರ ಕಚೇರಿಗೆ ಆರೋಪಿಯ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆಯಲಾಗಿತ್ತು. ಏರ್‌ಪೋರ್ಸ್‌ ಅಧಿಕಾರಿಗಳು ಸ್ಪಂದಿಧಿಸಿದ್ದು, ಆರೋಪಿಯ ಹರಿಯಾಣ ವಿಳಾಸ ನೀಡಿದ್ದರು.

ಸುಮಾರು 25 ದಿನಗಳ ಕಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಹರಿಯಾಣದ ಅತ್ತೇಲಿಮಂಡಿ ಟೌನ್‌ನಲ್ಲಿ ಬೇರೊಬ್ಬರ ಹೆಸರಿನಲ್ಲಿ ಮದ್ಯ ಮಾರಾಟದ ಪರವಾನಗಿ ಪಡೆದು ವೈನ್‌ಶಾಪ್‌ ನಡೆಸುತ್ತಿದ್ದವನನ್ನು ಬಂಧಿಸಲಾಗಿದೆ. ಈ ಮಧ್ಯೆ ಆರೋಪಿ 2012ರಲ್ಲಿ ಅಸ್ಸಾಂ ಮೂಲದ ಶಿಪ್ರಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com