ಕರ್ನಾಟಕದ ಕಾರ್ಮಿಕರಿಗೆ ನರೇಗಾ ವೇತನ ವಿಳಂಬ

ಕೇಂದ್ರ ಸರ್ಕಾರ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಮಿಕ ಘಟಕ ಅನುದಾನವನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದ್ದು, ಲಕ್ಷಾಂತರ ಮಂದಿ ಕಾರ್ಮಿಕರು ವೇತನದ ನಿರೀಕ್ಷೆಯಲ್ಲಿದ್ದಾರೆ ಎಂದು ಆರ್ ಡಿಪಿ ಆರ್ ಇಲಾಖೆ ತಿಳಿಸಿದೆ.
ಕಾರ್ಮಿಕರು (ಸಾಂಕೇತಿಕ ಚಿತ್ರ)
ಕಾರ್ಮಿಕರು (ಸಾಂಕೇತಿಕ ಚಿತ್ರ)

ಕೊಪ್ಪಳ: ಕೇಂದ್ರ ಸರ್ಕಾರ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್ ಇಜಿಎಸ್) ಕಾರ್ಮಿಕ ಕಾರ್ಮಿಕ ಘಟಕ ಅನುದಾನವನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದ್ದು, ಲಕ್ಷಾಂತರ ಮಂದಿ ಕಾರ್ಮಿಕರು ವೇತನದ ನಿರೀಕ್ಷೆಯಲ್ಲಿದ್ದಾರೆ ಎಂದು ಆರ್ ಡಿಪಿ ಆರ್ ಇಲಾಖೆ ತಿಳಿಸಿದೆ.
 
ಯುಪಿಎ ಅವಧಿಯಿಂದಲೂ ಎಂಜಿಎನ್ ಆರ್ ಇಜಿಎಸ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೋವಿಡ್-19 ನ ಎರಡೂ ಅಲೆಗಳ ಅವಧಿಯಲ್ಲಿ ತಮ್ಮ ಊರುಗಳಿಗೆ ಮರಳಿದ್ದ ವಲಸಿಗ ಕಾರ್ಮಿಕರಿಗೆ ಸಹಕಾರಿಯಾಗಿದ್ದದ್ದು ಇದೇ ಯೋಜನೆಯಾಗಿದೆ. 

ಕಾರ್ಮಿಕರು ತಮ್ಮ ಜೀವನ ನಡೆಸಲು ಇದೇ ಯೋಜನೆಯನ್ನು ನೆಚ್ಚಿಕೊಂಡಿದ್ದು, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕಾರ್ಮಿಕರ ಕೈ ಹಿಡಿಯುವ ಯೋಜನೆಯಾಗಿದೆ. ಕಾರ್ಮಿಕರಿಗೆ ಈ ಯೋಜನೆಯಡಿ ನೀಡುವ ವೇತನ ವಿಳಂಬವಾದಲ್ಲಿ ಯುಎಲ್ ಬಿ ಚುನಾವಣೆಯಲ್ಲಿ ಬಿಜೆಪಿ ಮೇಲೆ ಅದು ಪರಿಣಾಮ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಕೊಪ್ಪಳ ಜಿಲ್ಲಾ ಪಂಚಾಯತ್ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸ್ಮಶಾನದಲ್ಲಿ ಉದ್ಯಾನ, ವಿಕಲಚೇತನರಿಗಾಗಿ ಉದ್ಯಾನ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳಲ್ಲಿ ತಲಾ ಒಂದು ಮಾದರಿಯ ಉದ್ಯಾನವನ ಸೇರಿದಂತೆ ಹಲವು ಹೊಸ ಮಾದರಿಗಳನ್ನು ಅನುಸರಿಸುತ್ತಿದೆ.

ಕೊಪ್ಪಳ ಜಿಲ್ಲಾ ಪಂಚಾಯಿತಿ ಒಂದೇ ಕಾರ್ಮಿಕರಿಗೆ 10 ಕೋಟಿ ರೂಪಾಯಿ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com