ಕೊಡಗು: ಲಂಚ ಸ್ವೀಕರಿಸುತ್ತಿದ್ದ ತಾಲೂಕು ಆರೋಗ್ಯಾಧಿಕಾರಿ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ವೇಳೆ ತಾಲೂಕು ಆರೋಗ್ಯಾಧಿಕಾರಿ ಓರ್ವರು ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಭ್ರಷ್ಟಾಚಾರ ವಿರೋಧಿ ದಿನವಾದ ಡಿ.09 ರಂದೇ ರೆಡ್ ಹ್ಯಾಂಡ್ ಆಗಿ ಈ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. 
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ

ಮಡಿಕೇರಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ತಾಲೂಕು ಆರೋಗ್ಯಾಧಿಕಾರಿ ಓರ್ವರು ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಭ್ರಷ್ಟಾಚಾರ ವಿರೋಧಿ ದಿನವಾದ ಡಿ.09 ರಂದೇ ರೆಡ್ ಹ್ಯಾಂಡ್ ಆಗಿ ಈ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. 

ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥ್ ಶಿಂಪಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ ವಿರಾಜಪೇಟೆ ನಿವಾಸಿ ಸೂರ್ಯ ಎಂಬುವವರಿಗೆ ಅಪೆಂಡಿಸೈಟಿಸ್ ಸಮಸ್ಯೆ ಇರುವುದು ದೃಢವಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡುವುದಕ್ಕಾಗಿ ಡಾ.ವಿಶ್ವನಾಥ್ ಶಿಂಪಿ 6,000 ರೂಪಾಯಿ ಕೇಳಿದ್ದರು. ಕೊನೆಗೆ 5,000 ರೂಪಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದರು. ನ.29 ರಂದು ಶಸ್ತ್ರಚಿಕಿತ್ಸೆ ನಡೆದಿದ್ದು ಸೂರ್ಯ ಗೂಗಲ್ ಪೇ ಮೂಲಕ 3,000 ರೂಪಾಯಿಯನ್ನು ವರ್ಗಾಯಿಸಿದ್ದರು.

ಈ ಬಳಿಕ ಸೂರ್ಯ ಅವರ ಪತ್ನಿ ಲಲಿತಾ, ಎಸಿಬಿಯಲ್ಲಿ ವೈದ್ಯರ ವಿರುದ್ಧ ಲಂಚ ಪಡೆದಿರುವ ಆರೋಪ ಮಾಡಿದ್ದರು. ಇದಾದ ನಂತರ ಎಸಿಬಿ ಅಧಿಕಾರಿಗಳು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದಕ್ಕೆ ಬಲೆ ಬೀಸಿದ್ದರು. ಅಂತೆಯೇ ಸೂರ್ಯ ಗುರುವಾರದಂದು ವಿರಾಜಪೇಟೆ ಆಸ್ಪತ್ರೆಗೆ ಭೇಟಿ ನೀಡಿ ಬಾಕಿ ಇದ್ದ 2,000 ರೂಪಾಯಿಗಳ ನಗದು ನೀಡಬೇಕಾದರೆ ಎಸಿಬಿ ಅಧಿಕಾರಿಗಳು ವೈದ್ಯರನ್ನು ಹಿಡಿದಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ವೈದ್ಯ ವಿಶ್ವನಾಥ್ ನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com