ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ಮೃತಪಟ್ಟ ಲೆ.ಕ. ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ
ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರತೀಯ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ.
Published: 10th December 2021 11:11 AM | Last Updated: 10th December 2021 01:58 PM | A+A A-

ಹರ್ಜಿಂದರ್ ಸಿಂಗ್ ಮತ್ತವರ ಪತ್ನಿ
ಕಾರ್ಕಳ: ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರತೀಯ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ.
ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರು ಕಾರ್ಕಳದ ಸಾಲ್ಮರ ಬಂಡಿಮಠ ನಿವಾಸಿ, ಕಾಂಗ್ರೆಸ್ ಮುಖಂಡ, ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ಫಿಲಿಫ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ದಂಪತಿಯ ಪುತ್ರಿ ಲೆಫ್ಟಿನೆಂಟ್ ಪ್ರಫುಲ್ಲಾ ಮಿನೇಜಸ್ ಅವರನ್ನು ವಿವಾಹವಾಗಿದ್ದರು.
ಫಿಲಿಪ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ದಂಪತಿಯ ನಾಲ್ವರು ಮಕ್ಕಳಲ್ಲಿ ಕೊನೆಯವಳಾದ ಆಗ್ನೇಸ್ ಪ್ರಫುಲ್ಲಾ ಮಿನೇಜಸ್ ಹಲವಾರು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಆಕೆ 15 ವರ್ಷ ಹಿಂದೆ ಹರ್ಜಿಂದರ್ ಸಿಂಗ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಇದನ್ನೂ ಓದಿ: ಬೆಳಗಾವಿಯೊಂದಿಗೆ ಬಿಪಿನ್ ರಾವತ್ ಅವರಿಗಿತ್ತು ಅವಿನಾಭಾವ ಸಂಬಂಧ!
ಫಿಲಿಪ್ ಅವರ ಮೊದಲ ಮಗಳು ಪುಷ್ಪಾ ವಿದೇಶದಲ್ಲಿ ನೆಲೆಸಿದ್ದರು, ಆದರೆ ಮನೆ ಮತ್ತು ಅವರ ತಂದೆಯ ಸ್ಟೇಷನರಿ ಅಂಗಡಿಯನ್ನು ನೋಡಿಕೊಳ್ಳಲು ಸಲ್ಮಾರಾಗೆ ಮರಳಿದರು. ಪ್ರಫುಲ್ಲ ಅವರು ಮೊದಲು ಸೇನೆಯಲ್ಲೆ ಕಾರ್ಯನಿರ್ವಸುತ್ತಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿಯನ್ನು ಪಡೆದು ಸೇನಾ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಹರ್ಜಿಂದರ್ ಸಿಂಗ್ ಕಾರ್ಕಳಕ್ಕೆ ಬಂದಿದ್ದರು. ಕೆಲ ವಾರಗಳ ಹಿಂದೆ ಪ್ರಫುಲ್ಲಾ ಕಾರ್ಕಳಕ್ಕೆ ಬಂದು ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದರು.