ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸದ್ಯದಲ್ಲಿಯೇ ಆಪ್ ಆಧಾರಿತ ಟ್ಯಾಕ್ಸಿ ಸೇವೆ: ಪ್ರಯಾಣಿಕರು ನಿರಾತಂಕ

ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಕಷ್ಟವಾಗದೆ ನಿರಾತಂಕವಾಗಿ ವಿಮಾನ ನಿಲ್ದಾಣಕ್ಕೆ ಬಂದು ಹೋಗಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ನಿಲ್ದಾಣದ ಆವರಣದಲ್ಲಿ ಸದ್ಯದಲ್ಲಿಯೇ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಪ್ರಯಾಣಿಕರು
ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಪ್ರಯಾಣಿಕರು

ಹುಬ್ಬಳ್ಳಿ:ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಕಷ್ಟವಾಗದೆ ನಿರಾತಂಕವಾಗಿ ವಿಮಾನ ನಿಲ್ದಾಣಕ್ಕೆ ಬಂದು ಹೋಗಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ನಿಲ್ದಾಣದ ಆವರಣದಲ್ಲಿ ಸದ್ಯದಲ್ಲಿಯೇ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ.

ವಿಮಾನ ನಿಲ್ದಾಣದಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯ ಅನುಪಸ್ಥಿತಿಯಲ್ಲಿ ಪ್ರಯಾಣಿಕರು ನಿಗದಿತ ದರದಲ್ಲಿ ತಮ್ಮ ಸ್ಥಳಕ್ಕೆ ತೆರಳುವುದು ಇಷ್ಟು ಸಮಯ ಕಷ್ಟವಾಗುತ್ತಿತ್ತು. ಟ್ಯಾಕ್ಸಿ ಚಾಲಕರು ತಮ್ಮ ಮನಸೋ ಇಚ್ಛೆ ದರ ವಿಧಿಸುತ್ತಿದ್ದರಿಂದ ಪ್ರಯಾಣಿಕರು ಚರ್ಚೆ ಮಾಡುತ್ತಾ ಕೂರಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಹಲವರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಬಳಿ ನಿಲ್ದಾಣದ ಒಳಗೆ ಸಮಾನ ದರ ನಿಗದಿಪಡಿಸುವಂತೆ ಬೇಡಿಕೆಯಿಟ್ಟಿದ್ದರು.

ನಗರ ಮೂಲದ ಉದ್ಯಮಿ ಸುನಿಲ್ ನಲವಾಡೆ, ತಮ್ಮ ಬ್ಯುಸ್ ನೆಸ್ ಟ್ರಿಪ್ ಮುಗಿಸಿ ಪ್ರತಿಸಾರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿಂದ 5-6 ಕಿಲೋ ಮೀಟರ್ ದೂರ ಹೋಗಲು ಹೆಚ್ಚಿನ ಹಣ ಕೇಳುತ್ತಿದ್ದರು ಟ್ಯಾಕ್ಸಿ ಡ್ರೈವರ್ ಗಳು. ಯೂನಿಯನ್ ಮಾಡಿಕೊಂಡಿರುವ ಎಲ್ಲಾ ಟ್ಯಾಕ್ಸಿ ಡ್ರೈವರ್ ಗಳು ಒಂದೇ ದರ ಕೇಳುತ್ತಾರೆ. ಹೊರಗಿನಿಂದ ಟ್ಯಾಕ್ಸಿ ಬರಲು ಹೇಳಿದರೆ ಆ ಟ್ಯಾಕ್ಸಿ ಡ್ರೈವರ್ ಲ್ಲಿ ಜಗಳ ತೆಗೆಯುತ್ತಿದ್ದರು. ಹೀಗಾಗಿ ನಮಗೆ ಬೇರೆ ದಾರಿ ಕಾಣದೆ ಹೆಚ್ಚು ಬೆಲೆ ಕೊಟ್ಟು ಹೋಗುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ.

ಅನಧಿಕೃತ ಟ್ಯಾಕ್ಸಿಗಳು ಹೆಚ್ಚಿನ ಹಣಕ್ಕೆ ಬೇಡಿಕೆಯಿರುವುದರಿಂದ ಇತರ ನಗರಗಳಿಂದ ಇಲ್ಲಿಗೆ ಬರುವ ಅನೇಕ ವಿಮಾನ ಪ್ರಯಾಣಿಕರು ನ್ಯಾಯಯುತ ಬೆಲೆ ಪಡೆಯಲು ಹರಸಾಹಸ ಪಡುತ್ತಾರೆ ಎಂದು ಮತ್ತೊಬ್ಬ ಪ್ರಯಾಣಿಕ ಹೇಳುತ್ತಾರೆ. ಇಲ್ಲಿ ಚಾಲಕ ಮತ್ತು ಪ್ರಯಾಣಿಕರ ನಡುವಿನ ಜಗಳದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಂತೆ ಇರುತ್ತಿದ್ದರು.

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅಂತಿಮವಾಗಿ ಅರ್ಹ ಏಜೆನ್ಸಿಗಳಿಂದ ಟೆಂಡರ್ ಅನ್ನು ಆಹ್ವಾನಿಸಿತು. ಟೆಂಡರ್ ಪಡೆದವರಿಗೆ ವಿಮಾನ ನಿಲ್ದಾಣದಿಂದ ನಗರದ ಇತರ ಭಾಗಗಳಿಗೆ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ.

ಟೆಂಡರ್ ಪಡೆದ ಟ್ಯಾಕ್ಸಿ ಸೇವಾ ಪೂರೈಕೆದಾರರಿಗೆ ಆ ಸ್ಥಳಗಳಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಇದು ಪ್ರಯಾಣಿಕರಿಗೆ ಟ್ಯಾಕ್ಸಿಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಸಹಾಯ ಮಾಡುತ್ತದೆ. ಅವರು ಆಗಮಿಸಿದ ನಂತರ ಟ್ಯಾಕ್ಸಿಗಾಗಿ ಕಾಯುವ ಅಗತ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com