ಸೇನಾ ಹೆಲಿಕಾಪ್ಟರ್ ಪತನ: ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ
ತಮಿಳುನಾಡಿನ ಕೊನೂರ್ ಬಳಿ ಬುಧವಾರ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವನ್ನಪ್ಪಿದ ಸೇನಾ ಹೆಲಿಕಾಪ್ಟರ್ ಅವಘಡದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಕ್ಯಾಪ್ಟನ್ ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Published: 11th December 2021 08:17 AM | Last Updated: 11th December 2021 01:35 PM | A+A A-

ಹೆಲಿಕಾಪ್ಟರ್ ಪತನ
ಬೆಂಗಳೂರು: ತಮಿಳುನಾಡಿನ ಕೊನೂರ್ ಬಳಿ ಬುಧವಾರ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವನ್ನಪ್ಪಿದ ಸೇನಾ ಹೆಲಿಕಾಪ್ಟರ್ ಅವಘಡದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಕ್ಯಾಪ್ಟನ್ ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇತರೆ ಆಸ್ಪತ್ರೆಗಳಂತೆಯೇ ಸೇನಾ ಆಸ್ಪತ್ರೆ ಕೂಡ ರೋಗಿಯ ಹೆಚ್ಚಿನ ಚಿಕಿತ್ಸೆಗಾಗಿ ನಾಗರೀಕ ಮತ್ತು ಖಾಸಗಿ ಆಸ್ಪತ್ರೆಯ ಪರಿಣತಿಯನ್ನು ಹಂಚಿಕೊಳ್ಳುವ ಹಿತಾಸಕ್ತಿಗಳನ್ನು ಹೊಂದಿರುತ್ತದೆ. ಆದರೆ, ವರುಣ್ ಸಿಂಗ್ ಅವರು ಚಿಕಿತ್ಸೆ ಕುರಿತು ಸೇನಾಸ್ಪತ್ರೆಯು ಈ ವರೆಗೂ ಯಾವುದೇ ಖಾಸಗಿ ಆಸ್ಪತ್ರೆಗಳ ನೆರವನ್ನು ಪಡೆದುಕೊಂಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೇನಾಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಟ್ರಾಮಾ ಕೇರ್ ನಲ್ಲಿ ಪರಿಣತಿ ಹೊಂದಿರುವವರಾಗಿದ್ದಾರೆ. ಯುದ್ಧ ಅಥವಾ ಇತರೆ ದಾಳಿ ಸಂದರ್ಭದಲ್ಲಿ ಗಾಯಗೊಂಡ ಯೋಧರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವ ತರಬೇತಿ ಅವರು ಹೊಂದಿರುತ್ತಾರೆ. ಅಗತ್ಯಬಿದ್ದರೆ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಇತರೆ ಆಸ್ಪತ್ರೆಗಳ ಸಹಾಯವನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೆಲಿಕಾಪ್ಟರ್ ಪತನ: ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರು ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರ
ಕಮಾಂಡ್ ಆಸ್ಪತ್ರೆಯು ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ (HBOT) ಚೇಂಬರ್ ಅನ್ನು ಹೊಂದಿದೆ, ಇದು ಸರಾಸರಿಗಿಂತ 1.5 ರಿಂದ 3 ಪಟ್ಟು ಶುದ್ಧ ಆಮ್ಲಜನಕವನ್ನು ಉಸಿರಾಡಲು ಬಳಸಲಾಗುತ್ತದೆ. HBOT ಅನ್ನು ಕಾರ್ಬನ್ ಮಾನಾಕ್ಸೈಡ್ ವಿಷಯುಕ್ತ ಗಾಳಿ, ಗ್ಯಾಂಗ್ರೀನ್, ಗಾಯಗಳು ಮತ್ತು ಸೋಂಕುಗಳ ಗುಣಪಡಿಸುವಿಕೆಯನ್ನು ವೇಗಗೊಳಿಸಲು ಬಳಸಲಾಗುತ್ತದೆ,
ತಜ್ಞರು ಮತ್ತು ಪ್ಲಾಸ್ಟಿಕ್ ಸರ್ಜನ್ ಸೇರಿದಂತೆ ವೈದ್ಯರ ತಂಡ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರಿಗೆ ಇತರ ದೈಹಿಕ ಗಾಯಗಳ ಜೊತೆಗೆ ಶೇಕಡಾ 85 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ್ದು, ವರುಣ್ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದಾರೆಂದು ತಿಳಿದುಬಂದಿದೆ