ಕೆ-ರೇರಾಗೆ ಪೂರ್ಣಾವಧಿ ಕಾರ್ಯದರ್ಶಿ ಬೇಡಿಕೆಗೆ ಹೆಚ್ಚಿದ ಒತ್ತಡ

ರಿಯಲ್ ಎಸ್ಟೇಟ್ ಪ್ರಾಧಿಕಾರ (ಕೆ- ರೇರಾ)ಗೆ ಪೂರ್ಣಾವಧಿ ಕಾರ್ಯದರ್ಶಿಗಳ ನೇಮಕಕ್ಕೆ ಒತ್ತಡ ಹೆಚ್ಚಾಗುತ್ತಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರಿಯಲ್ ಎಸ್ಟೇಟ್ ಪ್ರಾಧಿಕಾರ (ಕೆ- ರೇರಾ)ಗೆ ಪೂರ್ಣಾವಧಿ ಕಾರ್ಯದರ್ಶಿಗಳ ನೇಮಕಕ್ಕೆ ಒತ್ತಡ ಹೆಚ್ಚಾಗುತ್ತಿದೆ. 

ಇದೇ ಬೇಡಿಕೆಯನ್ನು ಈಡೇರಿಸುವ ಸಂಬಂಧ ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಕ್ಕಾಗಿ ಆಸ್ತಿ ಖರೀದಿದಾರರನ್ನು ಪ್ರತಿನಿಧಿಸುವ ವೇದಿಕೆಯೊಂದು ಯೋಜನೆ ಸಿದ್ಧಪಡಿಸಿದೆ. ಕೆ-ರೇರಾದ ಹಾಲಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. 

ಪೀಪಲ್ಸ್ ಕಲೆಕ್ಟೀವ್ ಎಫರ್ಟ್ಸ್ ಎಂಬ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಕೆ-ರೇರಾ ಸ್ಥಾಪನೆಯಾದಾಗಿನಿಂದಲೂ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ಜವಾಬ್ದಾರಿಗಳನ್ನು ಹೊಂದಿದ ವ್ಯಕ್ತಿಯನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. 

ರೇರಾ ಕೆಲಸಗಳಿಗಾಗಿಯೇ ಪ್ರತ್ಯೇಕ ಕಾರ್ಯದರ್ಶಿಯನ್ನು ಹೊಂದುವುದು ಬಹಳ ಮುಖ್ಯವಾಗುತ್ತದೆ. ಈ ವಿಭಾಗದ ಕಾರ್ಯದರ್ಶಿಗಳು ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ ರೇರಾ ಕಾಯ್ದೆಯ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಏಕಕಾಲದಲ್ಲಿ ಎರಡು ಹುದ್ದೆಗಳನ್ನು ನಿಭಾಯಿಸುವ ಅಧಿಕಾರಿಗಳಿಗೆ ರೇರಾ ಗೆ ಸಂಬಂಧಪಟ್ಟ ವಿಷಯಗಳಿಗೆ ನ್ಯಾಯ ಒದಗಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಶಂಕರ್ ಅಭಿಪ್ರಾಯಪಟ್ಟಿದ್ದಾರೆ. 

ಪ್ರೊಮೋಟರ್ ಗಳು ರೇರಾ ಆದೇಶಕ್ಕೆ ಬದ್ಧರಾಗಿರುವುದಿಲ್ಲ. ರೇರಾ ಕಾಯ್ದೆಯ ಸೆಕ್ಷನ್ 12, 14, 18 ಹಾಗೂ 19 ರ ಪ್ರಕಾರ ಗೃಹ ಖರೀದಿದಾರರಿಗೆ ಉಂಟಾಗಿದ್ದ ಸಮಸ್ಯೆಗೆ ಪರಿಹಾರ ನೀಡುವಂತೆ ಅಧಿಕಾರಿ ಪ್ರೊಮೋಟರ್ ಗಳಿಗೆ ಆದೇಶಿಸಿದ್ದರು. ಆದರೆ ಅವುಗಳನ್ನು ಪಾಲೆನ ಮಾಡಲಾಗುತ್ತಿಲ್ಲ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. 

ರೇರಾ ವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಕಂದಾಯ ವಸೂಲಾತಿ ವಿಭಾಗವನ್ನೂ ಪ್ರಾರಂಭಿಸಬೇಕು ಎಂದು ಶಂಕರ್ ಅಭಿಪ್ರಾಯಪಟ್ಟಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com