ಗಗನಯಾನ ರಾಕೆಟ್ ಮಾದರಿ ಒಂದೇ ಕಡೆ 550 ವಿದ್ಯಾರ್ಥಿಗಳಿಂದ ತಯಾರಿ: ಗಿನ್ನೆಸ್ ವಿಶ್ವ ದಾಖಲೆ ಮೇಲೆ ಚಿತ್ತ

ಭಾರತದ ಮಾನವಸಹಿತ ಮಿಷನ್ ಗಗನಯಾನ, ಕೋವಿಡ್ -19 ಕಾರಣ ಉಡಾವಣೆ 2023 ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲು, ಚಟುವಟಿಕೆಯನ್ನು ಕ್ರಿಯಾತ್ಮಕವಾಗಿ ಜೀವಂತವಾಗಿಡಲು ಯುವ ಮನಸ್ಸುಗಳನ್ನು ಪ್ರೇರೇಪಿಸಲು 550 ವಿದ್ಯಾರ್ಥಿಗಳನ್ನು ಸೇರಿಸಿ ಗಗನಯಾನ ಕ್ರಿಯಾತ್ಮಕ ರಾಕೆಟ್ ಮಾದರಿಯನ್ನು ಒಂದೇ
ಗಗನಯಾನ ರಾಕೆಟ್ ಮಾದರಿಯನ್ನು ಒಂದೇ ಕಡೆಯಲ್ಲಿ ತಯಾರಿಸಿದ 550 ವಿದ್ಯಾರ್ಥಿಗಳು
ಗಗನಯಾನ ರಾಕೆಟ್ ಮಾದರಿಯನ್ನು ಒಂದೇ ಕಡೆಯಲ್ಲಿ ತಯಾರಿಸಿದ 550 ವಿದ್ಯಾರ್ಥಿಗಳು

ಪಣಜಿ: ಭಾರತದ ಮಾನವಸಹಿತ ಮಿಷನ್ ಗಗನಯಾನ, ಕೋವಿಡ್ -19 ಕಾರಣ ಉಡಾವಣೆ 2023 ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲು, ಚಟುವಟಿಕೆಯನ್ನು ಕ್ರಿಯಾತ್ಮಕವಾಗಿ ಜೀವಂತವಾಗಿಡಲು ಯುವ ಮನಸ್ಸುಗಳನ್ನು ಪ್ರೇರೇಪಿಸಲು 550 ವಿದ್ಯಾರ್ಥಿಗಳನ್ನು ಸೇರಿಸಿ ಗಗನಯಾನ ಕ್ರಿಯಾತ್ಮಕ ರಾಕೆಟ್ ಮಾದರಿಯನ್ನು ಒಂದೇ ಸ್ಥಳದಲ್ಲಿ ಜೋಡಿಸಲು ಮುಂದಾಗಿದೆ.

2021 ರ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ (IISF) 2 ಗಂಟೆಗಳ ಕಾರ್ಯಾಚರಣೆ ನಂತರ 550 ವಿದ್ಯಾರ್ಥಿಗಳು ಜೋಡಿಸಿದ ಈ ಎಲ್ಲಾ ಕಾರ್ಯಕಾರಿ ಮಾದರಿ ರಾಕೆಟ್‌ಗಳನ್ನು ಇಸ್ರೋದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ಕಚೇರಿಯ ನಿರ್ದೇಶಕ ಎನ್ ಸುಧೀರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಣಜಿ ಜಿಮ್ಖಾನಾ ಮೈದಾನದಲ್ಲಿ ಇಸ್ರೋದ ಲಾಂಚ್ ಪ್ಯಾಡ್ ಬಳಸಿ ಉಡಾವಣೆ ಮಾಡಲಾಗುತ್ತದೆ. 

ದೇಶದ ಪ್ರಮುಖ ಅಂತರಿಕ್ಷ ಸಂಸ್ಥೆಗಳ ತಜ್ಞರ ಮೇಲ್ವಿಚಾರಣೆಯಲ್ಲಿ ಇಡೀ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ(IISF)ಗೋವಾದ ಪಣಜಿಯಲ್ಲಿ ಇಂದು ಉದ್ಘಾಟನೆಗೊಂಡಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಜಿಯಾಂಶು ಪೊಡ್ಡರ್ ಅವರ ಸ್ಟಾರ್ಟ್ ಅಪ್ ಸಂಸ್ಥೆ ರಾಕೆಟೀರ್ಸ್ (Rocketeers) ಮೂಲಕ.

ನಾವು ಕೇವಲ ರಾಕೆಟ್ ಜೋಡಣೆಯ ದಾಖಲೆಗೆ ಪ್ರಯತ್ನಿಸುತ್ತಿಲ್ಲ. ಕ್ರಿಯಾತ್ಮಕ 550 ಗಗನಯಾನ ಮಾದರಿ ರಾಕೆಟ್‌ ಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದೇವೆ. ಇವುಗಳನ್ನು ಪಣಜಿ ಜಿಮ್‌ಖಾನಾದಲ್ಲಿ ಉಡಾವಣೆ ಮಾಡಲಾಗುವುದು. 11 ನೇ ತರಗತಿಯ ವಿದ್ಯಾರ್ಥಿಗಳು ರಾಕೆಟ್‌ಗಳನ್ನು ಜೋಡಿಸಲು 60 ಸ್ವಯಂಸೇವಕರಿಂದ ತರಬೇತಿ ಪಡೆದಿದ್ದಾರೆ ಎಂದು ಒಂದೂವರೆ ಲಕ್ಷ ರಾಕೆಟ್‌ಗಳನ್ನು ಉಡಾವಣೆ ಮಾಡಿದ ಪೊದ್ದಾರ್ ಹೇಳುತ್ತಾರೆ.

ಪೊದ್ದಾರ್ ಅವರು 2012 ರಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ (IIST) ನಿಂದ ಪದವಿ ಪಡೆದರು. ಚಂದ್ರಯಾನ-2 ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ, ಅವರ ಬಾಹ್ಯಾಕಾಶ ಯಂತ್ರಶಾಸ್ತ್ರ ಗುಂಪಿನ ಭಾಗವಾಗಿ ISRO 2014 ರಲ್ಲಿ ವಿದ್ಯಾರ್ಥಿಗಳಿಗೆ ಮಾದರಿಗಳನ್ನು ಒದಗಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com