ಎಂಇಎಸ್ ಹಿರಿಯ ಮುಖಂಡ ದೀಪಕ್ ದಾಲ್ವಿ ಮುಖಕ್ಕೆ ಕಪ್ಪು ಮಸಿ: ನಾಳೆ ಬೆಳಗಾವಿ ಬಂದ್ ಗೆ ಕರೆ

ಬೆಳಗಾವಿಯ ತಿಲಕವಾಡಿಯ ಲಸಿಕೆ ಡಿಪೋ ಮೈದಾನದ ಹತ್ತಿರ ಇಂದು ಬೆಳಗ್ಗೆ ಮಹಾ ಮೇಳವ ಆಯೋಜಿಸಲು ಪ್ರಯತ್ನಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಿರಿಯ ಮುಖಂಡ ದೀಪಕ್ ದಾಲ್ವಿ ಅವರ ಮುಖಕ್ಕೆ ಕೆಲ ಕನ್ನಡಪರ ಸಂಘಟನೆಗಳ ಹೋರಾಟಗಾರರು ಕಪ್ಪು ಮಸಿ  ಬಳಿದ ನಂತರ ಪರಿಸ್ಥಿತಿ ಬಿಗಡಾಯಿಸಿತ್ತು. 
ಎಂಇಸಿ ಮುಖಂಡ ದೀಪಕ್ ದಾಲ್ವಿ ಮುಖಕ್ಕೆ ಮಸಿ ಬಳಿದಿರುವುದು
ಎಂಇಸಿ ಮುಖಂಡ ದೀಪಕ್ ದಾಲ್ವಿ ಮುಖಕ್ಕೆ ಮಸಿ ಬಳಿದಿರುವುದು

ಬೆಳಗಾವಿ: ಬೆಳಗಾವಿಯ ತಿಲಕವಾಡಿಯ ಲಸಿಕೆ ಡಿಪೋ ಮೈದಾನದ ಹತ್ತಿರ ಇಂದು ಬೆಳಗ್ಗೆ ಮಹಾ ಮೇಳವ ಆಯೋಜಿಸಲು ಪ್ರಯತ್ನಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಿರಿಯ ಮುಖಂಡ ದೀಪಕ್ ದಾಲ್ವಿ ಅವರ ಮುಖಕ್ಕೆ ಕೆಲ ಕನ್ನಡಪರ ಸಂಘಟನೆಗಳ ಹೋರಾಟಗಾರರು ಕಪ್ಪು ಮಸಿ  ಬಳಿದ ನಂತರ ಪರಿಸ್ಥಿತಿ ಬಿಗಡಾಯಿಸಿತ್ತು. 

ಇದರಿಂದ ಆಕ್ರೋಶಗೊಂಡಿರುವ ಎಂಇಎಸ್ ಮುಖಂಡರು ನಾಳೆ ಬೆಳಗಾವಿ ಬಂದ್ ಗೆ ಕರೆ ನೀಡಿದ್ದಾರೆ. ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಖಾನಪುರ ಮತ್ತು ನಿಪ್ಪಾಣಿಯ ಎಂಇಎಸ್ ಮುಖಂಡರು ಕೂಡಾ ನಾಳೆ ಬಂದ್ ಗೆ ಕರೆ ನೀಡಿದ್ದಾರೆ. 

ಬೆಳಗಾವಿಯಲ್ಲಿ ಸರ್ಕಾರ ಚಳಿಗಾಲದ ಅಧಿವೇಶನ ನಡೆಸುತ್ತಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಮಹಾ ಮೇಳವ್ ಆಯೋಜಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com