
ಬಂಧಿತ ದರೋಡೆಕೋರರು
ಬಳ್ಳಾರಿ: ಬಳ್ಳಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4 ದರೋಡೆಕೋರರ ಬಂಧಿಸಿ 41 ಲಕ್ಷ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ನಗರದ ಬಂಗಾರದ ಅಂಗಡಿಯ 41 ಲಕ್ಷ ರೂ ಹಣವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವಾತನ ಮೇಲೆ ಹಲ್ಲೆ ಮಾಡಿ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದ ನಾಲ್ವರನ್ನು ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರು ಘಟನೆ ನಡೆದ ದಿನವೇ ಹಣ ಸಮೇತ ಬಂಧಿಸಿದ್ದಾರೆ.
#Ballari Brucepet police recovered the Rs 41 lakh from robbers on Monday. Four people arrested and case has been registered @NewIndianXpress @XpressBengaluru @KannadaPrabha @santwana99 @ramupatil_TNIE @Amitsen_TNIE @SaiduluNaik @112Ballari @BellaryNamma @Bellarymerijaan pic.twitter.com/XnHSYQpMFj
— @Kiran_TNIE (@KiranTNIE1) December 13, 2021
ಈ ಬಗ್ಗೆ ಎಸ್ಪಿ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು. ಚಿನ್ನಾಭರಣದ ಅಂಗಡಿಯ ಕೆಲಸಗಾರ ಮೆಹಬೂಬ್ ಭಾಷ ಎಂಬಾತ ಹಣವನ್ನು ತೆಗೆದುಕೊಂಡು ಬೆಂಗಳೂರಿಗೆ ಹೊರಟಿದ್ದನಂತೆ ಆತ ನಗರದ ಗಡಗಿ ಚೆನ್ನಪ್ಪ ಸರ್ಕಲ್ ಬಳಿಯ ಪಶು ಆಸ್ಪತ್ರೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆತನಿಗೆ ಹಲ್ಲೆ ಮಾಡಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ತಕ್ಷಣ ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರು ಕಾರ್ಯಪ್ರವೃತ್ತರಾಗಿ ಹಣ ಕದ್ದ ನಗರದ ಬಂಡಿಮೋಟ್ ನ ಅಸಾದ್ (25), ಗುಗ್ಗರಹಟ್ಟಿಯ ರಸೂಲ್(35), ಕೋಟೆ ಪ್ರದೇಶದ ವೆಂಕಟೇಶ್ (34) ಮತ್ತು ಜಾಗೃತಿ ನಗರದ ಧರವೇಶ್ (28) ಅವರನ್ನು ಬಂಧಿಸಿದ್ದು ಕದ್ದ 41 ಲಕ್ಷ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.